ಡಿ ಬಾಸ್ ಗೆ ನಾಯಕಿಯಾಗಿ ಕಾಣಿಸಿಕೊಂಡ ಕುಡ್ಲದ ಬೆಡಗಿ ರಚನಾ ರೈ ಹಿನ್ನೆಲೆಯೇನು?

By ಅನಿತಾ ಬನಾರಿ

ನಟ ದರ್ಶನ್ ಅವರ ಅಭಿನಯದ 'ಡೆವಿಲ್' ಸಿನಿಮಾ ಈಗಾಗಲೇ ಬಹಳ ಸದ್ದು ಮಾಡಿದೆ. ಆದರೆ, ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನಿರ್ದೇಶಕ ಮಿಲನ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಡೆವಿಲ್ ದಿ ಹೀರೋ' ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ನಾಯಕಿಯಾಗಿ ರಚನಾ ರೈ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹವಿತ್ತು. ಆದರೆ ಅಧಿಕೃತ ಮಾಹಿತಿಗಾಗಿ ಪ್ರೇಕ್ಷಕರು, ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಈ ವಿಚಾರವಾಗಿ ಉತ್ತರ ಬಂದಿದ್ದು, ರಚನಾ ರೈ ಅವರೇ ಈ ಸಿನಿಮಾದ ನಾಯಕಿ ಎಂದು ಕನ್ಫರ್ಮ್ ಆಗಿದೆ.

Actress Rachana Rai appeared as the heroine for Darshan

ರಚನಾ ರೈ ಅವರು ತಮ್ಮ ಅಫೀಸಿಯಲ್ ಇನ್‌ಸ್ಟಾಗಾಂ ಪೇಜ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ನಿರ್ದೇಶಕ ಮಿಲನ ಪ್ರಕಾಶ ಅವರು ಕೂಡ ರಚನಾ ಅವರೊಂದಿಗೆ ಫೋಟೋ ಹಂಚಿಕೊಂಡು ನಮ್ಮ ಸಿನಿಮಾದ ನಾಯಕಿ ಎಂದು ಹೇಳಿದ್ದಾರೆ. ಇದೀಗ ರಚನಾ ರೈ ಯಾರು ಎಂಬ ಪ್ರಶ್ನೆ ಹಲವಾರು ಪ್ರೇಕ್ಷಕರಲ್ಲಿ ಇರಬಹುದು.

ನಟಿ ರಚನಾ ರೈ ಅವರು ಮೂಲತಃ ತುಳು ಸಿನಿಮಾ ರಂಗದವರು. ಈಗಾಗಲೇ ಹಲವು ತುಳು ಸಿನಿಮಾಗಳಲ್ಲಿ ಈ ಚೆಲುವೆ ಕಾಣಿಸಿಕೊಂಡಿದ್ದಾರೆ. 'ವಾಮನ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಈಕೆ ಕಾಲಿಟ್ಟಿದ್ದಾರೆ.

'ವಾಮನ' ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಷ್ಟೆ. ಸದ್ಯದ ಮಾಹಿತಿ ಪ್ರಕಾರ, ಇದೇ ವರ್ಷ ಜುಲೈ 12ರಂದು ಇದು ಬಿಡುಗಡೆಯಗೊಳ್ಳಲಿದೆ. ಅಷ್ಟರೊಳಗೆ 'ಡೆವಿಲ್' ಸಿನಿಮಾದಲ್ಲೂ ರಚನಾ ರೈ ಕಾಣಿಸಿಕೊಳ್ಳುತ್ತಿದ್ದಾರೆ.

Actress Rachana Rai appeared as the heroine for Darshan

ಅಂದ ಹಾಗೆ ಡೆವಿಲ್ ಸಿನಿಮಾದ ಮೊದಲ ಗ್ಲಿಮ್ಸ್‌ ಈಗಾಗಲೇ ಬಿಡುಗಡೆಯಾಗಿದ್ದು, ಇದರಲ್ಲಿ ದರ್ಶನ್ ಬಹಳ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. 'ಡೆವಿಲ್' ಚಿತ್ರದ 70% ಚಿತ್ರೀಕರಣ ಮುಗಿಬೇಕಿತ್ತು. ಆದರೆ ಡಿ ಬಾಸ್ ಅವರು ಕೈಗೆ ಪೆಟ್ಟು ಮಾಡಿಕೊಂಡ ಕಾರಣ, ಶೂಟಿಂಗ್ ಅನ್ನು ಮುಂದೂಡಲಾಯಿತಂತೆ. ಈ ವಿಚಾರವನ್ನು ದರ್ಶನ್ ಅವರೇ ಒಂದು ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ.

ಇದೀಗ ಸರ್ಜರಿ ಮಾಡಿಸಿಕೊಂಡು ಶೂಟಿಂಗ್‌ಗೆ ಸಜ್ಜಾಗಿರುವ ದರ್ಶನ್ 'ಡೆವಿಲ್ ದಿ ಹೀರೋ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. ರಚನಾ ರೈ ಅವರು ಇವರಿಗೆ ನಾಯಕಿಯಾಗಿ ಸಾಥ್ ನೀಡಲಿದ್ದಾರೆ.

More from Filmibeat

English summary
Coastalwood beauty Rachana Rai has charmed as the heroine of Devil movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X