'ಪುಟ್ಟಗೌರಿ' ಧಾರಾವಾಹಿಯಿಂದ ರಂಜನಿ ಹೊರ ಬರಲು ಕಾರಣವೇನು?
Recommended Video

'ಪುಟ್ಟಗೌರಿ ಮದುವೆ' ಕನ್ನಡ ಕಿರುತೆರೆಯ ವಿಭಿನ್ನ ಮತ್ತು ವಿಶೇಷ. ಅದು ಪಾಸಿಟಿವ್ ಆಗಿ ಆಗಿರಬಹುದು, ನೆಗೆಟಿವ್ ಆಗಿ ಆಗಿರಬಹುದು, ಟ್ರೋಲ್ ಗಳ ಮೂಲಕವೇ ಆಗಿರಬಹುದು ಪುಟ್ಟ ಗೌರಿ ಹವಾ ಸಿಕ್ಕಾಪಟ್ಟೆ ಇದೆ.
ಪುಟ್ಟ ಗೌರಿ ಎಂದ ತಕ್ಷಣ ಆ ಪಾತ್ರದಲ್ಲಿ ನಟಿಸಿದ್ದ ನಟಿ ರಂಜನಿ ರಾಘವನ್ ನೆನಪಿಗೆ ಬರುತ್ತಿದ್ದರು. ಆದರೆ, ಈಗ ಅವರೇ ಧಾರಾವಾಹಿಯಿಂದ ಆಚೆ ಬಂದಿದ್ದಾರೆ. ಪುಟ್ಟಗೌರಿ ಧಾರಾವಾಹಿ ಈಗಾಗಲೇ ಅನೇಕ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಆದರೆ, ಈಗ ರಿಯಲ್ ಆಗಿ ರಂಜನಿ ವೀಕ್ಷಕರಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಸತತ ಐದು ವರ್ಷಗಳಿಂದ ಪುಟ್ಟ ಗೌರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಈಗ ಇದ್ದಕ್ಕಿದ್ದ ಹಾಗೆ ಅದರಿಂದ ಹೊರ ಬಂದಿದ್ದಾರೆ. ಧಾರಾವಾಹಿಗೆ ವಿದಾಯ ಹೇಳಿದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಅದರ ಕಾರಣವನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ಒಂದೇ ರೀತಿಯ ಪಾತ್ರ ನನಗೆ ಸಾಕಾಗಿದೆ
''ಒಂದಲ್ಲ ಎರಡಲ್ಲ ಸತತ ಮೂರೂವರೆ ವರ್ಷಗಳಿಂದ ನಾನು ಪುಟ್ಟಗೌರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆ ಪಾತ್ರದೊಂದಿಗೆ ನನಗೆ ನೇಮ್, ಫೇಮ್ ಎರಡೂ ಸಿಕ್ಕಿದೆ. ಆದರೆ ಒಂದೇ ರೀತಿಯ ಪಾತ್ರ, ಒಂದೇ ವಾತಾವರಣ ನಂಗೆ ಸಾಕು ಎನಿಸಿದೆ.'' - ರಂಜನಿ ರಾಘವನ್, ನಟಿ

ಭಯ ಶುರುವಾಗಿದೆ
''ಪಾತ್ರದ ಅಭಿನಯದಲ್ಲಿ ಏಕತಾನತೆ ಕಾಣಿಸಿಕೊಂಡು ಹೊಸ ಬಗೆಯ ಪಾತ್ರಗಳಿಗೆ ನಾನು ಹೊಂದಿಕೊಳ್ಳುತ್ತೇನೆ ಇಲ್ಲವೋ ಎನ್ನುವ ಭಯ ಶುರುವಾಗಿದೆ ಹಾಗಾಗಿ ಒಂದಷ್ಟು ಬದಲಾವಣೆ ಇರಲಿ ಅಂತಲೇ 'ಪುಟ್ಟ ಗೌರಿ' ಧಾರಾವಾಹಿಗೆ ವಿದಾಯ ಹೇಳುತ್ತಿದ್ದೇನೆ ಜೊತೆಗೆ ನನ್ನ ಎರಡನೇ ಸಿನಿಮಾದ ಶೂಟಿಂಗ್ ಈಗಷ್ಟೇ ಮುಗಿದಿದೆ'' - ರಂಜನಿ ರಾಘವನ್, ನಟಿ

ಚಿತ್ರರಂಗದಲ್ಲಿ ಇನ್ನಷ್ಟು ಗುರುತಿಸಿಕೊಳ್ಳಬೇಕು
''ಇಲ್ಲಿ (ಚಿತ್ರರಂಗದಲ್ಲಿ) ಇನ್ನಷ್ಟು ಗುರುತಿಸಿಕೊಳ್ಳುವ ಅಂತ ನಿರ್ಧಾರವೇ ನಾನು ಅಲ್ಲಿಂದ ಹೊರ ಬರಲು ಪ್ರಮುಖ ಕಾರಣ. ಜೊತೆಗೆ ಪುಟ್ಟ ಗೌರಿ ಪಾತ್ರದ ಮೂಲಕ ಇಲ್ಲಿಯವರೆಗೆ ವೀಕ್ಷಕರು ನನ್ನನ್ನು ನೋಡಿದ ರೀತಿಯೇ ಬೇರೆ. ಇಲ್ಲಿ ತನಕ ಜನ ಕಥಾ ನಾಯಕಿ ಅಂತ ನನ್ನನ್ನು ಸ್ವೀಕರಿಸಿದ್ದಾರೆ. ಈಗ ಅದರಷ್ಟು ಪ್ರಾಮುಖ್ಯತೆ ಹೊಂದಿದ ಮತ್ತೊಂದು ಪಾತ್ರ ಅಲ್ಲಿ ಬರತ್ತಿದೆ ಎಂದಾಗ ನನಗೂ ಯಾಕೋ ಸರಿ ಅನ್ನಿಸಲಿಲ್ಲ.'' - ರಂಜನಿ ರಾಘವನ್, ನಟಿ

ಪುಟ್ಟಗೌರಿ ಬದಲು ಬಂದ ಮಂಗಳ ಗೌರಿ
'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಈಗ ಮತ್ತೊಂದು ಹೊಸ ಪಾತ್ರ ಪರಿಚಯ ಆಗುತ್ತಿದೆ. ಮಂಗಳ ಗೌರಿ ಎಂಬ ಪಾತ್ರ ಪುಟ್ಟಗೌರಿ ಪಾತ್ರದಷ್ಟು ಪ್ರಾಮುಖ್ಯತೆ ಹೊಂದಿದೆಯಂತೆ. ಈ ಪಾತ್ರ ಮುಂದಿನ ವಾರದಿಂದ ಧಾರಾವಾಹಿಗೆ ಎಂಟ್ರಿ ನೀಡಲಿದೆ.

'ಟಕ್ಕರ್' ಸಿನಿಮಾದಲ್ಲಿ ರಂಜನಿ
'ರಾಜಹಂಸ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರಂಜನಿ ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ನಟ ದರ್ಶನ್ ಸಂಬಂಧಿಯಾದ ಮನೋಜ್ ಕುಮಾರ್ ಅಭಿನಯದ 'ಟಕ್ಕರ್' ಸಿನಿಮಾದಲ್ಲಿ ರಂಜನಿ ಕಾಣಿಸಿಕೊಳ್ಳುತ್ತಿದ್ದಾರೆ. 'ಸೂಫಿ' ಎಂಬ ಚಿತ್ರದಲ್ಲಿಯೂ ಅವರು ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











