»   » ಪೃಥ್ವಿರಾಜ್ ಗೆ 3 ಲಕ್ಷ ಧನ ಸಹಾಯ ಮಾಡಿದ ರಾಧಿಕಾ ಕುಮಾರಸ್ವಾಮಿ

ಪೃಥ್ವಿರಾಜ್ ಗೆ 3 ಲಕ್ಷ ಧನ ಸಹಾಯ ಮಾಡಿದ ರಾಧಿಕಾ ಕುಮಾರಸ್ವಾಮಿ

Posted By:
Subscribe to Filmibeat Kannada
radhika kumaraswamy help to 'Dance Dance Juniors' contestant Prithviraj | Filmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ. ನೇತ್ರಾವತಿ ಮೊದಲ ಬಹುಮಾನ ಹಾಗೂ ರಿತಿಕ ಎರಡನೇ ಬಹುಮಾನ ಪಡೆದುಕೊಂಡರು.

ಈ ಮಧ್ಯೆ ಆರಂಭದಿಂದಲೂ ನಿರೀಕ್ಷೆ ಮೂಡಿಸಿದ್ದ ಪ್ರತಿಭಾನ್ವಿತ ಬಾಲಕ ಪೃಥ್ವಿರಾಜ್ ಫಿನಾಲೆಯ ಕಿರೀಟ ಗೆಲ್ಲುವಲ್ಲಿ ವಿಫಲರಾದರೂ, ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು.

ಹೌದು, ಫಿನಾಲೆಯಲ್ಲಿ ನಿರಾಸೆ ಅನುಭವಿಸಿದ ಪೃಥ್ವಿರಾಜ್ ಕನಸಿಗೆ ರಾಧಿಕಾ ಕುಮಾರಸ್ವಾಮಿ ಆಸರೆಯಾದರು. ಅದು ಹೇಗೆ ಅಂತ ತಿಳಿಯಲು ಮುಂದೆ ಓದಿ....

ಪುಟ್ಟ ಕನಸಿಗೆ ಆಸೆರೆಯಾದ ರಾಧಿಕಾ

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಫಿನಾಲೆಯಲ್ಲಿ ನಿರಾಸೆ ಅನುಭವಿಸಿದ ಬಾಲಕ ಪೃಥ್ವಿರಾಜ್ ಕನಸಿಗೆ ನಟಿ ರಾಧಿಕಾ ಕುಮಾರಸ್ವಾಮಿ ಆಸರೆಯಾದರು. ವೈಯಕ್ತಿಕವಾಗಿ ಧನ ಸಹಾಯ ಮಾಡಿ ಪೃಥ್ವಿರಾಜ್ ಪ್ರತಿಭೆಯನ್ನ ಪ್ರೋತ್ಸಾಹಿಸಿದರು.

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಗೆದ್ದ ಬಾಲಕಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು.?

3 ಲಕ್ಷ ಧನ ಸಹಾಯ

ಪೃಥ್ವಿರಾಜ್ ಪ್ರತಿಭೆಯನ್ನ ಮೆಚ್ಚಿಕೊಂಡು, ಗೌರವಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಖಾಸಗಿಯಾಗಿ ಪೃಥ್ವಿರಾಜ್ ಗೆ 3 ಲಕ್ಷ ಚೆಕ್ ನೀಡುವ ಮೂಲಕ ಸಹಾಯ ಮಾಡಿದರು.

ಪ್ರತಿಭೆಗೆ ಸಿಕ್ಕ ಗೌರವ

ಪೃಥ್ವಿರಾಜ್ ಓರ್ವ ಅದ್ಭುತ ಡ್ಯಾನ್ಸರ್. ಅವರ ತಾಯಿ ಮೇಲೆ ಅವರಿಗಿರುವ ಪ್ರೀತಿ, ಅವರ ಅಕ್ಕನ ಮೇಲಿನ ಅಭಿಮಾನಕ್ಕೆ ನೆರವಾಗಲಿ ಎಂದು ಈ ಸಣ್ಣ ಸಹಾಯ ಮಾಡುತ್ತಿರುವುದಾಗಿ ರಾಧಿಕಾ ಕುಮಾರಸ್ವಾಮಿ ತಿಳಿಸಿದರು.

ನಾಲ್ಕನೇ ಸ್ಥಾನ ಪಡೆದ ಪೃಥ್ವಿರಾಜ್

ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಪೃಥ್ವಿರಾಜ್ ನಾಲ್ಕನೇ ಸ್ಥಾನ ಪಡೆದುಕೊಂಡರು.

English summary
Kannada Actress Radhika Kumaraswamy gives Rs 3 lakh to 'Dance Dance Juniors' contestant Prithviraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada