ಸೀತಾರಾಮದಲ್ಲಿ ಮಾಯವಾಗಿ ರೆಸಾರ್ಟ್ ನಲ್ಲಿ ಸ್ನೇಹಿತರೊಂದಿಗೆ ಪ್ರತ್ಯಕ್ಷವಾದ ನಟಿ ರಮೋಲಾ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮನ ಹಿಂದೆ ಬಿದ್ದಿದ್ದ ಚಾಂದಿನಿಗೆ ಮತ್ತೆ ಮತ್ತೆ ನಿರಾಸೆಯಾಗಿದೆ. ಭಾರ್ಗವಿ ಮಾತನ್ನು ಕೇಳಿಕೊಂಡು ರಾಮನನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಳು. ರಾಮ್ ಮತ್ತು ಚಾಂದಿನಿ ಕಾಲೇಜು ದಿನಗಳಲ್ಲೇ ಪ್ರೀತಿಸುತ್ತಿದ್ದರು. ಆದರೆ, ಚಾಂದಿನಿ ಭಾರ್ಗವಿ ಮಾತನ್ನು ಕೇಳಿಕೊಂಡು ನಾಟಕ ಮಾಡುತ್ತಿದ್ದಳು. ಅದು ರಾಮ್ ಗೆ ಗೊತ್ತೇ ಆಗಲಿಲ್ಲ. ಭಾರ್ಗವಿ ಬಳಿ ಕೈತುಂಬಾ ಹಣ ಪಡೆದು ಇದ್ದಕ್ಕಿದ್ದ ಹಾಗೆಯೇ ಮಾಯವಾಗಿದ್ದಳು. ಚಾಂದಿನಿ ಕಾಣೆಯಾದ ಬಳಿಕ ಜೀವನವೇ ಬೇಡ ಎಂದು ರಾಮ್ ಸೀದಾ ಮಲೇಶಿಯಾಗೆ ಹೋಗಿದ್ದ.

ಮೋಸ ಮಾಡಿದ್ದಲ್ಲದೇ ಮೋಸ ಹೋದ ಚಾಂದಿನಿ

ಅಶೋಕ್ ಗೆಳೆಯ ರಾಮ್ ಬದುಕನ್ನು ಕಂಡು ಬಹಳ ಬೇಸರ ಮಾಡಿಕೊಳ್ಳುತ್ತಿದ್ದ. ಏನು ರಾಮ್ ಮನಸ್ಸನ್ನು ಬದಲಾಯಿಸಬೇಕು ಎಂದು ಬಹಳ ಪ್ರಯತ್ನಪಟ್ಟ. ಆದರೆ, ರಾಮ್ ಚಾಂದಿನಿಯನ್ನು ಮರೆತು ಬದುಕುವುದಕ್ಕೆ ಕೊಂಚವೂ ಬಯಸಲಿಲ್ಲ. ಆದರೆ, ಸೀತಾಳನ್ನು ಭೇಟಿ ಮಾಡಿದ ಬಳಿಕ ರಾಮ್ ತನ್ನ ಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡ. ಈಗ ಸೀತಾ ಮತ್ತು ರಾಮ್ ಪ್ರೀತಿ ಮಾಡುತ್ತಿದ್ದು, ಇಬ್ಬರ ಪ್ರೀತಿಗೆ ಮದುವೆಯ ಮುದ್ರೆ ಒತ್ತುವುದು ಮಾತ್ರವೇ ಬಾಕಿ ಇದೆ. ಆದರೆ, ಚಾಂದಿನಿ ಮತ್ತೆ ಬಂದು ರಾಮ್ ಗೆ ಹತ್ತಿರವಾಗಲು ಯತ್ನಿಸಿದಳು. ಆದರೆ, ರಾಮ್ ಧೃಢ ನಿರ್ಧಾರ ಚಾಂದಿನಿಗೆ ಜಾಗ ಮಾಡಿಕೊಡಲಿಲ್ಲ.

