ವಾಸಂತಿ ನಲಿದಾಗ ಎನ್ನುತ್ತಾ ಗಾಂಧಿ ಬಜಾರ್ ತುಂಬಾ ನಲಿದಾಡಿದ 'ಲಕ್ಷ್ಮೀ ಬಾರಮ್ಮ' ನಟಿ

By ಅನಿತಾ ಬನಾರಿ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಇದೀಗ ಹೊಸದೊಂದು ವಿಡಿಯೋ ಮೂಲಕ ಬಹಳ ಟ್ರೆಂಡಿಂಗ್ ನಲ್ಲಿದ್ದಾರೆ. ಕಿರುತೆರೆಯಲ್ಲಿ ಲಕ್ಷ್ಮಿ ಆಲಿಯಾಸ್ ಚಿನ್ನು ಎಂಬ ಪಾತ್ರವನ್ನು ಮಾಡಿ ಜನಮನ ಗೆದ್ದಿರುವ ನಟಿ ರಶ್ಮಿ ಪ್ರಭಾಕರ್ ಸೋಶಿಯಲ್ ಮೀಡಿಯಾದಲ್ಲಂತೂ ಬಹಳಷ್ಟು ಆ್ಯಕ್ಟೀವ್.

ಇವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವಿಡಿಯೋ ಒಂದು ಸದ್ಯಕ್ಕೆ ಭಾರಿ ವೈರಲ್ ಆಗಿದೆ. ಗಾಂಧಿ ಬಜಾರ್ ಸುತ್ತ ಮಾಡಿರುವ ಈ ವಿಡಿಯೋ ಇದೀಗ ಬೆಂಗಳೂರು ನಿವಾಸಿಗಳಿಗೆ ಬಹಳ ಖುಷಿ ಕೊಟ್ಟಿದೆ.

Actress Rashmi Prabhakar photoshoot in bengaluru Gandhi Bazaar went trending

ಅಂದ ಹಾಗೆ ಈ ವಿಡಿಯೋ ಬಗ್ಗೆ ಸ್ವತಃ ರಶ್ಮಿ ಪ್ರಭಾಕರ್ ಅವರೇ ಫಿಲ್ಮಿಬೀಟ್‌ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. 'ಈ ವಿಡಿಯೋ ಮಾಡೋಕೆ ಮುಖ್ಯವಾದ ಉದ್ದೇಶ ಎಂದರೆ ಹಳೆಯ ಗಾಂಧಿ ಬಜಾರನ್ನು ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ವೈಟ್ ಟ್ಯಾಪಿಂಗ್ ಆದಮೇಲೆ ಇಡೀ ನಗರ ಬೇರೆಯದೇ ರೀತಿಯಲ್ಲಿ ಕಾಣುತ್ತಿದೆ. ಆದರೆ, ಹಳೆಯ ಗಾಂಧಿ ಬಜಾರ್‌ಗೂ ಅದರದೇ ಆದ ವೈಬ್ ಇತ್ತು. ಆ ಹಳೆ ನೆನಪುಗಳನ್ನು ಮತ್ತೊಮ್ಮೆ ಮಲಗು ಹಾಕುವುದಕ್ಕೆ ಇದೊಂದು ಸಣ್ಣ ಪ್ರಯತ್ನ" ಎಂದು ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ಸಂಕಲ್ಪ ಎನ್ನುವ ಸೀರೆ ಶಾಪ್ ಇಟ್ಟುಕೊಂಡಿರುವ ಸಹನಾ ಎನ್ನುವ ಸ್ಟೈಲಿಸ್ಟ್ ನನ್ನ ಸೀರೆ ಹಾಗೂ ಲುಕ್ ಸ್ಟೈಲ್ ಮಾಡಿದ್ದಾರೆ. ಸಹನಾ ಅವರೊಂದಿಗೆ ಒಂದಷ್ಟು ಮಾತುಕತೆ ನಡೆಸಿ ನಮ್ಮದೇ ಒಂದು ಐಡಿಯಾದಲ್ಲಿ ಈ ವಿಡಿಯೋವನ್ನು ಶೂಟ್ ಮಾಡಿದ್ದೇವೆ" ಎಂದು ತಮ್ಮ ಫೋಟೊಶೂಟ್ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದಾರೆ ನಟಿ ರಶ್ಮಿ ಪ್ರಭಾಕರ್.

Actress Rashmi Prabhakar photoshoot in bengaluru Gandhi Bazaar went trending

"ವಿಡಿಯೋದಲ್ಲಿ ಹಳೆಯ ಗಾಂಧಿ ಬಜಾರ್, ಅಲ್ಲಿನ ಬಸ್ ಸ್ಟಾಪ್ ಕಾಫಿ ಶಾಪ್ಸ್, ಇತ್ಯಾದಿ ಒಂದಷ್ಟು ಜಾಗಗಳಲ್ಲಿ ನಾವು ಈ ಶೂಟಿಂಗ್ ನಡೆಸಿದ್ದೇವೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಹಾಡುಗಳು ಆಗಾಗ ಟ್ರೆಂಡಿಂಗ್‌ಗೆ ಬಂದು ಹೋಗುತ್ತಿರುತ್ತವೆ. ನಮ್ಮ ಕನ್ನಡದಲ್ಲೂ ಹಲವಾರು ಅದ್ಭುತ ಹಾಡುಗಳಿವೆ. ವಾಸಂತಿ ನಲಿದಾಗ ಹಾಡು ನಮ್ಮ ವಿಡಿಯೋಗೆ ಸರಿಯಾಗಿ ಹೊಂದಿಕೆ ಆಗಿದ್ದರಿಂದ ನಾವು ಈ ಹಾಡನ್ನೇ ಆಯ್ದುಕೊಂಡಿದ್ದೀವಿ" ಎಂದು ವಿಡಿಯೋ ಹಾಗೂ ಹಾಡಿನ ಬಗ್ಗೆ ಮಾತನಾಡಿದ್ದಾರೆ ನಟಿ ರಶ್ಮಿ ಪ್ರಭಾಕರ್.

ಕನ್ನಡದಲ್ಲಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಬಹಳಷ್ಟು ಖ್ಯಾತಿ ಪಡೆದ ನಟಿ ರಶ್ಮಿ ಪ್ರಭಾಕರ್ ಅವರು ತೆಲುಗು ಕಿರಿತೆರೆಯಲ್ಲೂ ಅಷ್ಟೇ ಪಾಪ್ಯುಲರ್. 'ಪೌರ್ಣಮಿ', 'ಅರುಂಧತಿ', 'ಕಣ್ಣೆ ಕಲೈಮಾನೆ' ಇತ್ಯಾದಿಗಳು ನಟಿಸಿರುವ ಪ್ರಮುಖ ಕನ್ನಡ ಹಾಗೂ ತೆಲುಗು ಧಾರವಾಹಿಗಳು. ಸದ್ಯಕ್ಕೆ ಕನ್ನಡ ಕಿರುತೆರೆಯಿಂದ ದೂರವೇ ಇರುವ ನಟಿ ರಶ್ಮಿ ಪ್ರಭಾಕರ್ ಅವರು ಮುಂದೆ ಯಾವ ಪ್ರಾಜೆಕ್ಟ್ ಅನ್ನು ಆಯ್ದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Actress Rashmi Prabhakar caught attention through photo shoot:
Read more about: actress anitha banari ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X