ಹೂ ಕಟ್ಟುತ್ತಾ ಕ್ಯಾಮರಾ ಮುಂದೆ ಕೂತ 'ಗಟ್ಟಿಮೇಳ'ದ ನಟಿ; ಶಾಕುಂತಲೆ ಸಿಕ್ಕಳು ಎಂದ ನೆಟ್ಟಿಗರು!
ತಮ್ಮ ನಟನೆಯಿಂದ ಕಿರುತೆರೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದ 'ಗಟ್ಟಿಮೇಳ' ಧಾರಾವಾಹಿ ಖ್ಯಾತಿಯ ಪ್ರಿಯಾ ಜೆ ಆಚಾರ್ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು ಇನ್ನಷ್ಟು ಹೈಪ್ ಕ್ರಿಯೇಟ್ ಮಾಡಿದ್ದಾರೆ. 'ಪಾರು' ಧಾರಾವಾಹಿ ನಟ ಸಿದ್ದು ಮೂಲಿಮನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮೀಡಿಯಾ, ನಟನೆ ಸೇರಿದಂತೆ ಎಲ್ಲದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ನಟಿ ಇದೀಗ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದ ಪ್ರಿಯಾ ನಂತರ ಸಾಕಷ್ಟು ಜನಪ್ರಿಯತೆ ಗಳಿಸಿದರು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಅವರು ಅದಿತಿ ಎಂಬ ಪಾತ್ರವನ್ನು ನಿಭಾಯಿಸಿದ್ದರು. ಮಾತ್ರವಲ್ಲದೇ ಆ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನೆ ಮನ ಸೆಳೆದಿದ್ದರು. ಇನ್ನು ಧಾರಾವಾಹಿ ಮಾತ್ರವಲ್ಲದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಪ್ರಿಯಾ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಕಿರುತೆರೆಯ ಜೊತೆಗೆ ಹಿರಿತೆರೆಗೂ ಈ ಚೆಲುವೆ ಕಾಲಿಟ್ಟದ್ದಾಗಿದೆ. ಹೌದು, 'ಧಮಾಕಾ' ಸಿನಿಮಾದ ಮೂಲಕ ಪ್ರಿಯಾ ಜೆ ಆಚಾರ್ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದು, ಅಲ್ಲಿಯೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಅಲ್ಲದೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ಫೋಟೋಗಳು, ಮಾಹಿತಿ ಸೇರಿದಂತೆ ಏನಾದರೊಂದನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ, ಮೊನ್ನೆ ಪ್ರಿಯಾ ಶೇರ್ ಮಾಡಿದ ಫೋಟೋಗಳು ಈ ಹಿಂದೆ ಶೇರ್ ಮಾಡಿದ ಫೋಟೋಗಳಿಗಿಂತ ವಿಭಿನ್ನವಾಗಿತ್ತು. ಹಾಗಾಗಿ ಇದು ಸಖತ್ ವೈರಲ್ ಕೂಡ ಆಯ್ತು.

ಹೂ ಕಟ್ಟುತ್ತಾ ಕುಳಿತಿರುವ ಭಂಗಿಯ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಕೆಲವರಂತೂ ತಮ್ಮ ನೆಚ್ಚಿನ ನಟಿಯ ಬಗ್ಗೆ ಮೆಚ್ಚುಗೆಯ ಕಮೆಂಟ್‌ಗಳನ್ನು ಹೇಳಿದ್ದಾರೆ. ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದೀರಿ ಎಂದು ಹೊಗಳಿದ್ದಾರೆ.
ಅಂದಹಾಗೆ, ಕನ್ನಡ ಮಾತ್ರವಲ್ಲದೇ ನಟಿ ಪ್ರಿಯಾ ಆಚಾರ್ ತೆಲುಗಿನಲ್ಲೂ ನಟಿಸಿದ್ದಾರೆ. ತೆಲುಗಿನ 'ಆನಂದಮಯಂ' ಎಂಬ ಧಾರಾವಾಹಿಯಲ್ಲಿ ಪ್ರಿಯಾ ಬಣ್ಣ ಹಚ್ಚಿದ್ದು ನಾಯಕಿಯಾಗಿ ಮೋಡಿ ಮಾಡಿದ್ದಾರೆ. ಇದರ ಜೊತೆಗೆ ಇದೀಗ ಆಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕಿ ಕಾವೇರಿಯಾಗಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











