'ಮನಸಾರೆ' ಧಾರಾವಾಹಿಯನ್ನು ಮನಸಾರೆ ಸ್ಮರಿಸಿದ ನಟಿ ಪ್ರಿಯಾಂಕ ಚಿಂಚೋಳಿ

By ಅನಿತಾ ಬನಾರಿ

ನಟಿ ಪ್ರಿಯಾಂಕ ಚಿಂಚೋಳಿ ಕನ್ನಡ ಕಿರುತೆರೆಗೆ ಹೊಸಬರೇನಲ್ಲ. 'ಹನುಮಾನ್' ಹಾಗೂ 'ಹರ ಹರ ಮಹಾದೇವ' ಅಂತಹ ಎರಡು ಅದ್ಭುತ ಧಾರಾವಾಹಿಗಳಲ್ಲಿ ನಟಿಸಿದ ಇವರು ಜನರಿಗೆ ಚಿರಪರಿಚಿತರಾಗಿದ್ದು 'ಮನಸಾರೆ' ಧಾರಾವಾಹಿಯಿಂದ. ಹೌದು, 'ಮನಸಾರೆ' ಧಾರಾವಾಹಿಯಲ್ಲಿ ಪ್ರಾರ್ಥನಾ ಎಂಬ ನಾಯಕಿ ಪಾತ್ರವನ್ನು ಅದ್ಭುತವಾಗಿ ನಟಿಸಿರುವ ನಟಿ ಪ್ರಿಯಾಂಕಾ ಚಿಂಚೋಳಿಯವರು ತಂದೆ ಮಗಳ ಬಾಂಧವ್ಯದ ಬಗ್ಗೆ ಭಾವನಾತ್ಮಕವಾದ ಕಥೆಯನ್ನು ಪ್ರತಿಬಿಂಬಿಸಿದ್ದಾರೆ.

'ಮನಸಾರೆ' ಧಾರಾವಾಹಿಯ ಮೊದಲು 'ಹರ ಹರ ಮಹಾದೇವ' ಧಾರಾವಾಹಿಯ ಪಾರ್ವತಿ ಆಗಿ ಕಿರುತೆರೆಗೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ 'ಹನುಮಾನ್' ಧಾರಾವಾಹಿಯಲ್ಲಿ ಆಂಜನೇಯನ ಅಮ್ಮ ಅಂಜನಾದೇವಿಯಾಗಿ ಕಾಣಿಸಿಕೊಂಡರು. ಅದು ಪೌರಾಣಿಕ ಕಥೆಗಳಾದ್ದರಿಂದ ಪ್ರಿಯಾಂಕಾ ಅವರನ್ನು ಪ್ರೇಕ್ಷಕರು ಅಷ್ಟೇನೂ ಗುರುತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಮನಸಾರೆ ಧಾರಾವಾಹಿ ಕೈಗೆ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡಿದ್ದರು.

