"ಗ್ಲಿಸರಿನ್ ಬಳಸಿ ನನ್ನ ಒಂದು ಕಣ್ಣು ಇವತ್ತಿಗೂ ಡ್ಯಾಮೇಜ್ ಆಗಿದೆ"; ನಟಿ ರಶ್ಮಿ ಪ್ರಭಾಕರ್
ನಟನೆ ಎಂಬುದು ಸುಲಭದ ಮಾತಲ್ಲ. ಹೆಚ್ಚಿನ ನಟ ನಟಿಯರು ತಮ್ಮ ನಟನಾ ಕ್ಷೇತ್ರದಲ್ಲಿ ತಮ್ಮ ಮಿತಿಮೀರಿ ಶ್ರಮ ಹಾಕುತ್ತಾರೆ. ಮಾತ್ರವಲ್ಲ ಅದಕ್ಕೆ ತಕ್ಕ ಪ್ರತಿಫಲವೂ ಸಿಗುವುದಿದೆ. ಆದರೆ, ಎಷ್ಟೋ ಬಾರಿ ನಾನು ಇಷ್ಟೆಲ್ಲ ಮಾಡಿದ್ದು ಯಾತಕ್ಕೆ ಎಂಬ ಪ್ರಶ್ನೆಯೂ ಮೂಡಬಹುದು?
ನಟಿ ರಶ್ಮಿ ