ಮಂಜುಗಡ್ಡೆ ನಡುವೆ ಎಂಜಾಯ್ ಮಾಡುತ್ತಿರುವ 'ಲಕ್ಷ್ಮೀ ಬಾರಮ್ಮ' ನಟಿ ರಶ್ಮಿ ಪ್ರಭಾಕರ್

By ಪ್ರಿಯಾ ದೊರೆ

ಸದ್ಯ ಪರಭಾಷೆಯಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿ ಪ್ರಭಾಕರ್ ಅವರು ಪತಿ ಜೊತೆಗೆ ಶ್ರೀನಗರದಲ್ಲಿ, ಬೇಸಿಗೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇನ್ನು ಬೇಸಿಗೆ ಆರಂಭದಲ್ಲೇ ಕೆಂಡದಂತೆ ಸೂರ್ಯ ಸುಡುತ್ತಿದ್ದು, ಬೆಳಗ್ಗೆ 8 ಗಂಟೆಗೆ ಮನೆಯಿಂದ ಆಚೆ ಹೋಗಲು ಜನರು ಬಿಸಿಲಿಗೆ ಬೇಯುತ್ತಿದ್ದಾರೆ. ಈಗಲೇ ಇಷ್ಟು ಬಿಸಿಲಿದ್ದು, ಭೂಮಿ ಕೆಂಡದಂತಾಗಿದೆ. ಇನ್ನೂ ಮೂರು ತಿಂಗಳು ಈ ಬೇಸಿಗೆ ಕಾಲವನ್ನು ಕಳೆಯುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ.

ಬೇಸಿಗೆ ಬೇಡ ಎಂದು ಶ್ರೀನಗರಕ್ಕೆ ತೆರಳಿದ ನಟಿ

ಅದರಲ್ಲೂ ಈ ಬಾರಿ ಬೆಂಗಳೂರಿನಲ್ಲಿ ಅಂತಹ ಚಳಿಯೇನು ಇರಲಿಲ್ಲ.ಹೀಗಿರುವಾಗ ನಟಿ ರಶ್ಮಿ ಪ್ರಭಾಕರ್ ಅವರು ಕೊಂಚ ಬ್ರೇಕ್ ಪಡೆದಿದ್ದು, ಬೇಸಿಗೆ ಸಾಕು ಎಂದು ಮಂಜುಗಡ್ಡೆ ನಡುವೆ ಚುಮು ಚುಮು ಚಳಿಯಲ್ಲಿ ನಡುಗುತ್ತಿದ್ದಾರೆ. ಈ ಬೇಸಿಗೆಯ ಬಿಸಿಯನ್ನು ತಾಳಲಾರದೇ ನಟಿ ರಶ್ಮಿ ಪ್ರಭಾಕರ್ ಅವರು ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಜಮ್ಮು-ಕಾಶ್ಮೀರ, ಶ್ರೀನಗರಕ್ಕೆ ಪತಿ ಜೊತೆಗೆ ಪ್ರವಾಸ ಕೈಗೊಂಡಿದ್ದು, ದಾಲ್ ಲೇಕ್, ಮುಘಲ್ ಗಾರ್ಡನ್ ನಲ್ಲಿ ಸುತ್ತಾಡುತ್ತಿದ್ದಾರೆ. ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ರಶ್ಮಿ ಅವರು ಅಲ್ಲಿನ ಫೋಟೋಗಳನ್ನು ಹಾಗೂ ಅನುಭವಗಳನ್ನು ಕೂಡ ಇನ್ ಸ್ಟಾಗ್ರಾಂ ಸ್ಟೋರಿ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

