ನಟಿ ರಜಿನಿ ಬರ್ತ್‌ಡೇ ಮಧ್ಯರಾತ್ರಿ ಸೆಲಬ್ರೇಟ್ ಮಾಡಿದ್ಯಾರು?
ಕಿರುತೆರೆಯಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಇನ್ನೂ ಎಲ್ಲರ ಜೊತೆಗೆ ಇರುವ ನಟಿ ರಜಿನಿಗೆ ಹುಟ್ಟುಹಬ್ಬದ ಸಂಭ್ರಮ. ಎರಡು ವರ್ಷಗಳ ಹಿಂದೆಯೇ ಪ್ರೀತಿ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದ ನಟಿಯ ಪ್ರಿಯಕರ ಹುಟ್ಟುಹಬ್ಬವನ್ನು ಮಧ್ಯರಾತ್ರಿ ಕೇಕ್ ಕಟ್ ಮಾಡಿಸಿ ಆಚರಿಸಿದ್ದಾರೆ. ಆ ಫೋಟೊಗಳನ್ನು ಕೂಡ ನಟಿ ರಜಿನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಜಿನಿ ನಿತ್ಯ ಈಗ ಒಂದಲ್ಲಾ ಒಂದು ಕಾಮಿಡಿ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ವೀಡಿಯೋದಲ್ಲಿ ರಜಿನಿ ಮತ್ತು ಜಿಮ್ ಪಾಟ್ನರ್ ಆಗಿರುವ ಅರುಣ್ ಗೌಡ ಇದ್ದೇ ಇರುತ್ತಾರೆ.

ಒಮ್ಮೊಮ್ಮೆ ಅರುಣ್ ಮತ್ತು ರಜಿನಿ ಅಮ್ಮ-ಮಗನಂತೆಯೂ ಕಾಮಿಡಿ ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ಇವರಿಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ಕೇಕ್ ಕಟ್ ಮಾಡಿದ ರಜಿನಿ
ಹುಟ್ಟುಹಬ್ಬ ಹಿನ್ನೆಲೆ ನಟಿ ರಜಿನಿ ಮನೆಗೆ ಅರುಣ್ ಬಂದು ಕೇಕ್ ಕಟ್ ಮಾಡಿಸಿ ಬರ್ತ್‌ಡೇ ಆಚರಿಸಿದ್ದಾರೆ. ಅಲ್ಲದೇ, ನಟಿ ಸ್ವಾತಿ ರಾಯಲಾ, ಹಿರಿಯ ನಟಿ ಹೇಮಾ ಚೌಧರಿ, ನಟಿ ಸುನೇತ್ರಾ ಪಂಡಿತ್ ಕೂಡ ರಜಿನಿ ಅವರಿಗೆ ವಿಶ್ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ನಟಿ ರಜಿನಿ ಅವರು ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದು, ಹುಟ್ಟುಹಬ್ಬದ ದಿನ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ನಟಿ ರಜಿನಿ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಬಳಿಕ ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ 'ನಾರಿಗೊಂದು ಸೀರೆ' ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದರು.
ಪ್ರಿಯಕರನ ಬಗ್ಗೆ ಹೇಳಿದ್ದ ನಟಿ
'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲಿ ಮಾತನಾಡುವಾಗ ನಟಿ ರಜಿನಿ ತಮಗೂ ಒಬ್ಬ ಗೆಳೆಯನಿದ್ದಾನೆ ಎಂಬ ಸತ್ಯವನ್ನು ಹೇಳಿದ್ದರು. ಆದರೆ, ಆತ ಯಾರು ಎಂಬ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಆದರೆ, ಕಳೆದ ವರ್ಷ ಕಪಲ್ ಗೋಲ್ ಎಂಬ ಪೋಸ್ಟ್ ಹಂಚಿಕೊಂಡಿದ್ದರು. ಇದರಲ್ಲಿ ಜಿಮ್ ಪಾರ್ಟ್ನರ್ ಅರುಣ್ ಗೌಡ ಹಾಗೂ ತಮ್ಮ ಕೈಯನ್ನು ಹಾಕಿದ್ದು, ಮುಷ್ಟಿ ಹಿಡಿದು ನರಗಳನ್ನು ತೋರಿಸುವ ಯತ್ನ ಮಾಡಿದ್ದರು. ಇದಕ್ಕೆ ದಿ ಬೆಸ್ಟ್ ವೇ ಟು ಪ್ರಿಡಿಕ್ಟ್ ಫ್ಯೂಚರ್ ಈಸ್ ಟು ಕ್ರಿಯೇಟ್ ಟುಗೆದರ್ ಎಂದು ಬರೆದುಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ನಟಿ ರಜಿನಿ ಅವರು ಮತ್ತು ತಮ್ಮ ಜಿಮ್ ಪಾಟ್ನರ್ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ನಿಜ ಏನು ಎಂಬುದನ್ನು ನಟಿ ರಜಿನಿ ಅವರೇ ತಿಳಿಸಿಕೊಡಬೇಕಿದೆ.
ರಜಿನಿ ಬಣ್ಣದ ಪಯಣ
ನಟಿ ರಜಿನಿ ಅರುಣ್ ಗೌಡ ಎಂದು ಇಬ್ಬರೂ ಸೇರಿ ಇನ್ ಸ್ಟಾಗ್ರಾಂ ಖಾತೆಯನ್ನು ಕೂಡ ಹೊಂದಿದ್ದಾರೆ. ಹಾಗಿದ್ದರೆ, ಅಭಿಮಾನಿಗಳು ಗೆಸ್ ಮಾಡಿದಂತೆ ಇವರಿಬ್ಬರು ರೀಲ್ಸ್ ಮತ್ತು ಜಿಮ್ ಅಷ್ಟೇ ಅಲ್ಲ ಲೈಫ್ ಪಾಟ್ನರ್ಸ್ ಕೂಡ ಆಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ನಟಿ ರಜಿನಿ ಅವರೇ ಸ್ಪಷ್ಟನೆ ನೀಡಬೇಕಿದೆ. ಇನ್ನು ನಟಿ ರಜಿನಿ 'ಅಮೃತವರ್ಷಿಣಿ', 'ಆತ್ಮ ಬಂಧನ', 'ಹಿಟ್ಲರ್ ಕಲ್ಯಾಣ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ, ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್ಸ್, ಮಜಾ ಟಾಕೀಸ್, ಸೂಪರ್ ಕ್ವೀನ್, ಕುಕ್ಕರಿ ಶೋಗಳಲ್ಲಿ ಭಾಗವಹಿಸಿದ್ದರು. 'ಅಂಬುಜ', 'ಅಸುರನ ಕೈಯಲ್ಲಿ ಪಾರಿಜಾತ', 'ಡವ್ ಮಂಜ' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











