ಅಮೃತಧಾರೆಯ ಮಲ್ಲಿ ಈಗ ಗಾಯಕಿ; ನೆಟ್ಟಿಗರ ಮನ ಸೆಳೆದ ಈ ನಟಿ ಯಾರು ಗೊತ್ತೇ?
ಮಲ್ಲಿ ಎಂದರೆ ಎಲ್ಲರ ಕಣ್ಣು ಹೋಗುವುದು 'ಅಮೃತಧಾರೆ' ಧಾರಾವಾಹಿಯತ್ತ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಮಲ್ಲಿ ಎಂಬ ಪಾತ್ರ ಇದೀಗ ಎಲ್ಲರಿಗೂ ಚೆನ್ನಾಗಿ ಪರಿಚಯ. ಶ್ರೀಮಂತ ಜೈದೇವ್‌ನ ಮೋಸದ ಬಲೆಗೆ ಬಿದ್ದು ಗರ್ಭಿಣಿಯಾಗುವ ಕೆಲಸದವನ ಮೊಮ್ಮಗಳು ಮಲ್ಲಿ, ಸದ್ಯಕ್ಕೆ ಜೈದೇವನ ಹೆಂಡತಿಯಾಗಿ ಮನೆ ಸೇರಿದ್ದಾಳೆ.
ಆದರೆ ಪ್ರತಿ ದಿನ ಮಲ್ಲಿಯನ್ನು ಕೊಲ್ಲಲು ಜಯದೇವ್ ಹಾಗೂ ಅವನ ತಾಯಿ ಒಂದಲ್ಲ ಒಂದು ರೀತಿಯ ಸಂಚು ರೂಪಿಸುತ್ತಲೇ ಇರುತ್ತಾರೆ. ಭೂಮಿಕಾಳ ಸಮಯ ಪ್ರಜ್ಞೆ ಹಾಗೂ ಚಾಣಾಕ್ಷತೆಯಿಂದ ಮಲ್ಲಿ ಇದೂವರೆಗೂ ಪಾರಾಗಿ ಬಂದಿದ್ದಾಳೆ. ಈ ರೀತಿಯ ಮುಗ್ಧ ಹುಡುಗಿಯ ಪಾತ್ರವನ್ನು ಮಾಡುತ್ತಿರುವವರ ಹೆಸರೇ ರಾಧಾ ಭಗವತಿ.

ನಟಿ ರಾಧಾ ಭಗವತಿ ಅವರು ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇದ್ದಾರೆ. ಇತ್ತೀಚೆಗೆ ಆಕೆ ಶೇರ್ ಮಾಡಿಕೊಂಡ ಒಂದು ಪೋಸ್ಟ್ ಬಹಳ ವೈರಲ್ ಆಗಿದೆ . ಹೌದು, ನಟಿ ರಾಧಾ ಭಗವತಿ ಅವರು ತುಂಬಾ ಚೆನ್ನಾಗಿ ಹಾಡನ್ನು ಹೇಳುತ್ತಾರೆ. ಅವರು ಹಾಡು ಹೇಳಿದ್ದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು 2.5 ಮಿಲಿಯನ್ ವ್ಯೂಗಳನ್ನು ಪಡೆದಿದೆ. ಆ ಖುಷಿಗೆ ಮತ್ತೊಂದು ಹಾಡಿನ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ನಟಿ ರಾಧಾ ಭಗವತಿ ಅವರ ಮುಗ್ಧ ನಟನೆಯನ್ನು ಜನರು ಮೆಚ್ಚಿದ್ದಲ್ಲದೆ ಇದೀಗ ಅವರ ಕಂಠಸಿರಿಗೆ ಮನಸೋತಿರುವುದು ವಿಶೇಷ. ಹಾಗೆಂದ ಮಾತ್ರಕ್ಕೆ 'ಅಮೃತಧಾರೆ'ಯೇ ಈಕೆಯ ಮೊದಲ ಧಾರಾವಾಹಿ ಏನಲ್ಲ. 'ಅಮೃತಧಾರೆ' ಧಾರಾವಾಹಿಗೂ ಮೊದಲು ಈಕೆ 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಾಮ್ ಜಿ ಅವರ ನಿರ್ದೇಶನದ 'ರಾಮಾಚಾರಿ' ಧಾರಾವಾಹಿಯಲ್ಲಿ ಸಹೋದರಿಯ ಪಾತ್ರದಲ್ಲೂ ನಟಿ ರಾಧಾ ಭಗವತಿ ಕಾಣಿಸಿಕೊಂಡಿದ್ದರು.
