ಕೋಟ್ಯಧಿಪತಿಯಲ್ಲಿ ಬಿಗ್ ಟ್ವಿಸ್ಟ್: ಪವರ್ ಸ್ಟಾರ್ ಜಾಗಕ್ಕೆ ಹೊಸ ನಿರೂಪಕಿ
Recommended Video
ಕನ್ನಡದ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಕನ್ನಡದ ಕೋಟ್ಯಧಿಪತಿಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಮೊದಲ ಎರಡು ಸೀಸನ್ ಪವರ್ ಸ್ಟಾರ್ ನಡೆಸಿಕೊಟ್ಟರೆ, ಮೂರನೆ ಸೀಸನ್ ಅನ್ನು ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು. ಆದ್ರೆ ನಾಲ್ಕನೆ ಸೀಸನ್ ಅನ್ನು ಮತ್ತೆ ಪವರ್ ಸ್ಟಾರ್ ನಡೆಸಿಕೊಡುತ್ತಿದ್ದಾರೆ.
ಈಗ ಕೋಟ್ಯಧಿಪತಿಯಿಂದ ಹೊರಬಿದ್ದಿರುವ ಅಚ್ಚರಿಕರ ಸಂಗತಿ ಅಂದ್ರೆ ಪುನೀತ್ ಜಾಗದಲ್ಲಿ ಮೊತ್ತೋರ್ವ ನಿರೂಪಕಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಇನ್ಮೇಲೆ ಪವರ್ ಸ್ಟಾರ್ ನಡೆಸಿಕೊಡುವುದಿಲ್ಲವಾ ಅಂತ ಯೋಚಿಸುತ್ತಿದ್ದೀರಾ. ಹೌದು, ಪುನೀತ್ ರಾಜ್ ಕುಮಾರ್ ಇನ್ಮೇಲೆ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುವುದಿಲ್ಲ. ಇದಕ್ಕೆ ದೊಡ್ಡ ಕಾರಣನೂ ಇದೆ.

ಪುನೀತ್ ಜಾಗದಲ್ಲಿ ರಚಿತಾ ರಾಮ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಟ್ ಸೀಟಿನಲ್ಲಿ ಕುಳಿತವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದ್ರೆ ಈ ಬಾರಿಯ ವಿಶೇಷ ಅಂದ್ರೆ ಪುನೀತ್ ರಾಜ್ ಕುಮಾರ್ ಬದಲಿಗೆ ನಟಿ ರಚಿತಾ ರಾಮ್ ನಿರೂಪಣೆ ಮಾಡಲಿದ್ದಾರೆ. ಆದ್ರೆ ಹಾಟ್ ಸೀಟಿನಲ್ಲಿ ಪುನೀತ್ ರಾಜ್ ಕುಮಾರ್ ಕುಳಿತುಕೊಳ್ಳಲಿದ್ದಾರೆ. ಹೌದು, ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್ ಗೆ ಏನೆಲ್ಲ ಪ್ರಶ್ನೆಗಳು ಎದುರಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಕನ್ನಡದ ಕೋಟ್ಯಧಿಪತಿಗೆ ಗ್ರ್ಯಾಂಡ್ ತೆರೆ
ಕನ್ನಡದ ಕೋಟ್ಯಧಿಪತಿ ವೀಕ್ಷಕರಿಗೆ ಬೇಸರದ ಸಂಗತಿ ಅಂದ್ರೆ ಕೋಟ್ಯಧಿಪತಿ ಕೊನೆಯ ಹಂತದಲ್ಲಿದೆ. ಕೊನೆಯ ಸಂಚಿಕೆಯಲ್ಲಿ ನಟಿ ರಚಿತಾ ರಾಮ್ ಭಾಗಿಯಾಗಿದ್ದಾರೆ. ಕೋಟ್ಯಧಿಪತಿಯ ಕೊನೆಯ ಎಪಿಸೋಡ್ ಈ ವಾರ ಅಥವ ಮುಂದಿನ ವಾರ ಪ್ರಸಾರವಾಗುವ ಸಾಧ್ಯತೆ ಇದೆ. ಅಲ್ಲಿಗೆ ಕನ್ನಡದ ಕೋಟ್ಯಧಿಪತಿ ಸೀಸನ್ 4ಗೆ ತೆರೆ ಬೀಳುತ್ತಿದೆ.

ಕೊನೆಯ ಸಂಚಿಕೆಗೆ ಸುದೀಪ್ ಬರಬೇಕಿತ್ತು
ಕನ್ನಡದ ಕೋಟ್ಯಧಿಪತಿ ಕೊನೆಯ ಸಂಚಿಕೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರಬೇಕಿತ್ತು ಎಂದು ಹೇಳಲಾಗುತ್ತಿತ್ತು. ಆದ್ರೆ ಸುದೀಪ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೊಬ್ಬ-3 ಶೂಟಿಂಗ್ ಗಾಗಿ ಸುದೀಪ್ ಪೋಲ್ಯಾಂಡ್ ಗೆ ತೆರಳಿದ್ದಾರೆ. ಹಾಗಾಗಿ ಸುದೀಪ್ ಬದಲಿಗೆ ನಟಿ ರಚಿತಾ ರಾಮ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ರಚಿತಾ ಹಾಟ್ ಸೀಟಿನಲ್ಲಿ ಕೂತಿಲ್ಲ. ಪುನೀತ್ ಅವರನ್ನು ಹಾಟ್ ಸೀಟಿನಲ್ಲಿ ಕೂರಿಸಿ ನಿರೂಪಣೆ ಮಾಡಿದ್ದಾರೆ.

12.5 ಲಕ್ಷದ ಮೇಲೆ ಯಾರು ಗೆದ್ದಿಲ್ಲ
ಈ ಬಾರಿಯ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ 12.5 ಲಕ್ಷದ ಮೇಲೆ ಯಾರು ಗೆದ್ದಿಲ್ಲ. ಕೋಟ್ಯಧಿಪತಿ ಸೀಸನ್ 4ನ ಮೊದಲ ಸ್ಪರ್ಧಿ ಕುಮಟದ ದೀಪಾ ಅವರು 12.5 ಲಕ್ಷ ಗೆದ್ದಿದ್ದರು. ಆದ್ರೆ ಈ ಬಾರಿ ಯಾರು 12.5ಲಕ್ಷಕ್ಕು ಹೆಚ್ಚಿನ ಮೊತ್ತ ಗೆದ್ದಿಲ್ಲ. ಜೂನ್ ತಿಂಗಳಿನಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಈಗ ತೆರೆ ಬೀಳುತ್ತಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳು ಪ್ರಾರಂಭದಲ್ಲಿ ಕೋಟ್ಯಾಧಿಪತಿ ಕೊನೆಯ ಸಂಚಿಗೆ ಪ್ರಸಾರವಾಗಲಿದೆ.


Click it and Unblock the Notifications











