ಮದುವೆ ಬಳಿಕ ಗಂಡ- ಹೆಂಡತಿ ದೂರಾ ದೂರ; ಬೇಸರ ವ್ಯಕ್ತಪಡಿಸಿದ ನಟಿ ರಜಿನಿ
'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ನಟಿ ರಜನಿ ಇತ್ತೀವೆಗೆ ಹಸೆಮಣೆ ಏರಿದ್ದರು. ಪ್ರಿಯಕರ ಅರುಣ್ ವೆಂಕಟೇಶ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಜಿಮ್ ಕೋಚ್ ಆಗಿರುವ ಅರುಣ್ ಹಾಗೂ ರಜಿನಿ ಲವ್ವಲ್ಲಿ ಬಿದ್ದಿದ್ದಾರೆ ಎಂದು ಗುಲ್ಲಾಗಿತ್ತು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದ ರಜಿನಿ ಅಂತಿಮವಾಗಿ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದರು.
ನವೆಂಬರ್ 10ರಂದು ನಟಿ ರಜಿನಿ ಹಾಗೂ ಜಿಮ್ ಕೋಚ್ ಅರುಣ್ ವೆಂಕಟೇಶ್ ಮದುವೆ ನಡೆದಿತ್ತು. 7 ವರ್ಷಗಳ ತಮ್ಮ ಪ್ರೀತಿಯ ವಿಚಾರವನ್ನು ಕೂಡ ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಬ್ಬರ ಪ್ರೀ ವೆಡ್ಡಿಂಗ್ ಫೋಟೊಶೂಟ್ ಕೂಡ ಸಖತ್ ವೈರಲ್ ಆಗಿತ್ತು. ಬಾಡಿ ಬಿಲ್ಡರ್ ಆಗಿರುವ ವೆಂಕಟೇಶ್ ಸಾಕಷ್ಟು ಸ್ಪರ್ಧೆಗಳನ್ನು ಭಾಗವಹಿಸುತ್ತಾರೆ. ಮದುವೆ ಬಳಿಕ ಇಬ್ಬರೂ ಹೆಚ್ಚು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ ಎಂದು ರಜಿನಿ ಹೇಳಿದ್ದಾರೆ.

ವೀಡಿಯೋ ಮಾಡಿ ಮಾತನಾಡಿರುವ ನಟಿ ರಜನಿ ಇಬ್ಬರೂ ನಮ್ಮ ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀವಿ. ಹಾಗಾಗಿ ಮದುವೆ ಬಳಿಕ ಹೆಚ್ಚು ಭೇಟಿಗೆ ಅವಕಾಶ ಸಿಗಲಿಲ್ಲ ಎಂದಿದ್ದಾರೆ. "ಇವತ್ತು ನನಗೆ ಸ್ಪೆಷಲ್ ಡೇ. ಫ್ಯಾಮಿಲಿ ರೀತಿ ಇರುವ ನಿಮ್ಮೊಟ್ಟಿಗೆ ಈ ವಿಚಾರ ಹಂಚಿಕೊಳ್ಳಬೇಕು ಅನ್ನಿಸಿತು. ಹಾಗಾಗಿ ಈ ವೀಡಿಯೋ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
"ಇವತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 2 ಗಂಟೆವರೆಗೂ ಚಿತ್ರೀಕರಣ ಇತ್ತು. ಶೂಟಿಂಗ್ ಮುಗಿಸಿ ನನ್ನ ದಾರಿ ಅರುಣ್ ಅವರ ಮನೆ ಕಡೆ ಹೊರಟಿತು. ಮದುವೆ ಬಳಿಕ ನಾನು- ಅರುಣ್ ಭೇಟಿ ಆಗಿದ್ದು ಕೇವಲ ಬೆರಳೆಣಿಕೆಯಷ್ಟು ಬಾರಿ ಮಾತ್ರ. ಕಾರಣ ಅವ್ರು ಒಂದು ಮುಖ್ಯವಾದ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿದ್ರು. ಅಥ್ಲೆಟ್ ಆಗಿರುವುದರಿಂದ ಅವ್ರದ್ದೇ ಅಷ್ಟು ಕ್ರಮಗಳಿರುತ್ತೆ. ಅದನ್ನು ಪಾಲಿಸಲೇ ಬೇಕು. ನಾನು ನನ್ನ ಧಾರಾವಾಹಿ ಚಿತ್ರೀಕರಣ ಬ್ಯುಸಿಯಾಗಿದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಇವತ್ತು ಭೇಟಿ ಆಗಿದ್ದು ಬಹಳ ಖುಷಿ ಕೊಡ್ತು" ಎಂದು ನಟಿ ರಜಿನಿ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅರುನ್ ವೆಂಕಟೇಶ್ ಬಾಡಿ ಬಗ್ಗೆ ಕೆಲವರು ಏನೇನೋ ಕಾಮೆಂಟ್ ಮಾಡುತ್ತಾರೆ. ಆ ಬಗ್ಗೆ ಪ್ರತಿಕ್ರಿಯಿಸಿರುವ ರಜಿನಿ "ನನ್ನ ಬೇಬಿ ಬಾಡಿ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡ್ತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಆ ಬಾಡಿ ಮಾಡೋಕೆ ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದ ನನಗೆ ಗೊತ್ತು. ಫೈನಲಿ ನಾವು ಏರ್‌ಪೋರ್ಟ್‌ಗೆ ರೀಚ್ ಆದ್ವಿ. ಅರುಣ್‌ನ ಕಳ್ಸಿ ಕೊಡೊಕೆ ಕೊಂಚ ಬೇಸರ ಆಗ್ತಿತ್ತು.. ಆದರೂ ಆಲ್‌ದಿ ಬೆಸ್ಟ್ ಹೇಳ್ದೆ, ನೀವು ಹೇಳಿ. ಬದುಕನ್ನು ಬೇರೆಯವರ ಇಚ್ಛೆಯಂತೆ ಅಲ್ಲ, ನಮ್ಮ ಇಚ್ಛೆಯಂದೆ ಬದುಕಬೇಕು" ಎಂದು ರಜನಿನಿ ವೀಡಿಯೋ ಮುಗಿಸಿದ್ದಾರೆ.
"ನಾನು ನನ್ನ ಪ್ರೀತಿ" ಎಂದು ಕ್ಯಾಪ್ಷನ್ ಕೊಟ್ಟು ರಜಿನಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಸಾಕಷ್ಟು ಜನ ಲೈಕ್ಸ್ ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅರುಣ್ ಸ್ಪರ್ಧೆಗೆ ಆಲ್‌ದಿ ಬೆಸ್ಟ್ ಹೇಳುತ್ತಿದ್ದಾರೆ. 'ಅಮೃತವರ್ಷಿಣಿ' ಧಾರಾವಾಹಿ ಬಳಿಕ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿ ರಜಿನಿ ಗಮನ ಸೆಳೆದಿದ್ದರು. ಬಳಿಕ 'ಆತ್ಮಬಂಧನ' ಎಂಬ ಮತ್ತೊಂದು ಧಾರಾವಾಹಿಯಲ್ಲಿ ಮಿಂಚಿದ್ದರು.
ಸದ್ಯ 'ನೀ ಇರಲು ಜೊತೆಯಲ್ಲಿ' ಎಂಬ ಧಾರಾವಾಹಿಯಲ್ಲಿ ರಜಿನಿ ನಟಿಸುತ್ತಿದ್ದಾರೆ. ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದ ರಜನಿ ಏಳು ವರುಷದ ಗೆಳೆಯನ ಜೊತೆ ಏಳು ವರ್ಷ "ಸಪ್ತಪದಿ" ತುಳಿದು ಈಗ ಒಂದಾದ ಕ್ಷಣ ಜೀವನದ ಅತ್ಯಮೂಲ್ಯದ ದಿನ ಈ ದಿನಕ್ಕೆ ತುಂಬಾ ಪ್ರೀತಿ ತೋರಿದ ಎಲ್ಲರಿಗು ಚಿರಋಣಿ" ಎಂದು ಬರೆದುಕೊಂಡಿದ್ದರು.


Click it and Unblock the Notifications











