ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಬೆಳೀಬೋದು ಎಂದ ಆ ವ್ಯಕ್ತಿ; ಕಹಿ ಅನುಭವ ಬಿಚ್ಚಿಟ್ಟ ರಾಧಾ ಭಗವತಿ

ಬಣ್ಣದಲೋಕದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬೇರು ಬಿಟ್ಟಿದೆ. ಇವತ್ತಿಗೂ ಸಾಕಷ್ಟು ನಟಿಯರು ತಮಗಾದ ಕಹಿ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಆಡಿಷನ್ ಹೆಸರಿನಲ್ಲಿ ಕರೆಸಿ ಪೀಡಿಸುವುದು, ನಟಿಸುವ ಅವಕಾಶ ಕೊಡ್ತೀವಿ ಕಮೀಟ್‌ಮೆಂಟ್, ಅಡ್ಜೆಸ್ಟ್‌ಮೆಂಟ್ ಓಕೆನಾ? ಎಂದು ಹೇಳುವ ಕಾಮುಕರು ಚಿತ್ರರಂದಲ್ಲಿದ್ದಾರೆ. ಖ್ಯಾತ ಕಲಾವಿದರು, ತಂತ್ರಜ್ಞರ ಹೆಸರು ಇದರಲ್ಲಿ ಕೇಳಿಬಂದಿರುವುದು ಇದೆ.

'ಅಮೃತಧಾರೆ' ಹಾಗೂ 'ಭಾರ್ಗವಿ LLB' ಧಾರಾವಾಹಿಯ ಖ್ಯಾತಿಯ ನಟಿ ರಾಧಾ ಭಗವತಿ ಕೂಡ ಇಂತಹ ಕಹಿ ಘಟನೆಗಳನ್ನು ಎದುರಿಸಿದ್ದಾರೆ. ಬಣ್ಣದ ಲೋಕಕ್ಕೆ ಬಂದ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿ ನಡೆದು ಆ ಎರಡು ಘಟನೆಗಳನ್ನು ಯಾವತ್ತಿಗೂ ಮರೆಯುವುದಿಲ್ಲ ಎಂದು ಬೇಸರ ವ್ಯಕ್ತಡಿಸಿದ್ದಾರೆ.

Actress Radha Bhagavati Recalls her Casting Couch and Audition Nightmare bad Experience

ನಟಿ ರಾಧಾ ಭಗವತಿ ಮಾತನಾಡಿ "ನಾನು ಕೂಡ ಆಡಿಷನ್‌ಗೆ ಹೋಗ್ತಿದ್ದೆ. ಪೇಪರ್‌ನಲ್ಲಿ ಒಂದು ಆಡಿಷನ್ ಬಗ್ಗೆ ಹಾಕಿದ್ರು. ಅದನ್ನು ನೋಡಿ ಅಮ್ಮನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಹೋದಾಗ ನಾಲ್ಕೈದು ಜನ ಹೆಣ್ಣು ಮಕ್ಕಳು ಕೂತಿದ್ರು.. ಮತ್ತೊಂದು ಕಡೆ ನಾಲ್ಕೈದು ಜನ ಪುರುಷರು ಆಡಿಷನ್ ಮಾಡ್ತಿದ್ರು. ನನಗೆ ಗೊತ್ತಿರುವವರೇ ಆ ಆಡಿಷನ್‌ಗೆ ನಮ್ಮನ್ನು ಕಳ್ಸಿದ್ರು, ಅವ್ರನ್ನು ಇವತ್ತಿಗೂ ಬೈಯ್ದುಕೊಳ್ತೀನಿ. ಅಮ್ಮನನ್ನು ಹೊರಗೆ ಕೂರಿಸಿ ನನ್ನನ್ನು ಒಳಗೆ ಬರೋಕೆ ಹೇಳಿದ್ರು, ಹೋಗಿದ್ದೆ" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.

ನಾನು ಅತ್ತರು ಬಿಡ್ಲಿಲ್ಲ

ಮೊದಲಿಗೆ ಒಂದಷ್ಟು ಕನ್ವಿನ್ಸ್ ಮಾಡೋಕೆ ನೋಡಿದ್ರು. ನೋಡಮ್ಮ ಇವತ್ತಿನ ಜನರೇಷನ್‌ನಲ್ಲಿ ಯಾರು ಬಟ್ಟೆ ಬಿಚ್ಚಿ ಆಕ್ಟ್ ಮಾಡ್ತಾರೋ, ಮಾನ ಮರ್ಯಾದೆ ಇಲ್ದೆ ಇರುವವರು ಮಾತ್ರ ಬೆಳೆಯೋಕೆ ಸಾಧ್ಯ, ಇಲ್ಲ ಅಂದ್ರೆ ಇಂಡಸ್ಟ್ರಿಯಲ್ಲಿ ಇರೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾಗಿ ರಾಧಾ ಭಗವತಿ ತಿಳಿಸಿದ್ದಾರೆ. "ನಾನು ಅವತ್ತು ಚೂಡಿದಾರ್ ಹಾಕ್ಕೊಂಡು ಹೋಗಿದ್ದೆ. ಇವತ್ತು ನೀನು ಇದ್ದೀಯಲ್ಲ, ಇದೆಲ್ಲಾ ಯಾವ ಕೆಲಸಕ್ಕೂ ಬರಲ್ಲ. ನಾನು ಒಂದು ಡ್ರೆಸ್ ಕೊಡ್ತೀನಿ, ಅದನ್ನು ಹಾಕ್ಕೊಂಡು ಆಡಿಷನ್ ಕೊಡಬೇಕು ಅಂತ ಹೇಳಿ ಒಂದು ಡ್ರೆಸ್ ತಂದು ಮುಂದೆ ಇಟ್ರು. ಆ ಬಟ್ಟೆ ನೋಡಿದ್ರೆ, ಐಟಂ ಡ್ಯಾನ್ಸರ್ಸ್ ಹಾಕಿಕೊಳ್ಳುವ ಬಟ್ಟೆ ತರ ಇತ್ತು. ನನಗೆ ಅಳು ಬರ್ತಿತ್ತು. ವೀಕ್ ಅಂತ ತೋರಿಸಿಕೊಳ್ಳುವಂತೆ ಇರಲಿಲ್ಲ, ಅಮ್ಮನನ್ನು ಕರೆಯೋಕೆ ಬಿಡ್ಲಿಲ್ಲ" ಎಂದು ವಿವರಿಸಿದ್ದಾರೆ.

