'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ಮೋಡಿ ಮಾಡುತ್ತಿರುವ ಈ ನಟಿಯ ಯಾರು? ಹಿನ್ನೆಲೆಯೇನು?

By ಅನಿತಾ ಬನಾರಿ

'ಬ್ರಹ್ಮಗಂಟು' ಎಂಬ ಹೊಸದೊಂದು ಧಾರಾವಾಹಿ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಬಹಳ ವಿಭಿನ್ನ ಕಥಾಹಂದರವನ್ನೊಳಗೊಂಡ ಈ ಧಾರಾವಾಹಿ ಈಗಾಗಲೇ ಜನಮನ ಸೆಳೆಯುತ್ತಿದೆ. ಇದರಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಪ್ರೀತಿ ಶ್ರೀನಿವಾಸ್.

ನಾನು ಹೇಳಿದ ಹಾಗೆ ಎಲ್ಲವೂ ನಡೆಯಬೇಕು ಎಂಬ ಗತ್ತನ್ನು ತೋರಿಸಿಕೊಂಡು ಕಥಾನಾಯಕನಿಗೆ ಯಾವುದೇ ರೀತಿಯಲ್ಲಿಯೂ ತನ್ನ ತಾಯಿಯ ನೆನಪಾಗದಂತೆ ನೋಡಿಕೊಳ್ಳುವ ಅತ್ತಿಗೆಯ ಪಾತ್ರದಲ್ಲಿ ನಟಿ ಪ್ರೀತಿ ಶ್ರೀನಿವಾಸ್ ತೆರೆ ಮುಂದೆ ಕಾಣಿಸುತ್ತಿದ್ದಾರೆ. ಸೌಂದರ್ಯ ಎಂಬ ಹೆಸರಿನ ಈ ಪಾತ್ರಕ್ಕೆ ತಕ್ಕಂತೆ ಸೌಂದರ್ಯಕ್ಕೆ ಹೆಚ್ಚಿನ ಬೆಲೆ ಕೊಡುವ ಈಕೆ ಇದೀಗ ತನ್ನ ಮೈದುನನಿಗೆ ಮದುವೆ ಮಾಡಿಸುವ ಹುನ್ನಾರದಲ್ಲಿದ್ದಾಳೆ. ಇಂತಹದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಪ್ರೀತಿ ಶ್ರೀನಿವಾಸ ಬಗ್ಗೆ ಸಹಜವಾಗಿ ಪ್ರೇಕ್ಷಕರಿಗೆ ಒಂದಷ್ಟು ಕುತೂಹಲ ಎದ್ದಿದೆ.

Actress Preethi Srinivas is charming through a different role

ಒಂದಷ್ಟು ಕಿರುತೆರೆ ವೀಕ್ಷಕರಿಗೆ ಈ ನಟಿಯನ್ನು ಈ ಮೊದಲು ಎಲ್ಲೋ ನೋಡಿದ್ದೇನೆ ಎಂದು ಎನಿಸಿರಬಹುದು. ಹೌದು ಈ ಮೊದಲು ನಟಿ ಪ್ರೀತಿ ಶ್ರೀನಿವಾಸ್ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಕನ್ನಡದ ಹಲವಾರು ಇತರೆ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಪ್ರೀತಿ ಶ್ರೀನಿವಾಸ್ ಅವರು ತೆಲುಗು ಕಿರುತೆರೆಯಲ್ಲಿ ಬಹಳ ಫೇಮಸ್ಸು. 'ಪದಮತಿ ಸಂಧ್ಯಾ ರಾಗ' ಎಂಬ ತೆಲುಗು ಧಾರಾವಾಹಿಯಿಂದ ಪರಭಾಷೆಯ ಕಿರುತೆರೆಯಲ್ಲಿಯೂ ಬಹಳಷ್ಟು ಖ್ಯಾತಿ ಪಡೆದರು ನಟಿ ಪ್ರೀತಿ ಶ್ರೀನಿವಾಸ್.

Actress Preethi Srinivas is charming through a different role

ಈ ಧಾರಾವಾಹಿ ನಂತರ ಕನ್ನಡಕ್ಕೆ 'ಸಂಧ್ಯಾರಾಗ' ಎಂಬ ಟೈಟಲ್‌ನಲ್ಲಿ ಡಬ್ ಕೂಡಾ ಆಗಿತ್ತು. ನಟಿ ಪ್ರೀತಿ ಶ್ರೀನಿವಾಸ್ ಅವರು ಹೆಚ್ಚಾಗಿ ತೆಲುಗು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿರುವ ನಟಿ ಪ್ರೀತಿ ಶ್ರೀನಿವಾಸ್ ಅವರು ತೆಲುಗು ಧಾರವಾಹಿಗಳ ಶೂಟಿಂಗ್ ಇದ್ದಾಗಲೆಲ್ಲ ಹೈದರಾಬಾದ್‌ಗೆ ಹೋಗಿ ಬರುತ್ತಿರುತ್ತಾರೆ.

ಸಮಯ ಸಿಕ್ಕಾಗೆಲ್ಲ ತಮ್ಮ ಮುದ್ದಾದ ಮಗ ಹೃದಯ್ ಜೊತೆ ಹೆಚ್ಚಿನ ಸಮಯವನ್ನು ಕಳೆಯುವ ನಟಿ ಪ್ರೀತಿ ಶ್ರೀನಿವಾಸ್ ಅವರು ಆಗಾಗ ಪತಿಯೊಂದಿಗೆ ಟ್ರಿಪ್‌ಗಳಿಗೂ ಹೋಗುತ್ತಿರುತ್ತಾರೆ. ಸದ್ಯಕ್ಕೆ ಬಹಳ ಗತ್ತು, ತಾಕತ್ತು ಇರುವ ಸೌಂದರ್ಯ ಎಂಬ ಪಾತ್ರದ ಮೂಲಕ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಪ್ರೀತಿ ಶ್ರೀನಿವಾಸ್ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವುದರಲ್ಲಿ ಸಂಶಯವಿಲ್ಲ.

More from Filmibeat

English summary
Actress Preethi Srinivas is entertaining television viewers for the first time with the negative role
Read more about: actress anitha banari ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X