'ಭೂಮಿಗೆ ಬಂದ ಭಗವಂತ'ನ ಜೊತೆ ಪಾರ್ವತಿ ಅವತಾರವೆತ್ತಿದ ನಟಿ ರಜಿನಿ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಭೂಮಿಗೆ ಬಂದ ಭಗವಂತ' ಕೂಡಾ ಒಂದು. 'ಭೂಮಿಗೆ ಬಂದ ಭಗವಂತ' ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ ಧಾರಾವಾಹಿಯಲ್ಲಿ ಇದೀಗ ಹೊಸ ಪಾತ್ರದ ಎಂಟ್ರಿಯಾಗಿದೆ.

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಭಗವಂತನ ಮಡದಿ ಪಾರ್ವತಿಯ ಆಗಮನವಾಗಿದೆ.‌ ಅಂದ ಹಾಗೇ ಪಾರ್ವತಿಯಾಗಿ ನಟಿಸುತ್ತಿರುವುದು ಬೇರಾರೂ ಅಲ್ಲ, ರಜಿನಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಮೃತವರ್ಷಿಣಿ'ಯಲ್ಲಿ ನಾಯಕಿ ಅಮೃತಾಳಾಗಿ ನಟಿಸಿದ್ದರು ರಜಿನಿ. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನೆ ಮನ ಸೆಳೆದಿದ್ದ ರಜಿನಿ ಕರುನಾಡಿನ ಮಗಳು ಎಂದೇ ಗುರುತಿಸಿಕೊಂಡ ಬೆಡಗಿ.

Actress Rajini said that she is happy to be acting as Parvathi

ಇದೀಗ ಪಾರ್ವತಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ರಜಿನಿ ಈ ಸಂತಸದ ವಿಚಾರವನ್ನು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ. "ಪಾರ್ವತಿ ಪಾತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಪಾತ್ರ. ಯಾಕೆಂದರೆ, ನಾನು ಪ್ರತಿಸಲವೂ ದೇವಿಯ ಪಾತ್ರ ಮಾಡಿದಾಗಲೂ ವೀಕ್ಷಕರು ಒಪ್ಪಿಕೊಂಡು ಪ್ರೀತಿ ತೋರಿಸಿದ್ದಾರೆ. ತುಂಬಾ ಖುಷಿಯಾಗುತ್ತಿದೆ" ಎಂದು ಹೇಳಿದ್ದಾರೆ.

ಇದರ ಜೊತೆಗೆ "ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಶೋವಿನ ಒಂದು ಸಂಚಿಕೆಯಲ್ಲಿ ನಾನು ದೇವಿಯಾಗಿ ಕಾಣಿಸಿಕೊಂಡಿದ್ದೆ. ಆಗಲೂ ಕಿರುತೆರೆ ವೀಕ್ಷಕರು ಒಪ್ಪಿಕೊಂಡಿದ್ದರು. ತದ ನಂತರ ಈಗ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಮತ್ತೆ ಪಾರ್ವತಿಯಾಗಿ ನಟಿಸುತ್ತಿದ್ದೇನೆ. ಆ ಪಾತ್ರವನ್ನು ಕೂಡಾ ಜನ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆಯೂ ಇದೆ. ನಾನು ಕೂಡಾ ಕೊಟ್ಟಂತಹ ಪಾರ್ವತಿ ಪಾತ್ರವನ್ನು ನಿಭಾಯಿಸುವ ಸಂಪೂರ್ಣ ಪ್ರಯತ್ನ ಮಾಡಿದ್ದೇನೆ ಎಂದು ಹೇಳಬಹುದು" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹೇಳಿಕೊಂಡಿದ್ದಾರೆ ರಜಿನಿ.

Actress Rajini said that she is happy to be acting as Parvathi

ಇನ್ನು ಪಾರ್ವತಿ ಪಾತ್ರ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡರು ನಟಿ ರಜಿನಿ. "ನನಗೆ ಮೊದಲಿನಿಂದಲೂ ಪೌರಾಣಿಕ ಪಾತ್ರಗಳು ಎಂದರೆ ತುಂಬಾ ಇಷ್ಟ. ಅದೇ ತರಹದ ಪಾತ್ರಗಳನ್ನು ಮಾಡಬೇಕು ಎಂಬ ಆಸೆಯೂ ಇತ್ತು. ಹಾಗಾಗಿ ನಟಿಸುವ ಅವಕಾಶ ಬಂದಾಗ ಸಂತಸದಿಂದಲೇ ಒಪ್ಪಿಕೊಂಡೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹಂಚಿಕೊಂಡಿದ್ದಾರೆ ನಟಿ ರಜಿನಿ.

More from Filmibeat

English summary
Actress Rajini loves acting in mythological serials
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X