'ವಸಂತ ಕಾಲದ ಹೂಗಳು' ಸಿನಿಮಾದಿಂದ ಹಿರಿತೆರೆಗೆ ಕಾಲಿಟ್ಟ ಇವರು ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರವನ್ನು ಮಾಡಿದ್ದಾರೆ. ಹೌದು, ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾದಲ್ಲೂ ನಟಿಸಿರುವ ಈಕೆ 'ವಸಂತ ಕಾಲದ ಹೂಗಳು', ಅಭಿಜಿತ್ ತೀರ್ಥಹಳ್ಳಿಯವರ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ನಿರ್ದೇಶಕ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರವನ್ನು ಮಾಡಿದ್ದಾರೆ ನಟಿ ರಾಧಾ ಭಗವತಿ. ಸಿನಿಮಾಗಳಷ್ಟೇ ಅಲ್ಲದೆ 'ಬಾನಿಗೊಂದು ತಾರೆ' ಎಂಬ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಈಕೆ.
ಇದೀಗ ಇವರು ಹಾಡಿನಲ್ಲೂ ಸೈ ಅನಿಸಿಕೊಂಡಿರುವುದರಿಂದ ಇವರ ಅಭಿಮಾನಿಗಳು ಹಾಗೂ ನೆಟ್ಟಿಗರು ಬಹಳ ಖುಷಿಪಟ್ಟಿದ್ದಾರೆ. ಇವರ ಕಂಠಸಿರಿಗೆ ಮಾರು ಹೋಗಿರುವ ಅಭಿಮಾನಿಗಳು ಹಾಡನ್ನು ಮತ್ತೆ ಮತ್ತೆ ಕೇಳಬೇಕೆಂದೆನಿಸುತ್ತದೆ ಎಂದೆಲ್ಲ ಕಮೆಂಟಿಸಿದ್ದಾರೆ. ಬಹಳ ಚೆನ್ನಾಗಿ ಹಾಡುತ್ತೀರಿ ಎಂದು ಒಂದಷ್ಟು ಜನ ಹೊಗಳಿದ್ದಾರೆ. ಮತ್ತೊಂದು ಅಷ್ಟು ಜನ ಮಲ್ಲಿಯವರೇ ಜಾಗೃತೆಯಿಂದ ಇರಿ ನಿಮ್ಮ ಗಂಡ ಜೈದೇವ್ ಒಳ್ಳೆಯವರಲ್ಲ ಎಂಬಿತ್ಯಾದಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಒಟ್ಟಿನಲ್ಲಿ ನಟನೆಯಲ್ಲಿ ಸೈ ಅನಿಸಿಕೊಂಡಿರುವ ನಟಿ ರಾಧಾ ಭಗವತಿ ಅವರು ಇದೀಗ ಹಾಡು ಹೇಳಿ ಮತ್ತಷ್ಟು ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಪಾತ್ರಗಳನ್ನು ಪಡೆಯಬೇಕು ಎಂಬುದೇ ಅವರ ಆಸೆಯಾಗಿದೆಯಂತೆ.
ನಟಿ ರಾಧಾ ಭಗವತಿ ಅವರ ಕುಟುಂಬವೇ ಕಲಾವಿದರ ಕುಟುಂಬ. ತಂದೆ ಯುವರಾಜ ರಂಗಭೂಮಿ ಕಲಾವಿದರಾಗಿದ್ದರು. ಜೊತೆಗೆ ಹರಿಕಥೆ ದಾಸರು ಕೂಡ ಆಗಿದ್ದರು. ಇವರ ತಾಯಿ ಜಾನಪದ ಗೀತೆಗಳ ತುಂಬಾ ಚೆನ್ನಾಗಿ ಹಾಡುತ್ತಾರಂತೆ. ಈ ರೀತಿಯ ಕೌಟುಂಬಿಕ ವಾತಾವರಣದಲ್ಲಿ ಬೆಳೆದಿದ್ದರಿಂದ ರಾಧಾ ಭಗವತಿ ಅವರಿಗೂ ಕಲೆ ಹಾಗೂ ಗಾಯನ ಎಂದರೆ ಬಹಳ ಇಷ್ಟವಂತೆ. ನಟನೆ ಗಾಯನವಷ್ಟೇ ಅಲ್ಲದೆ ಕಂಠ ದಾನವನ್ನು ಮಾಡುವ ಈಕೆ, ಸದ್ಯಕ್ಕೆ "ಮದುಮಗಳು" ಧಾರಾವಾಹಿಯ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿದ್ದಾರೆ.


Click it and Unblock the Notifications