ಕಂಪ್ಲೇಟ್ ಕೊಡೋಕೆ ಆಗಲಿಲ್ಲ

ನಾನು ಹೊರಗೆ ಬರೋಕು ಬಿಡಲಿಲ್ಲ. ಬಾಗಲ ತೆಗೆಯದಂತೆ ತಡೆದ್ರು.. ಅದು ನೆನಪಿಸಿಕೊಂಡ್ರೆ, ಈಗ್ಲೂ ಕೈ ನಡುಗುತ್ತೆ.. ಬಳಿಕ ಆ ವ್ಯಕ್ತಿಗೆ ಯಾವ್ದೋ ಫೋನ್ ಕರೆ ಬಂತು. ಆತ ಆ ಕಡೆ ಹೋಗುತ್ತಿದ್ದಂತೆ ನಾನು ಹೊರಗೆ ಓಡಿ ಬಂದೆ. ಅಮ್ಮನ ಕೈಹಿಡಿದು ಕರೆದುಕೊಂಡು ಅಲ್ಲಿಂದ ಹೊರಗೆ ಬಂದುಬಿಟ್ಟೆ. ಬಳಿಕ ಅವರ ವಿರುದ್ಧ ಪೊಲೀಸ್ ಕಂಪ್ಲೇಟ್ ಕೊಡಬೇಕು ಎಂದುಕೊಂಡೆವು. ಅದಕ್ಕೆ ಹಣ ಬೇಕು ಅಂದ್ರು. ಹಾಗಾಗಿ ಅನಿವಾರ್ಯ ಕಾರಣದಿಂದ ಕಂಪ್ಲೇಟ್ ಕೊಡಲು ಸಾಧ್ಯವಾಗಲಿಲ್ಲ ಎಂದು ನಟಿ ರಾಧಾ ಭಗವತಿ ಹೇಳಿದ್ದಾರೆ.

ಯಾವ್ದೋ ದೇಶಕ್ಕೆ ಮಾರಿಬಿಡ್ತಿದ್ರು

ಮತ್ತೊಮ್ಮೆ ಯಾವುದೋ ಆಡಿಷನ್ ಅಂತ ಅಪ್ಪನನ್ನು ಕರೆದುಕೊಂಡು ಹೋಗಿದ್ದೆ. ನಮ್ಮ ಊರಿನಿಂದ ಬಹಳ ದೂರದಲ್ಲಿ ಆ ಜಾಗ ಇತ್ತು. ಫೋನ್ ಮಾಡಿ ಆ ವ್ಯಕ್ತಿ ಕೇಳುತ್ತಲೇ ಇದ್ದ. ಯಾರೊಟ್ಟಿಗೆ ಬರ್ತಿದ್ದೀರಾ ಅಂತ. ನಾನು ಅಪ್ಪನ ಜೊತೆ ಎಂದು ಹೇಳಿದ್ದೆ. ಕೊನೆಗೆ ಅಲ್ಲಿಗೆ ಹೋಗಿ ಕಾಲ್ ಮಾಡಿದ್ರೆ, ಪಿಕ್ ಮಾಡಲಿಲ್ಲ. ಅದು ದೊಡ್ಡ ಗೋಡೌನ್ ರೀತಿಯ ಜಾಗ. ಅಕ್ಕ ಪಕ್ಕ ಅಷ್ಟಾಗಿ ಮನೆಗಳು ಇರಲಿಲ್ಲ. 2 ಗಂಟೆ ನಾನು, ಅಪ್ಪ ಕಾದು ವಾಪಸ್ ಬಂದುಬಿಟ್ವಿ. ಮರುದಿನ ಟಿವಿ ನೋಡಿದ್ರೆ, ಮಾನವ ಸಾಗಾಣಿಕೆ ಜಾಲದಲ್ಲಿ ಆ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು ನ್ಯೂಸ್‌ನಲ್ಲಿ ಬರ್ತಿತ್ತು. ಒಂದು ಕ್ಷಣ ನಾನು ನಿಟ್ಟಿಸಿರು ಬಿಟ್ಟಿದ್ದೆ. ಒಂದು ವೇಳೆ ನಾನು ಅಪ್ಪನ ಬದಲು ಅಮ್ಮನ ಜೊತೆ ಅಲ್ಲಿಗೆ ಹೋಗಿದ್ದರೆ ಇವತ್ತು ನಾವಿಬ್ಬರು ಎಲ್ಲಿ ಇರ್ತಿದ್ವೋ, ಯಾವ ದೇಶಕ್ಕೆ ಮಾರಿಬಿಡುತ್ತಿದ್ದರೋ ಗೊತ್ತಿಲ್ಲ ಎಂದು ರಾಧ ಭಗವತಿ ಆತಂಕ ವ್ಯಕ್ತಪಡಿಸಿದ್ದಾರೆ.

Read more about: actress sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X