ಐದು ವರ್ಷಗಳ ಸುದೀರ್ಘ ಗ್ಯಾಪ್ ನಂತರ ಕಿರುತೆರೆಗೆ ಮರಳಿದ ಪ್ರಿಯಾ ಕೆಸರೆ; ಯಾವ ಸೀರಿಯಲ್?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'. ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ 'ಆಸೆ' ಧಾರಾವಾಹಿಯು ಕಥೆಯ ಹೊರತಾಗಿ ಪಾತ್ರವರ್ಗದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದೆ.

'ಆಸೆ' ಧಾರಾವಾಹಿಯಲ್ಲಿ ನಾಯಕ ಸೂರ್ಯನ ಅಣ್ಣ ಮನೋಜ್ ಪ್ರೇಯಸಿ ಪಾತ್ರದಲ್ಲಿ ಪ್ರಿಯಾ ಕೆಸರೆ ನಟಿಸುತ್ತಿದ್ದಾರೆ . ಈ ಧಾರಾವಾಹಿಯಲ್ಲಿ ನಟಿ ಛಾಯಾ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ನಟಿ ಪ್ರಿಯಾ ಕೆಸರೆ ಕಂ ಬ್ಯಾಕ್ ಮಾಡಿದ್ದಾರೆ.

Actress Priya Kesare is back on television after a long gap of five years

ಅಂದ ಹಾಗೇ ಪ್ರಿಯಾ ಕೆಸರೆ ಎಂದ ತಕ್ಷಣ ವೀಕ್ಷಕರಿಗೆ ನೆನಪಾಗುವುದು ಕೊಂಚ ಕಷ್ಟ. ಯಾಕೆಂದರೆ ಆಕೆ ಭಾವನಾ ಎಂದೇ ಕಿರುತೆರೆಯಲ್ಲಿ ಫೇಮಸ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಖಳನಾಯಕಿ ಭಾವನಾ ಆಗಿ ನಟಿಸಿದ್ದರು ಪ್ರಿಯಾ ಕೆಸರೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಒಂದೆರಡು ಧಾರಾವಾಹಿಯಲ್ಲಿ ನಟಿಸಿದ್ದ ಈಕೆ ನಂತರ ತಾಯಿಯಾಗುತ್ತಿರುವ ಸಂತಸದ ಸಂಗತಿಯನ್ನು ಹಂಚಿಕೊಂಡಿದ್ದರು.

ಮಗನ ಲಾಲನೆ, ಪಾಲನೆಯ ಸಲುವಾಗಿ ಮೂರು ವರ್ಷಗಳ ಕಾಲ ನಟನೆಯಿಂದ, ಕೆರಿಯರ್‌ನಿಂದ ಪ್ರಿಯಾ ಕೆಸರೆ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಬಣ್ಣ ಹಚ್ಚಿರುವ ಆಕೆ ಒಂದು ಒಳ್ಳೆಯ ಕಥೆ ಹಾಗೂ ಪಾತ್ರದ ಮೂಲಕ ಕಿರುತೆರೆಗೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ಛಾಯಾ ಎನ್ನುವ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದೇನೆ. ಐದು ವರ್ಷದ ನಂತರ ಒಂದು ಒಳ್ಳೆಯ ಪಾತ್ರದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಪ್ರಿಯಾ ಕೆಸರೆ ಹೇಳಿಕೊಂಡಿದ್ದಾರೆ.

Actress Priya Kesare is back on television after a long gap of five years

"ಮಗನ ಸಲುವಾಗಿ ನಾನು ನಟನೆಯಿಂದ ದೂರ ಉಳಿಯಬೇಕಾಯಿತು. ನಂತರ ಕಿರುತೆರೆಯಿಂದ ಆಫರ್ ಗಳು ಬರಲಾರಂಭಿಸಿತು. ನಾನು ಕೂಡಾ ಕಂ ಬ್ಯಾಕ್‌ಗೆ ಆಲೋಚಿಸುತ್ತಿದ್ದು ತೂಕದ ಪಾತ್ರಕ್ಕಾಗಿ ಕಾಯುತ್ತಿದ್ದೆ. ಛಾಯಾ ಪಾತ್ರದ ಬಗ್ಗೆ ಕೇಳುವಾಗ ಸೊಗಸಾಗಿದೆ ಎಂದು ಅನ್ನಿಸಿತು. ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಒಂದು ಉತ್ತಮ ಪಾತ್ರ ಎಂದೆನಿಸಿತು. ಹಾಗಾಗಿ ಥಟ್ಟನೇ ಒಪ್ಪಿಕೊಂಡೆ" ಎಂದು ಫಿಲ್ಮಿಬೀಟ್ ಜೊತೆ ಪ್ರಿಯಾ ಕೆಸರೆ ಹಂಚಿಕೊಂಡಿದ್ದಾರೆ.

"ಮತ್ತೆ ಬಣ್ಣ ಹಚ್ಚುತ್ತಿರುವುದು ನಟಿಯಾಗಿ ನನಗೆ ತುಂಬಾ ಖುಷಿಯಾಗುತ್ತಿದೆ. 12 ವರ್ಷಗಳ ಮೊದಲು, ಮೊದಲ ಬಾರಿ ನಟಿಸಿದಾಗ ಹೇಗನ್ನಿಸಿತೋ ಈಗಲೂ ಹಾಗೆ ಅನ್ನಿಸುತ್ತಿದೆ. ಹನ್ನೆರಡು ವರ್ಷದ ಮೊದಲಿಗೂ ಈಗಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಟೆಕ್ನಿಕಲ್‌ಗೆ ಸಂಬಂಧಿಸಿದ ವಿಚಾರಗಳಲ್ಲಿ ಅಗಾಧವಾದ ಬದಲಾವಣೆಯಾಗಿದೆ. ಜೊತೆಗೆ ಈಗಿನ ಹೊಸ ಕಲಾವಿದರುಗಳೊಂದಿಗೆ ನಟಿಸುವ ಸುವರ್ಣಾವಕಾಶ ನನಗೆ ದೊರಕಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಪ್ರಿಯಾ ಕೆಸರೆ ಮಾಹಿತಿ ಹಂಚಿಕೊಂಡಿದ್ದಾರೆ.

More from Filmibeat

English summary
Priya Kesare who returned to television through the serial Aase. She started her second innings on television with the role of Chhaya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X