'ಮನಸಾರೆ' ತಂದೆ ಮಗಳ ಭಾಂದವ್ಯ

'ಮನಸಾರೆ' ತಂದೆ ಮಗಳ ಭಾಂದವ್ಯ

'ಮನಸಾರೆ' ಧಾರವಾಹಿಯಲ್ಲಿ ಪ್ರಾರ್ಥನಾ ಎಂಬ ಮಗಳು ತನ್ನ ತಂದೆಯ ಪ್ರೀತಿಯನ್ನು ಪಡೆಯಲು ಏನೆಲ್ಲ ಮಾಡುತ್ತಾಳೆ ಎಂಬುದೇ ಮುಖ್ಯ ಕಥಾವಸ್ತು. ಈ ಧಾರಾವಾಹಿ ಅನುಭವದ ಬಗ್ಗೆ ಮಾತನಾಡಿದ ನಟಿ ಪ್ರಿಯಾಂಕಾ ಚಿಂಚೋಳಿಯವರು "ಪೌರಾಣಿಕ ಧಾರವಾಹಿಗಳ ಹೊರತಾಗಿಯೂ ನನಗೆ ಬೇರೆ ದೈನಂದಿನ ಪಾತ್ರಗಳನ್ನು ಮಾಡಲು ಬರುತ್ತದೆ ಎಂಬುದನ್ನು ಸಾಬೀತು ಮಾಡಬೇಕಿತ್ತು. ಅದಕ್ಕೆ ಸರಿಯಾಗಿ ಮನಸಾರೆ ಧಾರಾವಾಹಿ ಸಿಕ್ಕಾಗ ನನ್ನಾಸೆಗೆ ಪೂರಕವಾದ ಬುನಾದಿ ಇದು ಎಂದು ಅರಿವಾಯಿತು. ಹಾಗಾಗಿ ಮನಸಾರೆ ಧಾರಾವಾಹಿಯನ್ನು ಒಪ್ಪಿಕೊಂಡೆ. ನನ್ನ ಅಪೇಕ್ಷೆಗೆ ಸರಿಯಾಗಿ ಇದು ನನಗೆ ಒಳ್ಳೆಯ ಫೇಮನ್ನು ಕೊಟ್ಟಿದೆ " ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದರು.

'ಮನಸಾರೆ'ಗೆ ಮೂರು ವರ್ಷ

'ಮನಸಾರೆ'ಗೆ ಮೂರು ವರ್ಷ

ಇದೇ ಫೆಬ್ರವರಿ 24ರಂದು 'ಮನಸಾರೆ'ಧಾರಾವಾಹಿ ತೆರೆ ಕಂಡು ಮೂರು ವರ್ಷ ಸಂದಿದ್ದರಿಂದ ನಟಿ ಪ್ರಿಯಾಂಕಾ ಚಿಂಚೋಳಿಯವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿಕೊಂಡು ತಮ್ಮ ಧಾರಾವಾಹಿ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಪೌರಾಣಿಕ ಪಾತ್ರದ ಹೊರತಾಗಿ ಜನ ಗುರುತಿಸುವಂತೆ ಮಾಡಿದ್ದು ಮನಸಾರೆ ಧಾರಾವಾಹಿ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

'ಮನಸ್ಸೆಲ್ಲಾ ನೀನೆ'ಯಲ್ಲೂ ಮೋಡಿ

'ಮನಸ್ಸೆಲ್ಲಾ ನೀನೆ'ಯಲ್ಲೂ ಮೋಡಿ

'ಮನಸಾರೆ' ಧಾರಾವಾಹಿಯ ನಂತರ ಸಹಜವಾಗಿ ಕಿರುತೆರೆಯಿಂದ ದೂರವಿದ್ದ ಪ್ರಿಯಾಂಕಾ ಸದ್ಯ ರಾಗಾಳಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಹೌದು , ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಾಯಕಿ ರಾಗಾಳಾಗಿ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ‌. ಅಂದ ಹಾಗೆ 'ಮನಸ್ಸೆಲ್ಲಾ ನೀನೆ' ಧಾರಾವಾಹಿ ಆರಂಭವಾದಾಗ ರಶ್ಮಿ ಪ್ರಭಾಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತದ ನಂತರ ಕಾರಣಾಂತರಗಳಿಂದ ರಶ್ಮಿ ಪ್ರಭಾಕರ್ ಪಾತ್ರಕ್ಕೆ ವಿದಾಯ ಹೇಳಿದಾಗ ಆ ಜಾಗಕ್ಕೆ ಬಂದವರೇ ಪ್ರಿಯಾಂಕಾ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಹಿರಿತೆರೆಯಲ್ಲಿಯೂ ನಟನಾ ಪ್ರತಿಭೆಯನ್ನು ಪಸರಿಸಿದ ಬೆಡಗಿ.

English summary
Priyanka Chincholi, who made her debut on television through legendary serials, was made famous by the serial Manasare
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X