Actress ramola enjoying holiday with friends

ಚಿಕ್ಕಿ ಮಾತನ್ನು ಕೇಳಿಕೊಂಡು ಆಸೆಯಿಂದಿರುವ ಚಾಂದಿನಿ

ಆದರೆ, ಚಾಂದಿನಿಗೆ ರಾಮ್ ಮೇಲಿನ ಪ್ರೀತಿ ಹಾಗೆಯೇ ಇದೆ. ಅದಲ್ಲದೇ, ಭಾರ್ಗವಿ ಬೇರೆ ಆಸೆ ಮೇಲೆ ಆಸೆ ತೋರಿಸುತ್ತಿದ್ದಾಳೆ. ನೀನು ರಾಮ್ ಇಬ್ಬರೂ ಫಾರಿನ್ ಗೆ ಹೋಗಿ ಬಿಡಿ ಎಂದು ಹೇಳಿದ್ದಾಳೆ. ಇದೇ ಆಸೆಯಲ್ಲಿದ್ದ ಚಾಂದಿನಿಗೆ ಅಶೋಕ್ ಶಾಕ್ ಕೊಟ್ಟಿದ್ದ. ಭಾರ್ಗವಿ ಮಾತನ್ನು ನಂಬಿಕೊಂಡಿರುವ ಚಾಮದಿನಿ ಈಗಲೂ ತಾನು ದೇಸಾಯಿ ಕುಟುಂಬದ ಸೊಸೆಯಾಗುವೆ ಎಂದುಕೊಂಡೇ ಇದ್ದಾಳೆ. ಸದ್ಯ ಚಾಂದಿನಿ ಕಾಣೆಯಾಗಿದ್ದಾಳೆ. ಫೋನ್ ಆಫ್ ಮಾಡಿಕೊಂಡಿದ್ದು, ಎಲ್ಲಿಗೆ ಹೋಗಿದ್ದಾಳೆ. ಏನು ಮಾಡುತ್ತಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ. ಅಶೋಕ್ ಅಂತೂ ಚಾಂದಿನಿ ಅನ್ನು ಹುಡುಕಿಸುತ್ತಿದ್ದಾನೆ. ಚಾಂದಿನಿ ಸೀರಿಯಲ್ ನಿಂದ ಸದ್ಯ ಕಾಣೆಯಾಗಿದ್ದಾಳೆ.

ಸೀರಿಯಲ್ ನಲ್ಲಿ ಕಾಣದ ನಟಿ ರಮೋಲಾ

ಆದರೆ, ಸೀರಿಯಲ್ ನಿಂದ ಮಾಯವಾಗಿರುವ ಚಾಂದಿನಿ ಈಗ ರೆಸಾರ್ಟ್ ಒಂದರಲ್ಲಿ ಪತ್ತೆಯಾಗಿದ್ದಾಳೆ. ಹೌದು, ನಟಿ ರಮೋಲ ಅವರು ಮೊದಲ ಬಾರಿಗೆ ಗೆಳೆಯರ ಜೊತೆಗೆ ಎಂಜಾಯ್ ಮಾಡಿರುವ ಫೋಟೋಗಳು ವೈರಲ್ ಆಗಿವೆ. ನಟಿ ರಮೋಲಾ ಅವರು ಹೆಚ್ಚಾಗಿ ಒಬ್ಬರೇ ಇರುತ್ತಿದ್ದರು. ಆದರೆ, ಈ ಬಾರಿ ಸಹ ಕಲಾವಿದರೊಂದಿಗೆ ಟ್ರಿಪ್ ಹೋಗಿದ್ದಾರೆ. ರೆಸಾರ್ಟ್ ಒಂದರಲ್ಲಿ ಪ್ರಕೃತಿ ನಡುವೆ ಎಂಜಾಯ್ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದ್ದಾರೆ.

ಗೆಳೆಯರ ಜೊತೆಗೆ ಎಂಜಾಯ್ ಮಾಡಿದ ನಟಿ

ಇನ್ನು ರಮೋಲಾ ಅವರ ಜೊತೆಗೆ ನಟ ಕಮ್ ನಿರೂಪಕ ನಿರಂಜನ್ ದೇಶಪಾಂಡೆ, ನಟ ವಿಶ್ವನಾಥ್, ನಟಿ ಯಶಸ್ವಿನಿ, ನಟಿ ಶುಭಾ ರಕ್ಷಾ ಸೇರಿದಂತೆ ಹಲವರು ಭಾಗಿ ಆಗಿದ್ದಾರೆ. ಎಲ್ಲರೂ ರೆಸಾರ್ಟ್ ನಲ್ಲಿ ಎಂಜಾಯ್ ಮಾಡಿದ್ದಾರೆ. ಈಗಷ್ಟೇ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಶೂಟಿಂಗ್ ನಿಂದ ಎಲ್ಲರೂ ಒಟ್ಟಿಗೆ ಬ್ರೇಕ್ ಪಡೆದು ಎಂಜಾಯ್ ಮಾಡಿದ್ದಾರೆ. ಎಲ್ಲರೂ ಸೇರಿ ಮಜಾ ಮಾಡಿರುವ ಫೋಟೋಸ್ ಗಳನ್ನು ಗೆಳೆಯರು ಹಂಚಿಕೊಂಡಿದ್ದಾರೆ.

More from Filmibeat

English summary
Actress ramola went to trip. In resort enjoying holiday with friends
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X