Actress Priyanka Shivanna: ಕಿರುತೆರೆಯ ಈ ಬ್ಯೂಟಿಫುಲ್ ವಿಲನ್ ಯಾರು..? ಇವರ ಹಿನ್ನೆಲೆ ಏನು ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯ ಅಕ್ಕ ದಿವ್ಯಾ ಆಗಿ ನಟಿಸುತ್ತಿರುವ ಪ್ರಿಯಾಂಕಾ ಶಿವಣ್ಣ ಖಳನಾಯಕಿಯ ಪಾತ್ರದ ಮೂಲಕ ಕಿರುತೆರೆ ಅಂಗಳದಲ್ಲಿ ಗುರುತಿಸಿಕೊಂಡಿರುವ ಬೆಡಗಿ. ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದಿರುವ ಪ್ರಿಯಾಂಕಾ ಶಿವಣ್ಣ ಮನೋಜ್ಞ ನಟನೆಯ ಮೂಲಕ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡ ಬೆಡಗಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಮೂಲಕ ಪ್ರಿಯಾಂಕಾ ಶಿವಣ್ಣ ಕಿರುತೆರೆಗೆ ಕಾಲಿಟ್ಟಿದ್ದರು. ಬಳಿಕ 'ಒಂದೂರಲ್ಲಿ ರಾಜ ರಾಣಿ' ಧಾರಾವಾಹಿಯಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಮುಂದೆ 'ಪರಿಣಯ' ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ ಈಕೆಗೆ ಹೆಸರು ತಂದುಕೊಟ್ಟಿದ್ದು ಚಂದ್ರಿಕಾ ಪಾತ್ರ.

Actress Priyanka Shivanna is considered as beautiful villain of small screen

'ಅಗ್ನಿಸಾಕ್ಷಿ'ಯ ಚಂದ್ರಿಕಾ ಆಗಿ ಫೇಮಸ್ಸು!

'ಪರಿಣಯ' ಧಾರಾವಾಹಿಯ ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಆಗಿ ಬದಲಾದ ಪ್ರಿಯಾಂಕಾ ಶಿವಣ್ಣ ತದ ನಂತರ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 'ಅಗ್ನಿಸಾಕ್ಷಿ' ಧಾರಾವಾಹಿ ಶುರುವಾದಾಗ ರಾಜೇಶ್ವರಿ ಅವರು ಚಂದ್ರಿಕಾ ಆಗಿ ಅಭಿನಯಿಸುತ್ತಿದ್ದರು. ತದ ನಂತರ ರಾಜೇಶ್ವರಿ ಅವರು ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಕಾಲಿಟ್ಟವರೇ ಪ್ರಿಯಾಂಕಾ ಶಿವಣ್ಣ.

"ಮೊದಲಿಗೆ ಆತಂಕವಾಗಿತ್ತು" ಪ್ರಿಯಾಂಕಾ

'ಅಗ್ನಿಸಾಕ್ಷಿ' ಧಾರಾವಾಹಿಯ ನಿರ್ದೇಶಕ ರಾಮ್ ಜೀ ಅವರ ಕಣ್ಣಿಗೆ ಪ್ರಿಯಾಂಕಾ ಕಾಣಿಸಿಕೊಂಡಿದ್ದೇ, ಚಂದ್ರಿಕಾ ಪಾತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದ್ದರು. ಆಗ ಪ್ರಿಯಾಂಕಾಗೆ ಸಂತಸಕ್ಕಿಂತಲೂ ಭಯವಾಗಿದ್ದೇ ಹೆಚ್ಚಂತೆ. ಈಗಾಗಲೇ ಒಬ್ಬರು ನಟಿಸಿರುವ ಪಾತ್ರ, ಮಾತ್ರವಲ್ಲದೇ ಜನಪ್ರಿಯತೆ ಪಡೆದುಕೊಂಡಿರುವ ಪಾತ್ರ. ತನಗೆ ನಟಿಸಲು ಸಾಧ್ಯವೇ ಎಂಬ ಅಳುಕು ಕೂಡಾ ಅವರಿಗಿತ್ತಂತೆ. ಆದರೆ, ಕಡಿಮೆ ಅವಧಿಯಲ್ಲಿಯೇ ಜನರ ಮನ ಸೆಳೆಯುವಲ್ಲಿ ಪ್ರಿಯಾಂಕಾ ಯಶಸ್ವಿಯಾದರು.

ಪರಭಾಷೆಯಲ್ಲಿಯೂ ಖಳನಾಯಕಿಯಾಗಿ ಮೋಡಿ

ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್‌ನಲ್ಲಿ 'ಜನ ಮೆಚ್ಚಿದ ಮಂಥರೆ' ಪ್ರಶಸ್ತಿ ಪಡೆದ ಪ್ರಿಯಾಂಕಾ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿಯೂ ಖಳನಾಯಕಿ ಐಶ್ವರ್ಯಾ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಜೀ ಕುಟುಂಬಂ ಅವಾರ್ಡ್ಸ್ ನಲ್ಲಿ 'ಸ್ಟೈಲಿಶ್ ವಿಲನ್' ಪ್ರಶಸ್ತಿ ಪಡೆದುಕೊಂಡಿರುವ ಪ್ರಿಯಾಂಕಾ ಶಿವಣ್ಣ ಹಿರಿತೆರೆಗೂ ಕಾಲಿಟ್ಟಾಗಿದೆ.

Actress Priyanka Shivanna is considered as beautiful villain of small screen

ಹಿರಿತೆರೆಯಲ್ಲಿಯೂ ಈಕೆ ಖಳನಾಯಕಿ

ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆನಂದರಾಗ' ಧಾರಾವಾಹಿಯಲ್ಲಿಯೂ ಚಾಂದಿನಿ ಎನ್ನುವ ಖಳನಾಯಕಿಯಾಗಿ ಮೋಡಿ ಮಾಡುತ್ತಿರುವ ಪವನ್ ನಿರ್ದೇಶನದ 'ಫ್ಯಾಂಟಸಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಶಿವಣ್ಣ ಅವರು ಅಲ್ಲಿಯೂ ಖಳನಾಯಕಿಯಾಗಿ ಮಿಂಚಿದ ಪ್ರತಿಭೆ.

More from Filmibeat

English summary
Actress Priyanka Shivanna is considered as beautiful villain of small screen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X