Actress Rashmi Prabhakar jammu-kashmir trip

ಸೂಪರ್ ಕ್ವೀನ್ ಪತಿ ಹೆಸರು ನಿಖಿಲ್

ಜೀ ಕನ್ನಡದ ಸೂಪರ್ ಕ್ವೀನ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ರಶ್ಮಿ ಅವರು ಗೆದ್ದುಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ರಶ್ಮಿ ಅವರು ಲವ್ ಕಮ್ ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ನಿಖಿಲ್ ಹಾಗೂ ರಶ್ಮಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನು ಒಬ್ಬರು ಮೆಚ್ಚಿಕೊಂಡು, ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿಗಳು ಸಪ್ತಪದಿ ತುಳಿದಿದ್ದರು. ಇವರ ಪತಿ ನಿಖಿಲ್ ಭಾರ್ಗವ್ ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ನಿಖಿಲ್ ಹಾಗೂ ಮನೆಯವರು ರಶ್ಮಿ ಅವರ ನಟನೆಗೆ ಸಪೋರ್ಟ್ ಮಾಡುತ್ತಿದ್ದಾರೆ.

ರಶ್ಮಿ ಫಿಟ್ನೆಸ್ ಚಾಲೆಂಜ್

ಕಳೆದ ವರ್ಷ ರಶ್ಮಿ ಮತ್ತು ಅವರ ಪತಿ ನಿಖಿಲ್ ಅವರು ಜೀ ಕನ್ನಡದಲ್ಲಿ ಮೂಡಿ ಬಂದ ಕಪಲ್ಸ್ ಕಿಚನ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಣೆ ಮಾಡಿದ್ದರು. ರಶ್ಮಿ ಹಾಗೂ ಅವರ ಪತಿ ಸೇರಿಕೊಂಡು ಆಗಾಗ ವೀಡಿಯೋ ಮಾಡುತ್ತಿರುತ್ತಾರೆ. ತರ್ಲೆ ಪ್ರಶ್ನೆಗಳನ್ನು ಕೇಳಿ ಫಾಲೋವರ್ಸ್ ಗಳನ್ನು ನಗಿಸುತ್ತಿರುತ್ತಾರೆ. ಕಳೆದ ತಿಂಗಳಿನಿಂದ ರಶ್ಮೀ ಅವರು ಫಿಟ್ನೆಸ್ ಚಾಲೆಂಜ್ ತೆಗೆದುಕೊಂಡಿದ್ದು, ನಿತ್ಯ ಜಿಮ್, ವಾಕಿಂಗ್ ಮಿಸ್ ಮಾಡದೇ ಮಾಡುತ್ತಾರೆ. ಅವರ ವರ್ಕೌಟ್ ವೀಡಿಯೋಗಳನ್ನು ಮಿಸ್ ಮಾಡದೇ ಪ್ರತಿ ದಿನವೂ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Actress Rashmi Prabhakar jammu-kashmir trip

ಸಿನಿಮಾ, ಕಿರುತೆರೆಯಲ್ಲಿ ಆಕ್ಟೀವ್

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ರಶ್ಮಿ ಪ್ರಭಾಕರ್, ಚಿನ್ನು ಆಗಿ ಕನ್ನಡಿಗರ ಮನ ಗೆದ್ದಿದ್ದರು. ಇದಲ್ಲದೇ, ಕನ್ನಡದಲ್ಲಿ ಮೂಡಿ ಬಂದ ಶುಭ ವಿವಾಹ, ಮಹಾಭಾರತ, ದರ್ಪಣ, ಜೀವನ ಚೈತ್ರ, ಮನಸೆಲ್ಲಾ ನೀನೇ, ಲಕ್ಷ್ಮೀ ಬಾರಮ್ಮ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು ಕಿರುತೆರೆಯಲ್ಲೂ ಹಲವು ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ ಹಾಗೂ ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಈಗಲೂ ಕೂಡ ತಮಿಳು ಧಾರಾವಾಹಿ ಕಣ್ಣೇ ಕಲೈಮಾನೆ ದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಸಿನಿಮಾಗಳಿಗೂ ಬಣ್ಣ ಹಚ್ಚಿರುವ ರಶ್ಮಿ ಅವರು ಮಹಾಕಾವ್ಯ ಮತ್ತು ಬಿಬಿ5 ಚಿತ್ರಗಳಲ್ಲಿ ಮಿಂಚಿದ್ದಾರೆ.

More from Filmibeat

English summary
actress Rashmi Prabhakar jammu-kashmir trip and shared photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X