ಮತ್ತೆ ಕಿರುತೆರೆಗೆ ರಮೋಲಾ ಎಂಟ್ರಿ: ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗೀತಾ..?
ಕಿರುತೆರೆಯಿಂದ ಮಾಯವಾಗಿದ್ದ ನಟಿ ರಮೋಲಾ ಈಗ ರೀ ಎಂಟ್ರಿಕೊಟ್ಟಿದ್ದಾರೆ. ರಮೋಲಾ ಅವರನ್ನು ಹೊಸ ಧಾರಾವಾಹಿಯಲ್ಲಿ ಮತ್ತೆ ಕಿರುತೆರೆ ಸ್ಕ್ರೀನ್ ಮೇಲೆ ನೋಡಿದ ಅಭಿಮಾನಿಗಳು ಖುಷ್ ಆಗಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಮೋಲಾ ರೀಲ್ಸ್‌ಗಳನ್ನು ಮಾಡುತ್ತಲೇ ಇರುತ್ತಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚಿದ್ದ ರಮೋಲಾ ಅಭಿಮಾನಿಗಳ ಹಾಟ್ ಫೇವರಿಟ್ ಬೆಡಗಿ.
'ಕನ್ನಡತಿ' ಧಾರಾವಾಹಿಯಲ್ಲಿ ಕೆಲವೇ ದಿನಗಳ ಕಾಲ ನಟಿಸಿದ್ದರು. ಹಾಗಿದ್ದರೂ ಕೂಡ ಈಗಲೂ ಪ್ರೇಕ್ಷಕರು ರಮೋಲಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ ರಮೋಲಾ ಅವರು ಕಿರುತೆರೆಯನ್ನು ತೊರೆದು ವರ್ಷವೇ ಆಗಿ ಹೋಗಿದೆ.

ಸದಾ ಡಿಫರೆಂಟ್ ಲುಕ್ ನಿಂದಲೇ ಕಾಣಿಸಿಕೊಳ್ಳುವ ನಟಿ ರಮೋಲಾ ಅವರು ಓದಿ ಬೆಳೆದಿದ್ದೆಲ್ಲಾ ಹಾಸ್ಟೆಲ್ ನಲ್ಲಿ. ಡ್ಯಾನ್ಸರ್ ಆಗಿರುವ ರಮೋಲಾ ಅವರು ಬೆಲ್ಲಿ ಡ್ಯಾನ್ಸ್ ಅನ್ನೂ ಕಲಿತಿದ್ದಾರೆ. ರಮೋಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ರೀಲ್ಸ್ ಗಳನ್ನು ಹಾಕುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಮಾಡೆಲ್ ಆಗಿದ್ದ ರಮೋಲಾ
ಮೊದಲು ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಆದರೆ, ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಪೂರೈಸಲು ಧಾರಾವಾಹಿಯನ್ನು ಅರ್ಧಕ್ಕೆ ಕೈ ಬಿಟ್ಟ ನಟಿ, ಸಿನಿಮಾ ಕ್ಷೇತ್ರದಲ್ಲೂ ಕಾಣಿಸಿಕೊಂಡರು. 'ರಿಚ್ಚಿ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು. 2017 ರಿಲಾಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
'ಅಮೃತಧಾರೆ'ಯಲ್ಲಿ ಕಾಣಿಸಿಕೊಂಡ ನಟಿ
ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಮೋಲಾ ಅವರನ್ನು ಮತ್ತೆ ಧಾರಾವಾಹಿಯಲ್ಲಿ ನೋಡಿದ ಕೂಡಲೇ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ರಮೋಲಾ ಅವರದ್ದು ಸಣ್ಣ ಪಾತ್ರ. ನಾಯಕ ಗೌತಮ್ ದಿವಾನ್‌ಗೆ ಮದುವೆ ಮಾಡಲು ಸ್ನೇಹಿತರು ಶತಪ್ರಯತ್ನ ಮಾಡುತ್ತಿರುತ್ತಾರೆ. ಹಾಗಾಗಿ ಹುಡುಗಿಯನ್ನು ಹುಡುಕಿ ಭೇಟಿ ಮಾಡಿಸುತ್ತಾರೆ.

ಗೌತಮ್ ನೇಮ್ ಹಾಗೂ ಫೇಮ್ ನೋಡಿ ಬಂದ ರಮೋಲಾ ಅವರು ರಶ್ಮಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕ ಮದುವೆಯಾಗಲು ಇಚ್ಛಿಸದೇ, ತನ್ನ ಬಳಿ ಇರುವ ಹಣವೆಲ್ಲಾ ಈಗ ಫ್ರೀಜ್ ಆಗುತ್ತೆ, ಸದ್ಯಕ್ಕೆ ನಾನು ಲಾಸ್‌ನಲ್ಲಿದ್ದೇನೆ ಎನ್ನುತ್ತಿದ್ದ ಹಾಗೆಯೇ ರಶ್ಮಿಕಾ ಇವನ ಸಹವಾಸವೇ ಬೇಡ ಎಂದು ಹೊರಟು ಬಿಡುತ್ತಾಳೆ.
ತೆರೆಮೇಲೆ ನೋಡಲು ಕಾತುರ
ಫ್ಯಾಷನ್ ಡಿಸೈನಿಂಗ್ ಓದುವ ಸಲುವಾಗಿ ನಟನೆಯನ್ನು ಅರ್ಧಕ್ಕೆ ಬಿಟ್ಟಿದ್ದ ರಮೋಲಾ ಅವರು, ಮತ್ತೆ ಕಿರುತೆರೆಗೆ ಬಂದಿರುವುದನ್ನು ನೋಡಿದರೆ, ಓದು ಮುಗಿದಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಹಾಗೇನಾದರೂ ಆದರೆ, ಫ್ಯಾಷನ್ ಡಿಸೈನಿಂಗ್ ಬಿಸಿನೆಸ್, ನಟನೆ ಇಷ್ಟ ಎಂದಿದ್ದ ರಮೋಲಾ ಅವರು ಒಳ್ಳೆಯ ಪಾತ್ರ ಸಿಕ್ಕರೆ, ಮತ್ತೆ ಕಿರುತೆರೆಯಲ್ಲಿ ನಟಿಸಬಹುದು.
ಇನ್ನು ರಮೋಲಾ ನಟನೆಯ ರಿಚ್ಚಿ ಸಿನಿಮಾದ ಹಾಡುಗಳು ಹಿಟ್ ಆಗಿದ್ದು, ಒಂದು ಪ್ಯಾಥೋ ಸಾಂಗ್ ಮತ್ತೊಂದು ಮೆಲೋಡಿ ಹಾಡು ಬಿಡುಗಡೆಯಾಗಿದೆ. ಚಿತ್ರದ ಹಾಡುಗಳನ್ನು ನೋಡಿ, ತೆರೆಮೇಲೆ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











