ಪುಟ್ಟಕ್ಕನ ಮಗಳ ಪಾಲಿನ ವಿಲನ್ ರಾಧಾ ರಿಯಲ್‌ ಲೈಫ್‌ನಲ್ಲಿ ಡಯೆಟಿಷಿಯನ್ ಅನ್ನೋದು ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಬಹಳಷ್ಟು ಖ್ಯಾತಿ ಪಡೆದಿದೆ. ಹಿರಿಯ ಕಲಾವಿದೆ ಉಮಾಶ್ರೀ ಅವರ ಅಭಿನಯದಲ್ಲಿ ಬರುತ್ತಿರುವ ಈ ಧಾರಾವಾಹಿ ಹಲವು ಹೊಸ ಕಲಾವಿದರನ್ನು ಹೊಂದಿದೆ.

ಈ ಧಾರಾವಾಹಿಯಲ್ಲಿ ರಾಧಾ ಪಾತ್ರವನ್ನು ಮಾಡುತ್ತಿರುವ ನಟಿಯ ಹೆಸರು ರಮ್ಯಾ ರಾಜು. ನಟಿ ರಮ್ಯಾ ರಾಜು ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಖಳನಾಯಕಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹೌದು, ರಾಧಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರೇ ನಟಿ ರಮ್ಯಾ ರಾಜು.

Actress Ramya Raju is impressing with the role of Radha in Puttakkana Makkalu Serial

ರಾಧಾ ಪಾತ್ರ ಸದಾ ಸ್ನೇಹಾಳಿಗೆ ಕೆಟ್ಟದ್ದನ್ನು ಬಯಸುತ್ತಾ ಕುತಂತ್ರವನ್ನು ಹೂಡುತ್ತಿರುತ್ತದೆ. ಮದುವೆಯಾಗಿದ್ದರೂ ಕಂಠಿಯನ್ನು ಪಡೆದುಕೊಳ್ಳುವ ದುರಾಸೆಯಲ್ಲಿ ರಾಧಾ ಆಗಾಗ ಬೇರೆ ಬೇರೆ ಹುನ್ನಾರಗಳನ್ನು ಹೂಡುತ್ತಿರುತ್ತಾಳೆ. ಅಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ರಮ್ಯಾ ರಾಜು.

ಅಂದಹಾಗೆ ನಟಿ ರಮ್ಯಾ ರಾಜು ಅವರು ಕಿರುತೆರೆಗೆ ಹೊಸಬರೇನಲ್ಲ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೂ ಮೊದಲು ಇತರ ಹಲವಾರು ಧಾರಾವಾಹಿಗಳಲ್ಲಿ ಈಕೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಟಿಸಿದ್ದರು ನಟಿ ರಮ್ಯಾ ರಾಜು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿಯಲ್ಲೂ ಈಕೆ ಪಾತ್ರ ಒಂದನ್ನು ಮಾಡಿದ್ದಾರೆ. ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ 'ಕೆಂಡಸಂಪಿಗೆ' ಧಾರಾವಾಹಿಯಲ್ಲೂ ನಿತ್ಯಾ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ ನಟಿ ರಮ್ಯಾ ರಾಜು.

Actress Ramya Raju is impressing with the role of Radha in Puttakkana Makkalu Serial

ಸದ್ಯಕ್ಕೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಇವರು ನಾಯಕಿ ಸ್ನೇಹರೊಂದಿಗೆ ಆಗಾಗ ಚಟಪಟಿಯ ಸನ್ನಿವೇಶಗಳನ್ನು ರಾಧಾ ಪಾತ್ರದ ಮೂಲಕ ಫೇಸ್ ಮಾಡುತ್ತಿರುತ್ತಾರೆ.

ಇಷ್ಟೇ ಅಲ್ಲದೆ ಫಿಟ್ನೆಸ್ ಫ್ರೀಕ್ ಆಗಿರುವ ನಟಿ ರಮ್ಯಾ ರಾಜು, ಪ್ರತಿದಿನ ವರ್ಕೌಟ್ ಸೇರಿದಂತೆ ಹಲವಾರು ರೀತಿಯ ಫಿಟ್ನೆಸ್ ವ್ಯಾಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರಂತೆ.ವಡಯಟೀಶನ್ ಕೂಡ ಆಗಿರುವ ಇವರು ಆ ವೃತ್ತಿಯನ್ನು ನಟನೆಯೊಂದಿಗೆ ಮುಂದುವರೆಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಂತೂ ಬಹಳಷ್ಟು ಆ್ಯಕ್ಟೀವ್ ಇರುವ ಈಕೆ ಆಗಾಗ ವಿಭಿನ್ನ ರೀತಿಯ ಪೋಸ್ಟ್ ಗಳನ್ನು ಮಾಡಿ ತಮ್ಮ ಪ್ರೇಕ್ಷಕರು ಅಭಿಮಾನಿಗಳು ಹಾಗೂ ಫಾಲೋವರ್ಸ್ ಅನ್ನು ಎಂಗೇಜಿಂಗ್ ಆಗಿ ಇಡುತ್ತಾರೆ.

ಇವರು ಮಾಡುತ್ತಿರುವ ಪಾತ್ರ ಹಾಗೂ ಇವರ ಅದ್ಭುತ ಅಭಿನಯದಿಂದ ಇವರಿಗೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವಾರು ಇತರೆ ಪ್ಲಾಟ್ ಫಾರ್ಮ್‌ಗಳಲ್ಲಿ ಸಾವಿರಗಟ್ಟಲೆ ಫಾಲೋವರ್ಸ್ ಕೂಡ ಇದ್ದಾರೆ. ಆಗಾಗ ವಿಭಿನ್ನ ರೀತಿಯ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ಈಕೆ ಅದನ್ನು ತಮ್ಮ ಸೋಶಿಯಲ್ ಮೀಡಿಯಾ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಶೂಟಿಂಗ್ ಸಮಯದಲ್ಲಿ ಬಿಡುವಿದ್ದಾಗಲೆಲ್ಲ ರೀಲ್ಸ್ ಮಾಡುವ ನಟಿ ರಮ್ಯಾ ರಾಜು, ಫನ್ನಿ ರೀಲ್ಸ್ ಅನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೂ ಇವರ ಪೋಸ್ಟ್ ಗಳಿಗೆ ಒಳ್ಳೆ ಪಾಸಿಟಿವ್ ಕಮೆಂಟ್ಸ್ ಬರುತ್ತಿರುತ್ತವೆ.

ಒಟ್ಟಿನಲ್ಲಿ ಹೇಳುವುದಾದರೆ ತಮ್ಮ ನಟನೆಯ ಮೂಲಕ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ರಮ್ಯಾ ರಾಜು ಅವರು ಅಭಿನಯದಲ್ಲೇ ಸದಾ ತೊಡಗಿಸಿಕೊಳ್ಳುವ ಆಸೆಯನ್ನು ಹೊಂದಿದ್ದಾರಂತೆ.

More from Filmibeat

English summary
Actress Ramya Raju is impressing with the role of Radha in Puttakkana Makkalu Serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X