ಈ ನಟಿ ಯಾರು ಅಂತ ಗೊತ್ತೇನು? ಈ ಅವತಾರ ಸಿನಿಮಾಗಾ ಇಲ್ಲ ಫೋಟೊಶೂಟ್‌ಗೆ ಅಷ್ಟೇನಾ?

By ಅನಿತಾ ಬನಾರಿ

'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಗೌರಿಯಾಗಿ ಕರುನಾಡಿನಾದ್ಯಂತ ಗುರುತಿಸಿಕೊಂಡವರು ರಂಜನಿ ರಾಘವನ್. ತಮ್ಮ ನಟನೆಯ ಮೂಲಕ ಕರ್ನಾಟಕದ ಮನೆಮಗಳಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಬೆಡಗಿ. ಇತ್ತೀಚೆಗೆ ಬಂದ 'ಕನ್ನಡತಿ' ಧಾರಾವಾಹಿಯ ಭುವಿ ಆಲಿಯಾಸ್ ಸೌಪರ್ಣಿಕಾ ಪಾತ್ರದಲ್ಲಿ ರಂಜನಿ ರಾಘವನ್ ಮಿಂಚಿದ್ದಾರೆ.

ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಂಜನಿ ರಾಘವನ್ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ಮೂಲಕ ತಮ್ಮ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

Actress Ranjani Raghavan charmed as a village girl in her new photoshoot

ಹೌದು, ಇತ್ತೀಚೆಗೆ ರಂಜನಿ ರಾಘವನ್ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದು, ಅದರಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಈಕೆ ಕಾಣಿಸಿಕೊಂಡಿದ್ದಾರೆ. ವರ್ಷದ ಮೊದಲ ಹಬ್ಬ ಸಂಕ್ರಾತಿಯಂದು ಈ ಫೋಟೋಗಳನ್ನು ಹಂಚಿಕೊಂಡಿರುವ ರಂಜನಿ ರಾಘವನ್ ಸಂಕ್ರಾತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ರೈತ ಮಹಿಳೆಯಂತೆ ಕಂಗೊಳಿಸುತ್ತಿರುವ ರಂಜನಿ ರಾಘವನ್ ಅವರು "ಸೂರ್ಯ ಬೆಳೆ ತಣಿಸಿ, ಬೆಳೆಗಳು ರಾರಾಜಿಸಿ, ಕೃಷಿಕರ ಸಂತೋಷದ ಕೂಗು ಎಲ್ಲೆಲ್ಲೂ ಪಸರಿಸಲಿ. ಸಂಕ್ರಾಂತಿ ನಮ್ಮ ಆತ್ಮಗಳನ್ನು ಬಂಗಾರದ ಫಸಲಿನಿಂದ ಭರಿಸಲಿ. ಶ್ರಮ, ಸೂರ್ಯ ಹಾಗೂ ಹೇಳದ ಕಥೆಗಳ ಸಮ್ಮಿಳನ ನಮ್ಮೀ ಸಂಕ್ರಾಂತಿ. ನನ್ ಈ ಲುಕ್ ಎಲ್ಲಾ ರೈತ ಮಕ್ಕಳಿಗೆ ಅರ್ಪಣೆ" ಎಂದು ಫೋಟೋಗಳ ಕೆಳಗೆ ಬರೆದುಕೊಂಡಿದ್ದಾರೆ.

ರಂಜನಿ ರಾಘವನ್ ಹಂಚಿಕೊಂಡಿರುವ ವಿಭಿನ್ನ ರೀತಿಯ ಫೋಟೋಶೂಟ್ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಜೊತೆಗೆ "ನಿಮ್ಮ ಈ ವಿಶಿಷ್ಟ ಮತ್ತು ವಿಭಿನ್ನ ರೀತಿಯ ಪ್ರಯತ್ನ ನಮಗೆ ಖುಷಿ. ನಿಮ್ಮ ಎಲ್ಲಾ ಹೊಸ ಯೋಜನೆಗೆ ಶುಭವಾಗಲಿ' ಎಂಬ ಶುಭ ಹಾರೈಕೆ ಬಂದಿದೆ.

Actress Ranjani Raghavan charmed as a village girl in her new photoshoot

"ಸೋ ಬ್ಯೂಟಿಫುಲ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್", "ರಿಯಲ್ ವಂಡರ್ ವುಮೆನ್", "ಪಕ್ಕಾ ಹಳ್ಳಿ ಹುಡುಗಿ ಹೀಗೆ ಕಮೆಂಟ್‌ಗಳ ಮಹಾಪೂರವೇ ರಂಜನಿ ರಾಘವನ್ ಫೋಟೊ ಶೂಟ್‌ಗೆ ಹರಿದುಬಂದಿದೆ. 'ಕನ್ನಡತಿ' ಧಾರಾವಾಹಿಯ ಭುವಿ ಆಲಿಯಾಸ್ ಸೌಪರ್ಣಿಕಾ ಆಗಿ ನಟಿಸುತ್ತಿರುವಾಗಲೇ 'ಟಕ್ಕರ್', 'ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ' ಸಿನಿಮಾಗಳಲ್ಲಿ ನಟಿಸಿದ್ದರು. ಇದರ ಜೊತೆಗೆ 'ಸತ್ಯಂ', 'ನೈಟ್ ಕರ್ಫ್ಯೂ' ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಈಕೆ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೇ ಇದೀಗ ಆದಿತ್ಯ ಅಭಿನಯದ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿಯೂ ಈಕೆ ನಟಿಸಿದ್ದಾರೆ.

ಕಿರುತೆರೆ, ಹಿರಿತೆರೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ರಂಜನಿ ರಾಘವನ್ ಲೇಖಕಿಯಾಗಿಯೂ ಸೈ ಎನಿಸಿಕೊಂಡಿರುವ ಪ್ರತಿಭೆ. 'ಕತೆ ಡಬ್ಬಿ', 'ಸ್ವೈಪ್‌ ರೈಟ್‌' ಪುಸ್ತಕಗಳನ್ನು ಬಿಡುಗಡೆಗೊಳಿಸಿರುವ ರಂಜನಿ ರಾಘವನ್ ಧಾರಾವಾಹಿಯೊಂದಕ್ಕೂ ಸಂಭಾಷಣೆ ಬರೆದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಷ್ಟದೇವತೆ' ಧಾರಾವಾಹಿಗೆ ಸಂಭಾಷಣೆಯನ್ನು ಬರೆದಿರುವ ಈಕೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾಣಿಸಿಕೊಂಡಿದ್ದರು. ಸದ್ಯಕ್ಕೀಗ ಧಾರಾವಾಹಿಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದು, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Putta Gowri fame Ranjani Raghavan shines in a new photo shoot. She caught attention in the avatar of a village girl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X