ಯಾವಾಗ ನಡೀತು ಮದುವೆ? ಬಾಡಿ ಬಿಲ್ಡರ್ ವೆಂಕಟೇಶ್ ಬಗ್ಗೆ ನಟಿ ರಜನಿ ಮಾತು
'ಅಮೃತವರ್ಷಿಣಿ' ಧಾರಾವಾಹಿ ಮೂಲಕ ಮನೆಮಾತಾದವರು ನಟಿ ರಜಿನಿ. ಬಳಿಕ 'ಹಿಟ್ಲರ್ ಕಲ್ಯಾಣ' ಸೇರಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ನೀ ಇರಲು ಜೊತೆಯಲ್ಲಿ' ಎಂಬ ಹೊಸ ಕಥೆಯ ಮೂಲಕ ಮತ್ತೆ ವೀಕ್ಷಕರ ಮನೆ ಮನ ತಲುಪಲು ಮುಂದಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಜಿನಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ರೀಲ್ಸ್ ಮಾಡಿ ನೋಡುಗರನ್ನು ಸಖತ್ತಾಗಿ ರಂಜಿಸುತ್ತಾರೆ. ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಜೊತೆ ಹೆಚ್ಚು ಹೆಚ್ಚು ರೀಲ್ಸ್ ಮಾಡುತ್ತಾರೆ. ಬಹುತೇಕ ಕಾಮಿಡಿ ವೀಡಿಯೋಗಳೇ ಇರುತ್ತವೆ. ಜಿಮ್, ಮನೆ ಹೀಗೆ ಎಲ್ಲೆಲ್ಲೂ ಒಬ್ಬರಿಗೊಬ್ಬರು ಕ್ವಾಟ್ಲೆ ಕೊಡುತ್ತಾ ಸಿಕ್ಕಾಪಟ್ಟೆ ಫನ್ನಿಯಾಗಿ ನೋಡುಗರಿಗೆ ಕಚಗುಳಿ ಇಡುತ್ತಾರೆ.

ಸದ್ದಿಲ್ಲದೇ ರಜನಿಕಾಂತ್ ಹಾಗೂ ಬಾಡಿ ಬಿಲ್ಡರ್ ಮದುವೆ ಕೂಡ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಗಂಡ-ಹೆಂಡತಿ ಸೇರಿ ರೀಲ್ಸ್ ಮಾಡ್ತಿದ್ದಾರೆ ಎಂದೇ ಕೆಲವರು ಭಾವಿಸಿದ್ದಾರೆ. ಈ ಬಗ್ಗೆ ಇದೀಗ ಸ್ವತಃ ನಟಿ ರಜನಿ ಸ್ಪಷ್ಟನೆ ನೀಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಯಾರಿಗೂ ಹೇಳದೇ ಮದುವೆ ಆಗುವುದಿಲ್ಲ. ಖಂಡಿತ ಎಲ್ಲರಿಗೂ ಹೇಳಿ ಮದುವೆ ಆಗ್ತೀನಿ, ಅದಕ್ಕೆ ಸಮಯ ಬರುತ್ತೆ ಎಂದಿದ್ದಾರೆ.
"ಯಾರನ್ನು ಕರೆಯದೇ ಮದುವೆ ಆಗ್ತೀನಾ? ಕದ್ದು ಮುಚ್ಚಿ ಮದುವೆ ಆಗುವ ಅವಶ್ಯಕತೆ ಏನಿದೆ? ಮದುವೆ ಎನ್ನುವುದು ಖುಷಿಯ ವಿಚಾರ, ಎಲ್ಲರೊಟ್ಟಿಗೆ ಹಂಚಿಕೊಳ್ಳುತ್ತೇನೆ. ಮದುವೆ ಆಗಿಲ್ಲ, ಹೇಗೆ ಕರೀಲಿ ಹೇಳಿ, ಅದೆಲ್ಲಾ ಬರೀ ಗಾಸಿಪ್ ಅಷ್ಟೆ. ಏನು ಮಾಡುವುದಕ್ಕೆ ಆಗಲ್ಲ. ನಾವಿಬ್ಬರು ಗಂಡ-ಹೆಂಡತಿ ಅಲ್ಲ, ಫ್ರೆಂಡ್ ಅಷ್ಟೆ, ರೀಲ್ಸ್ ಮಾಡೋಕೆ ವೀಡಿಯೋ ಪಾರ್ಟ್ನರ್ ಅಷ್ಟೆ" ಎಂದು ರಜಿನಿ ಹೇಳಿದ್ದಾರೆ.
