ತೆಲುಗು ಕಿರುತೆರೆಗೆ ಕಾಲಿಟ್ಟ 'ಅಂತರಪಟ' ನಟಿ ಪ್ರತಿಮಾ; ಯಾವ ಧಾರಾವಾಹಿ ಗೊತ್ತಾ?

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಅನೇಕರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿಯಾದ ಸಂಗತಿ. ಅಷ್ಟೇ ಅಲ್ಲದೇ ಇದರ ಜೊತೆಗೆ ಕನ್ನಡ ಕಿರುತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟ ನಟಿಯರು ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ.

ಶೋಭಾ ಶೆಟ್ಟಿ, ಚಂದು ಗೌಡ, ರಕ್ಷಾ ಹೊಳ್ಳ, ರಚಿತಾ ಮಹಾಲಕ್ಷ್ಮಿ, ಚಂದನ್ ಕುಮಾರ್, ಅನ್ವಿತಾ, ದಿಲೀಪ್ ಶೆಟ್ಟಿ, ಪ್ರಿಯಾಂಕಾ, ಐಶ್ವರ್ಯಾ ಪಿಸ್ಸೆ, ಚೈತ್ರಾ ರೆಡ್ಡಿ, ದೀಪ್ತಿ ಮನ್ನೆ, ಸ್ವಾಮಿನಾಥನ್ ಅನಂತರಾಮನ್, ಪೃಥ್ವಿರಾಜ್, ಜಯ್ ಡಿಸೋಜಾ, ಮಾನ್ಸಿ ಜೋಷಿ, ರಶ್ಮಿ ಪ್ರಭಾಕರ್, ಅಕ್ಷತಾ ದೇಶಪಾಂಡೆ ಹೀಗೆ ಪರಭಾಷೆಯ ಕಿರುತೆರೆಗೆ ಕಾಲಿಟ್ಟು ಅಲ್ಲಿ ನಟನಾ ಕಂಪನ್ನು ಪಸರಿಸುವ ನಟ ನಟಿಯರಿಗೇನು ಕಡಿಮೆಯಿಲ್ಲ.

Actress Prathima entered telugu television do you know which serial

ಇದೀಗ ಆ ಸಾಲಿಗೆ ನಟಿ ಪ್ರತಿಮಾ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ನಟಿಸಿರುವ ಪ್ರತಿಮಾ ಇದೀಗ ಪರಭಾಷೆಯ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ. ಹೌದು, 'ಅಂತರಪಟ' ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಅವರ ಮಲತಂಗಿ ಸಿರಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು ಪ್ರತಿಮಾ.

ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಿರುವಾಗ ಈಕೆ ಇದೀಗ ಪರಭಾಷೆಯ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಅದು ಕೂಡಾ ನಾಯಕಿಯಾಗಿ. ಹೌದು, ಸನ್​ ನೆಟ್​ವರ್ಕ್ ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸಿವಂಗಿ'ಯಲ್ಲಿ ನಟಿ ಪ್ರತಿಮಾ ನಟಿಸಲಿದ್ದಾರೆ.

Actress Prathima entered telugu television do you know which serial

'ಸಿವಂಗಿ' ಧಾರಾವಾಹಿ ಕಥೆ ವಿಭಿನ್ನವಾಗಿದ್ದು, ಅದರಲ್ಲಿ ನಾಯಕಿ ಆನಂದಿ ಪಾತ್ರದಲ್ಲಿ ನಟಿ ಪ್ರತಿಮಾ ಅಭಿನಯಿಸಲಿದ್ದಾರೆ. ಪಕ್ಕಾ ಹಳ್ಳಿ ಹುಡುಗಿಯಾಗಿರುವ ಆನಂದಿ ಸದಾ ಕಾಲ ಲಂಗ ಧಾವಣಿ ತೊಟ್ಟುಕೊಂಡು ಓಡಾಡುತ್ತಿರುವ ಬೆಡಗಿ. ತನ್ನ ಕುಟುಂಬಕ್ಕೆ ಸದಾ ಕಾಲ ಬೆನ್ನುಲುಬಾಗಿ ನಿಲ್ಲುವ ಆನಂದಿ ಯಾವತ್ತಿಗೂ ಖುಷಿಯಾಗಿರುವ ಹುಡುಗಿ.

ಮಾತ್ರವಲ್ಲ ತನ್ನ ಸುತ್ತಮುತ್ತಲು ಇರುವವರನ್ನು ಕೂಡಾ ಖುಷಿಯಲ್ಲಿ ಇರುವಂತೆ ಆಕೆ ನೋಡಿಕೊಳ್ಳುತ್ತಾಳೆ. ಇನ್ನು ಯಾರಾದರೂ ಕಷ್ಟ ಎಂದಜ ಮುಂದೆ ಬಂದರೆ ಸಾಕು ಅವರ ಪಾಲಿಗೆ ಆನಂದಿಯೇ ದೇವತೆ. ಒಟ್ಟಿನಲ್ಲಿ ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಈ ಧಾರಾವಾಹಿಯು ಇದೇ ಮಾರ್ಚ್​ 25ರಂದು ಜೆಮಿನಿ ತೆಲುಗಿನಲ್ಲಿ ಮೂಡಿ ಬರಲಿದೆ.

More from Filmibeat

English summary
Actress Prathima entered the television screen through supporting roles has entered the telugu tv as a heroine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X