ಸೆಟ್‌ನಲ್ಲಿದ ಅವಮಾನದಿಂದ ಆ ಸೀರಿಯಲ್‌ನಿಂದ ಹೊರ ಬಂದೆ: ನಟಿ ರಮೋಲಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ 'ಕನ್ನಡತಿ' ತನ್ನದೇ ಆದ ಇಮೇಜ್ ಇಟ್ಟುಕೊಂಡು ಮೆರೆದಿತ್ತು. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಕೂಡ ಅವರದ್ದೇ ಆದ ಛಾಪನ್ನು ಮೂಡಿಸಿದ್ದವು.ಇವುಗಳಲ್ಲಿ ಸಾನಿಯಾ ಪಾತ್ರ ಕೂಡ ಒಂದು.
'ಕನ್ನಡತಿ' ಧಾರಾವಾಹಿಯ ಸಾನಿಯಾ ಪಾತ್ರವನ್ನು ರಮೋಲಾ ನಿಭಾಯಿಸುತ್ತಿದ್ದರು. ಆದರೆ, 'ಕನ್ನಡತಿ' ಧಾರಾವಾಹಿಯಿಂದ ಅರ್ಧದಲ್ಲೇ ರಮೋಲಾ ಗುಡ್ ಬೈ ಹೇಳಿ ಹೊರಟು ಹೋದರು. ಸಾನಿಯಾ ಪಾತ್ರಕ್ಕೆ ರಮೋಲಾ ಗುಡ್ ಬೈ ಹೇಳಿದ ಕಾರಣದಿಂದಾಗಿ ಆ ಜಾಗಕ್ಕೆ ಆರೋಹಿ ನೈನಾ ಬಂದು ಆ ಪಾತ್ರವನ್ನು ಮುಂದುವರಿಸಿದ್ದರು.

ದಿಢೀರ್ ತೀರ್ಮಾನ ಆಗಿರಲಿಲ್ಲ
ಈಗ ವಿಷಯ ಏನಪ್ಪಾ ಅಂದ್ರೆ, ಕನ್ನಡತಿ ಧಾರಾವಾಹಿಗೆ ದಿಢೀರ್ ಅಂತ ಗುಡ್ ಬೈ ಹೇಳಿ ಹೋದಂತಿದ್ದ ರಮೋಲಾ ಈಗ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಅವರ ಈ ತೀರ್ಮಾನ ದಿಢೀರ್ ನಿರ್ಧಾರ ಆಗಿರಲಿಲ್ಲವಂತೆ. ಸೀರಿಯಲ್ ಬಿಡುವ ಬಗ್ಗೆ ಮುಂಚಿನಿಂದಲೇ ಯೋಚಿಸಿದ್ದೆ ಎಂದು ರಮೋಲಾ ಅವರೇ ಹೇಳಿದ್ದಾರೆ.
ಹೊಸ ಕಲಾವಿದರಿಗೆ ಮಾರ್ಯಾದೆ ಸಿಗುತ್ತಿರಲಿಲ್ಲ
ರಮೋಲಾ ಹೇಳಿದ ಕಾರಣವೆಂದರೆ 'ಕನ್ನಡತಿ' ಸೆಟ್‌ನಲ್ಲಿ ರಮೋಲಾಗೆ ಅವಮಾನ ಆಗುತ್ತಿತ್ತಂತೆ. ಈ ಕುರಿತಂತೆ ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ರಮೋಲಾ ಮುಕ್ತವಾಗಿ ಮಾತನಾಡಿದ್ದಾರೆ. "ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ ನಂತರವೇ ನಾನು 'ಕನ್ನಡತಿ'ಯಲ್ಲಿ ಕ್ಯಾಮರಾ ಫೇಸ್ ಮಾಡಿದ್ದೆ. ಆದರೆ, 'ಕನ್ನಡತಿ' ಸೆಟ್‌ನಲ್ಲಿ ಹೊಸಬರಿಗೆ ಸರಿಯಾಗಿ ಮರ್ಯಾದೆ ಸಿಗುತ್ತಿರಲಿಲ್ಲ ಮತ್ತು ಅವಮಾನವಾಗುತ್ತಿತ್ತು. ಇದರಿಂದ ಬೇಜಾರಾಗಿತ್ತು" ಎಂದು ರಮೋಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಲ್ಲದೆ " ಅವಮಾನದಿಂದ ಸೆಟ್‌ನಲ್ಲಿ ಗಮನ ಹರಿಸೋಕೆ ಆಗುತ್ತಿರಲಿಲ್ಲ. ಜೊತೆಗೆ ಸಿಕ್ಕಾಪಟ್ಟೆ ರಿಸ್ಟ್ರಿಕ್ಷನ್ ಬೇರೆ ಇತ್ತು. ಇವೆಲ್ಲವುಗಳಿಂದಾಗಿ ಕೆಲಸ ಮಾಡೋಕೆ ಇಷ್ಟ ಆಗುತ್ತಿರಲಿಲ್ಲ. ಪರ್ಫಾಮೆನ್ಸ್ ಇಂಪ್ರೂವ್ ಆದರೂ ಅವಮಾನ ಮಾತ್ರ ನಿಲ್ಲುತ್ತಿರಲಿಲ್ಲ" ಎಂದಿದ್ದಾರೆ.
ವಿಭಿನ್ನ ಪಾತ್ರಕ್ಕೆ ಜೀವ ತುಂಬುವ ಬಯಕೆ
ಜೊತೆಗೆ "ರಮೋಲಾಗೆ ಪೇಮೆಂಟ್ ವಿಚಾರದಲ್ಲೂ ತೃಪ್ತಿ ಇರಲಿಲ್ಲವಂತೆ. ಪೇಮೆಂಟನ್ನು ತುಂಬಾ ಚೆನ್ನಾಗಿತ್ತು ಅಂತ ಹೇಳೋಕೆ ಆಗಲ್ಲ" ಅಂದಿದ್ದಾರೆ ರಮೋಲಾ. ಹಾಗಾಗಿ ಕನ್ನಡತಿ ಧಾರಾವಾಹಿಯಲ್ಲಿ ಮುಂದುವರೆಯಲು ಇಷ್ಟವಿಲ್ಲದೆ ರಮೋಲಾ ಹೊರಬಂದರಂತೆ.
ಅಂದಹಾಗೆ, ಈ ನಟಿಗೆ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬ ಕನಸಿದೆ. ಸದ್ಯ ಫ್ಯಾಶನ್ ಡಿಸೈನಿಂಗ್ ಕೋರ್ಸ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಇವರು ಉತ್ತಮ ಬೆಲ್ಲಿ ಡ್ಯಾನ್ಸರ್ ಕೂಡ ಹೌದು. ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಹಲವಾರು ಅವಕಾಶಗಳನ್ನು ಪಡೆದುಕೊಂಡಿರುವ ನಟಿ ಎರಡು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.


Click it and Unblock the Notifications