ಸ್ನೇಹಿತರಾಗಿರುವವರು ನಿಜ ಜೀವನದಲ್ಲಿ ಬಾಳ ಸಂಗಾತಿ ಆಗಬಹುದಾ? ಎನ್ನುವ ಪ್ರಶ್ನೆಗೆ "ಆಗಬಹುದು. ಅದರಲ್ಲಿ ತಪ್ಪೇನಿಲ್ಲ. ಸ್ನೇಹಿತರೇ ಬಹಳ ಅರ್ಥ ಮಾಡಿಕೊಳ್ಳುವುದು. ಬೇಕು, ಬೇಡ ಎಲ್ಲಾ ಗೊತ್ತಿರುತ್ತದೆ. ಸ್ನೇಹಿತರೇ ಮದುವೆ ಆದರೆ ತಪ್ಪಿಲ್ಲ. ಅವರನ್ನು ಬಿಟ್ಟು ಬೇರೆಯವರನ್ನು ಆದರೂ ತಪ್ಪಿಲ್ಲ. ಆದಾಗ ನೋಡೋಣ" ಎಂದು ನಕ್ಕಿದ್ದಾರೆ. ಕಾಮಿಡಿ ರೀಲ್ಸ್ ಮೂಲಕ ನಾವು ವೀಕ್ಷಕರನ್ನು ರಂಜಿಸುವುದನ್ನು ಮುಂದುವರೆಸುತ್ತೇವೆ ಎಂದು ರಜಿನಿ ತಿಳಿಸಿದ್ದಾರೆ.
ನಮ್ಮ ವೀಡಿಯೋ ಜನ ಇಷ್ಟಪಟ್ಟು ಮೆಚ್ಚುಗೆ ಸೂಚಿಸುತ್ತಾರೆ. ನಾನು ಎಷ್ಟೇ ಬ್ಯುಸಿ ಇದ್ದರೂ ರೀಲ್ಸ್ ಮಾಡಿ ನೋಡುಗರನ್ನು ರಂಜಿಸುವುದು ತಪ್ಪಿಸುವುದಿಲ್ಲ ಎಂದು ರಜನಿ ಹೇಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ ಟ್ರೋಲ್ಸ್ ಬಗ್ಗೆ ಕೂಡ ರಜನಿ ಮಾತನಾಡಿದ್ದಾರೆ. ಪ್ರತಿ ಹೆಣ್ಣಿಗೂ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಕಿರುಕುಳ ಕೊಡುತ್ತಾರೆ. ಕೆಟ್ಟ ಕಾಮೆಂಟ್ ಮಾಡುವವರು ಮಾಡುತ್ತಲೇ ಇರ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅಂತಹ ಅಕೌಂಟ್‌ಗಳನ್ನು ಬ್ಲಾಕ್ ಮಾಡಬೇಕು. ನಾನು ಅದನ್ನೇ ಮಾಡ್ತಿದ್ದೀನಿ ಎಂದಿದ್ದಾರೆ.
'ನೀ ಇರಲು ಜೊತೆಯಲ್ಲಿ' ಧಾರಾವಾಹಿಯಲ್ಲಿ ಊರ್ಮಿಶಾ ದಿವಾನ್ ಎಂಬ ಪಾತ್ರದಲ್ಲಿ ರಜಿನಿ ಬಣ್ಣ ಹಚ್ಚಿದ್ದಾರೆ. ನಾಯಕನ ಅತ್ತಿಗೆ ಪಾತ್ರ ಇದು. ಬಹಳ ಹಠಮಾರಿ, ದಬ್ಬಾಳಿಕೆ ಮನಸ್ಥಿತಿ ಇರುವ ಪಾತ್ರ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಪವನ್ ರವೀಂದ್ರ ಮತ್ತು ಸಲೋಮಿ ಡಿಸೋಜಾ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಧರಣಿ ಜಿ ರಮೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಟ, ನಿರ್ದೇಶಕ ಮೋಹನ್ ಕೂಡ 'ನೀ ಇರಲು ಜೊತೆಯಲ್ಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಜೀ ಕನ್ನಡ ವಾಹಿನಿಯ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ನಟಿಸಿ ಅವರು ಗಮನ ಸೆಳೆಯುತ್ತಿದ್ದಾರೆ.


Click it and Unblock the Notifications











