For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಖರೀದಿಸುವಾಗಲೇ ಎನ್‌ಸಿಬಿ ಬಲೆಗೆ ಬಿದ್ದ ನಟಿ ಪ್ರೀತಿಕಾ

  |

  ಸುಶಾಂತ್ ಸಿಂಗ್ ಪ್ರಕರಣದಿಂದಾ ಹೊರಬಿದ್ದಿರುವ ಬಾಲಿವುಡ್‌ನ ಡ್ರಗ್ಸ್ ಕರ್ಮಕಾಂಡ ಬೆಳೆಯುತ್ತಲೇ ಇದೆ. ನಟಿಯೊಬ್ಬರು ಡ್ರಗ್ಸ್‌ ಖರೀದಿಸುವಾಗಲೇ ಎನ್‌ಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ.

  ಪ್ರಖ್ಯಾತ ಟಿವಿ ನಟಿ ಪ್ರೀತಿಕಾ ಚೌಹಾಣ್ ನಿನ್ನೆ ಮಾದಕ ವಸ್ತು ಮಾರಾಟಗಾರನಿಂದ ಗಾಂಜಾ ಖರೀದಿಸಬೇಕಾದರೆ ನೇರವಾಗಿ ಎನ್‌ಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ.

  ಎನ್‌ಸಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಸುಶಾಂತ್ ಮನೆ ಸಹಾಯಕಎನ್‌ಸಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಸುಶಾಂತ್ ಮನೆ ಸಹಾಯಕ

  ಮುಂಬೈನ ವರ್ಸೋವಾ ಬಳಿ ಫೈಸಲ್ ಎಂಬಾತನಿಂದ ಟಿವಿ ನಟಿ ಪ್ರೀತಿಕಾ ಚೌಹಾಣ್ ಗಾಂಜಾ ಖರೀದಿಸಿದ್ದಾರೆ. ಇದೇ ಸಮಯ ದಾಳಿ ಮಾಡಿದ ಎನ್‌ಸಿಬಿ ತಂಡವು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇಬ್ಬರಿಂದ 99 ಗ್ರಾಂ ಗಾಂಜಾ ಖರೀದಿ ವಶಪಡಿಸಿಕೊಳ್ಳಲಾಗಿದೆ.

  ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಪ್ರೀತಿಕಾ

  ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಪ್ರೀತಿಕಾ

  ನಟಿ ಪ್ರೀತಿಕಾ ಚೌಹಾಣ್ ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಖ್ಯಾತಿ ಪಡೆದಿರುವ ಸಾವಧಾನ್ ಇಂಡಿಯಾ, ದೇವೋಂಕಾ ದೇವ್ ಮಹಾದೇವ್ ಧಾರಾವಾಹಿಗಳಲ್ಲಿ ಸಹ ನಟಿ ಪ್ರೀತಿಕಾ ನಟಿಸಿದ್ದಾರೆ.

  ಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ಬಂಧನಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ಬಂಧನ

  ಶನಿವಾರ-ಭಾನುವಾರ 24 ಕಡೆ ರೇಡ್

  ಶನಿವಾರ-ಭಾನುವಾರ 24 ಕಡೆ ರೇಡ್

  ಶನಿವಾರ ಮತ್ತು ಭಾನುವಾರ ಒಟ್ಟು 24 ರೇಡ್‌ ಗಳನ್ನು ಎನ್‌ಸಿಬಿ ಮಾಡಿದ್ದು, ಟಿವಿ ನಟಿ ಪ್ರೀತಿಕಾ ಸೇರಿದಂತೆ ಇನ್ನೂ ಆರು ಜನರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

  ಬಾಲಿವುಡ್‌ ಡ್ರಗ್ಸ್ ಪ್ರಕರಣಕ್ಕೆ ಅಂತರರಾಷ್ಟ್ರೀಯ ನಂಟು?

  ಬಾಲಿವುಡ್‌ ಡ್ರಗ್ಸ್ ಪ್ರಕರಣಕ್ಕೆ ಅಂತರರಾಷ್ಟ್ರೀಯ ನಂಟು?

  ಬಾಲಿವುಡ್‌ನ ಡ್ರಗ್ಸ್ ಪ್ರಕರಣಕ್ಕೆ ಅಂತರರಾಷ್ಟ್ರೀಯ ಸಂಬಂಧವಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ. ವಿದೇಶಗಳಿಂದ ಮಾದಕ ವಸ್ತುವು ಮುಂಬೈ ಮಹಾನಗರಕ್ಕೆ ವಿವಿಧ ಮೂಲಗಳಿಂದ ಬರುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳಿಗೆಂದೇ ವಿಶೇಷವಾಗಿ ಕೆಲವೆಡೆಗಳಿಂದ ಡ್ರಗ್ಸ್ ಬರುತ್ತಿದೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ನಟ ಅರ್ಜುನ್ ರಾಂಪಲ್ ಪ್ರೇಯಸಿಯ ಸಹೋದರನ ಬಂಧನನಟ ಅರ್ಜುನ್ ರಾಂಪಲ್ ಪ್ರೇಯಸಿಯ ಸಹೋದರನ ಬಂಧನ

  ಜಗಮೆಚ್ಚಿದ ನಿರ್ದೇಶಕ Rajamouli ಮೇಲೆ ಕಂಪ್ಲೇಂಟ್ | Filmibeat Kannada
  ಹಲವು ಖ್ಯಾತನಾಮರ ವಿಚಾರಣೆ

  ಹಲವು ಖ್ಯಾತನಾಮರ ವಿಚಾರಣೆ

  ಡ್ರಗ್ಸ್ ಪ್ರಕರಣದ ತನಿಖೆ ಚುರುಕಾಗಿ ಸಾಗುತ್ತಿದ್ದು, ಹಲವು ಬಾಲಿವುಡ್ ದಿಗ್ಗಜರನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಇನ್ನೂ ಹಲವು ಖ್ಯಾತನಾಮರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ.

  English summary
  TV actress Preethika Chauhan arrested by NCB while purchasing Marijuana from a drug peddler.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X