ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎನ್ನುತ್ತಾ ಮಿನುಗುತಾರೆ ಕಲ್ಪನಾ ನೆನಪಿಸಿದ ನಟಿ ರಜಿನಿ
ನಟಿ ರಜಿನಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಹಾಗೂ ಪ್ರಾರ್ಥನಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ನಟಿಸುವುದು ತುಂಬಾ ಕಷ್ಟ. ಇದೆರಡನ್ನು ನಿಭಾಯಿಸಿ ಸೈ ಎನಿಸಿಕೊಂಡಿತರುವ ಈ ನಟಿ ಈಗ ಪಾರ್ವತಿಯಾಗಿ ನಟಿಸುತ್ತಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಹೌದು, 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಭಗವಂತನ ಮಡದಿ ಪಾರ್ವತಿಯಾಗಿ ರಜಿನಿ ನಟಿಸುತ್ತಿದ್ದಾರೆ.
ನಾಯಕ ಶಿವಪ್ರಸಾದ್ ಹಾಗೂ ನಾಯಕಿ ಗಿರಿಜಾ ದಂಪತಿಗಳನ್ನು ಪರೀಕ್ಷಿಸಲು ಬರುವ ದೇವಿಯಾಗಿ ರಜಿನಿ ನಟಿಸಿದ್ದರು. ಜೊತೆಗೆ ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸುವುದು ಇಷ್ಟ ಎಂದು ಕೂಡಾ ರಜಿನಿ ಈ ಹಿಂದೆ ಹೇಳಿಕೊಂಡಿದ್ದರು. ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ರಜಿನಿ ಸಕತ್ ಆ್ಯಕ್ಟೀವ್.

ಸಮಯ ಸಿಕ್ಕಾಗಲೆಲ್ಲಾ ವಿಭಿನ್ನ ರೀತಿಯ ಫೋಟೋಶೂಟ್‌ಗಳನ್ನು, ವಿಡಿಯೋಗಳನ್ನು ಮಾಡಿಸಿಕೊಳ್ಳುವ ರಜಿನಿ, ಇತ್ತೀಚೆಗೆ ವಿಡಿಯೋವೊಂದನ್ನು ಮಾಡಿಸಿಕೊಂಡಿದ್ದಾರೆ. ಅದು ಇನ್‌ಸ್ಟಾಗ್ರಾಂನಲ್ಲಿ ಸಕತ್ ಸದ್ದು ಮಾಡುತ್ತಿದೆ. ಹೌದು, ನಟಿ ರಜಿನಿ ಮಿನುಗುತಾರೆ ಕಲ್ಪನಾ ಅವರ ಹಾಡೊಂದನ್ನು ನಟಿ ರಜಿನಿ ರೀ ಕ್ರಿಯೇಟ್ ಮಾಡಿದ್ದಾರೆ.
ಮಿನುಗುತಾರೆ ಕಲ್ಪನಾ ಅವರು ಹೆಜ್ಜೆ ಹಾಕಿರುವ ಹಾಡುಗಳ ಪೈಕಿ "ಬಾನಲ್ಲೂ ನೀನೆ ಭುವಿಯಲ್ಲೂ ನೀನೆ" ಕೂಡಾ ಒಂದು. ಇದೀಗ ಆ ಹಾಡನ್ನೇ ಆಯ್ಕೆ ಮಾಡಿಕೊಂಡಿರುವ ರಜಿನಿ, ಕಲ್ಪನಾ ಅವರ ಲುಕ್ ಅನ್ನೇ ರೀ ಕ್ರಿಯೇಟ್ ಮಾಡಿಕೊಂಡಿರುವುದು ವಿಶೇಷ. ಹೌದು, ಆ ಹಾಡಿನಲ್ಲಿ ಕಲ್ಪನಾ ಧರಿಸಿರುವಂತೆ ಹಳದಿ ಸೀರೆ, ಹೇರ್ ಸ್ಟೈಲ್ ಅನ್ನು ಈಕೆ ಮಾಡಿಕೊಂಡಿದ್ದಾರೆ. ಕ್ಯಾಸ್ಟ್ಯೂಮ್ ಮಾತ್ರವಲ್ಲದೇ ಲೋಕೇಶನ್ ಕೂಡಾ ಅದಕ್ಕೆ ಮ್ಯಾಚ್ ಮಾಡಿದ್ದು ವಿಶೇಷ.
ಕೆಲವೇ ದಿನದ ಹಿಂದೆಯಷ್ಟೇ ರಜಿನಿ ಅವರು ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದು, 764k ಬಾರಿ ಇದು ಪ್ಲೇ ಆಗಿದೆ. ಮಾತ್ರವಲ್ಲದೇ 37,000 ಕ್ಕೂ ಅಧಿಕ ಲೈಕ್ಸ್ ಕೂಡಾ ಈ ವಿಡಿಯೋಗೆ ಬಂದಿದೆ. ಜೊತೆಗೆ ಏಳು ನೂರಕ್ಕೂ ಅಧಿಕ ಕಮೆಂಟ್‌ಗಳು ಕೂಡಾ ಈ ವಿಡಿಯೋಗೆ ಬಂದಿದೆ.
ನಟನೆಯ ಹೊರತಾಗಿ ಡ್ಯಾನ್ಸ್‌ನಲ್ಲಿಯೂ ನಟಿ ರಜಿನಿ ಅವರು ಗುರುತಿಸಿಕೊಂಡಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋವೊಂದಲ್ಲಿಯೂ ಈಕೆ ಹೆಜ್ಜೆ ಹಾಕಿದ್ದಾರೆ. ಧಾರಾವಾಹಿಗಳ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ, ಹಿರಿತೆರೆಯಲ್ಲಿಯೂ ಮೋಡಿ ಮಾಡಿರುವ ರಜಿನಿ ಸೂಪರ್ ಕ್ವೀನ್ ರಿಯಾಲಿಟಿ ಶೋವಿನಲ್ಲಿ ಮಿಂಚಿದ್ದಾರೆ. ಜೀ ಕನ್ನಡ ವಾಹಿನಿಯ 'ಸೂಪರ್ ಕ್ವೀನ್'ನಲ್ಲಿ ಭಾಗವಹಿಸಿದ ಈಕೆ ಸೆಕೆಂಡ್ ರನ್ನರ್ ಅಪ್ ಆಗಿ ಕಾಣಿಸಿಕೊಂಡಿದ್ದರು.


Click it and Unblock the Notifications











