ಮುದ್ದು ವಿಲನ್ ನಟಿ ರಮೋಲಾ ಹೊಸ ಜರ್ನಿ!
ಮುದ್ದು ಮುದ್ದಾಗಿ ಕಾಣುತ್ತಾ, ಸೈಲೆಂಟ್ ವಿಲನ್, ನಟಿ ರಮೋಲಾ ಅವರು ನಿಮಗೆ ನೆನಪಿದ್ದಾರಾ.? ನೋಡೋದಕ್ಕೆ ಪುಟ್ಟದಾಗಿ ಕಂಡರೂ ಅದೊಂದು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದವರು. ಈಗ ಕಿರುತೆರೆಯಿಂದಲೇ ಕಾಣೆಯಾಗಿದ್ದಾರೆ.
ರಮೋಲಾ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. ಕನ್ನಡತಿ ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ. ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಫ್ಯಾಷನ್ ಡಿಸೈನಿಂಗ್ ಮಾಡುತ್ತಿರುವ ರಮೋಲಾ ಅವರಿಗೆ ಆಫರ್ ಗಳಿಗೇನು ಕಡಿಮೆ ಇಲ್ಲ. ಆದರೂ, ತಮ್ಮ ಗುರಿ ಸಾಧನೆಗಾಗಿ ರಮೋಲಾ ಕಾಯುತ್ತಿದ್ದಾರೆ. ಆದರೆ ರಮೋಲಾ ಅವರನ್ನು ನೋಡಲು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

ಮಾಡೆಲ್ ಕಮ್ ನಟಿ!
ನಟಿ ರಮೋಲಾ ಅವರು ಮಾಡೆಲ್. ಮಾಡೆಲಿಂಗ್ ಜೊತೆಗೆ ನಟನೆಯನ್ನೂ ಮಾಡಿದ್ದು, ಕನ್ನಡತಿ ಎಂಬ ಧಾರಾವಾಹಿ ಮೂಲಕ ಮನೆ ಮಾತಾದರು. ಈ ಧಾರಾವಾಹಿಯಲ್ಲಿ ರಮೋಲಾ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತರೆ ಧಾರಾವಾಹಿಗಳಿಗೆ ಹೋಲಿಸಿಕೊಂಡರೆ ಇದರಲ್ಲಿನ ವಿಲನ್ ಪಾತ್ರ ಡಿಫರೆಂಟ್ ಆಗಿದೆ. ವಿಲನ್ ಒಂದೊಂದು ಬಾರಿ ಒಂದೊಂದು ರೀತಿ ನಡೆದುಕೊಳ್ಳುತ್ತಿದ್ದರು, ಇನ್ನು ರಮೋಲಾ ಅವರು ನೋಡಲು ವಿಲನ್ ರೀತಿಯೇ ಕಾಣುತ್ತಿರಲಿಲ್ಲ. ಸೈಲೆಂಟ್ ಆಗಿರುತ್ತಿದ್ದರು. ತಮ್ಮ ಕೆಲಸವನ್ನು ಸದ್ದಿಲ್ಲದೇ ಮಾಡುವ ಪಾತ್ರ ಅದು.

ವಿಲನ್ ಪಾತ್ರದ ಮೂಲ ಸದ್ದು!
ರಮೋಲಾ ತಮ್ಮ ಪಾತ್ರದ ಮೂಲಕವೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ನಿತ್ಯ, ರಮೋಲಾ ಯಾವ ಐಡಿಯಾ ಮಾಡುತ್ತಾರೆ ಎಂದು ತಿಳಿಯಲು ಜನ ಸೀರಿಯಲ್ ನೋಡುತ್ತಿದ್ದರು. ಆದರೆ ಕಾರಣಾಂತರಗಳಿಂದ ರಮೋಲಾ ಧಾರಾವಾಹಿಯಿಂದ ಅರ್ಧಕ್ಕೆ ಹೊರ ಬಂದಿದ್ದರು. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ತಮ್ಮ ಓದನ್ನು ಮುಗಿಸುವ ಸಲುವಾಗಿ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದರು. ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಪೂರೈಸಲು ಧಾರಾವಾಹಿಯನ್ನು ಕೈ ಬಿಡಬೇಕಾಯ್ತು. ಧಾರಾವಾಹಿಗೆ ಸಮಯ ಕೊಟ್ಟರೆ ಕಾಲೇಜಿಗೆ ಹೋಗಲು ಆಗಲ್ಲ ಎಂದು ಹೇಳಿದ್ದರು.

ಸಿನಿಮಾಗಳಲ್ಲಿ ರಮೋಲಾ ನಟನೆ!
ನಟಿ ರಮೋಲಾ ಅವರು ಬೆಳ್ಳಿ ತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಮೂರು ಸಿನಿಮಾಗಳು ರಿಲೀಸ್ ಆಗಲಿಲ್ಲ. ಆದರೆ ಧಾರಾವಾಹಿಯ ನಂತರ ರಿಚ್ಚಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆದಿದ್ದು, ರಿಲೀಸ್ ಆಗಬೇಕಿದೆ. ಧಾರಾವಾಹಿ ಮೂಲಕ ಜನರ ಜೊತೆಗೆ ಬೆರೆಯುವುದು ಅಬ್ಯಾಸವಾಯ್ತು ಎಂದು ಹೇಳಿದ್ದಾರೆ. ಇನ್ನು ವಿಲನ್ ಪಾತ್ರದಿಂದಲೇ ರಮೋಲಾ ಅವರನ್ನು ಗುರುತಿಸುತ್ತಿದ್ದರೆ ಎಂದು ಹೇಳಿಕೊಂಡಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಬ್ಯುಸಿ!
ನಟಿ ರಮೋಲಾಗೆ ಈಗಾಗಲೇ ಪರಭಾಷೆಗಳಿಂದಲೂ ಆಫರ್ ಗಳು ಬರುತ್ತಿವೆ. ಆದರೆ ರಮೋಲಾ ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ರಮೋಲಾ ನಟನೆ ಎಂದರೆ ಒಲವು, ಫ್ಯಾಷನ್ ಡಿಸೈನಿಂಗ್ ಎಂದರೆ ಬ್ಯುಸಿನೆಸ್ ಅಂತೆ. ಹೀಗಾಗಿ ತಮ್ಮ ಆರ್ಥಿಕ ಪರೀಸ್ಥಿತಿಯನ್ನು ಸ್ಥಿರವಾಗಿಡಲು ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದಿದ್ದಾರೆ. ಆದರೆ ಇನ್ ಸ್ಟಾ ಗ್ರಾಂನಲ್ಲಿ ಫುಲ್ ಆಕ್ಟೀವ್ ಆಗಿರುವ ರಮೋಲಾ ಅವರು ಆಗಾಗ ಡಿಫರೆಂಟ್ ಲುಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.


Click it and Unblock the Notifications











