Ranjani Raghavan: ಅಮ್ಮನ ಮೈಸೂರು ಸಿಲ್ಕ್ ಸೀರೆಯುಟ್ಟು ರಂಜನಿ ರಾಘವನ್ ಫೋಟೊಶೂಟ್: ಇದು ನವರಾತ್ರಿ ಸ್ಪೆಷಲ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಕನ್ನಡತಿ'ಯೂ ಒಂದು. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ರಂಜನಿ ರಾಘವನ್ ಸದ್ಯ ಕಿರುತೆರೆಯಿಂದ ದೂರವಿದ್ದಾರೆ. 'ಕನ್ನಡತಿ' ಧಾರಾವಾಹಿಯ ನಂತರ ಬೇರೆ ಯಾವುದೇ ಧಾರಾವಾಹಿಯಲ್ಲಿ ಬಣ್ಣ ಹಚ್ಚದ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಏನಾದರೊಂದು ಪೋಸ್ಟ್ ಹಾಕಿ ನೆಟ್ಟಿಗರ ಮನ ಸೆಳೆಯುವ 'ಕನ್ನಡತಿ' ಇದೀಗ ನವರಾತ್ರಿ ಹಬ್ಬದ ಪ್ರಯುಕ್ತ ಕೆಂಪು ಮೈಸೂರು ಸಿಲ್ಕ್ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲೇನೂ ವಿಶೇಷ ಅಂತೀರಾ? ಅಂದ ಹಾಗೇ ರಂಜನಿ ಅವರು ಉಟ್ಟಿರುವುದು ಅವರ ಅಮ್ಮನ ಸಿಲ್ಕ್ ಸೀರೆಯನ್ನು.

ಅಮ್ಮನ ಕೆಂಪು ಸೀರೆಯನ್ನು ಧರಿಸಿ ಚೆಲುವೆಯಂತೆ ಕಂಗೊಳಿಸುತ್ತಿರುವ ರಂಜನಿ ರಾಘವನ್ ಅವರ ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆಯೇ ಹರಿದು ಬಂದಿದೆ. ಹೌದು, ನೆಟ್ಡಿಗರು "ದೇವತೆ, ಅಂದ ಅಂದರೆ ನೀವೇ ಮೇಡಂ", "ನಿಮ್ಮಿಂದಲೇ ಈ ಸೀರೆಗೆ ಅಂದ ಬಂದಿರುವುದು", "ಮನೆಗೆ ಹೋಗಿ ದೃಷ್ಟಿ ತೆಗೆಯಿರಿ" ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ.
'ಹಕೂನಾ ಮಟಾಟ' ಎಂಬ ವೆಬ್ ಸಿರೀಸ್‌ನಲ್ಲಿ ನಟಿಸಿರುವ ರಂಜನಿ ಅವರು 'ನೈಟ್ ಕರ್ಫ್ಯೂ' ಸಿನಿಮಾದಲ್ಲಿ ಡಾಕ್ಟರ್ ಆಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರೊಂದಿಗೆ ತೆರೆ ಹಂಚಿಕೊಂಡಿರುವ ರಂಜನಿ ರಾಘವನ್ 'ಸತ್ಯಂ' ಸಿನಿಮಾದಲ್ಲಿಯೂ ನಾಯಕಿಯಾಗಿ ಕಮಾಲ್ ಮಾಡಿದ್ದರು. 'ರಾಜಹಂಸ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಈಕೆ 'ಟಕ್ಕರ್' ಹಾಗೂ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

'ಕೆಳದಿ ಚೆನ್ನಮ್ಮ', 'ಆಕಾಶ ದೀಪ' ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದರು. 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಈಕೆ ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದರು. ತದ ನಂತರ ಮಲಯಾಳಂನ 'ಪೌರ್ಣಮಿ ತಿಂಗಳ್'ನಲ್ಲಿ ಬಣ್ಣ ಹಚ್ಚಿದ ಈಕೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸಿ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ರಂಜನಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಷ್ಟದೇವತೆ' ಧಾರಾವಾಹಿಯ ಸ್ಕ್ರಿಪ್ಟ್ ರೈಟರ್‌ನ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಹಾಗೂ ಸಹ ನಿರ್ಮಾಪಕ ಆಗಿಯೂ ಕಾಣಿಸಿಕೊಂಡಿದ್ದರು.


Click it and Unblock the Notifications











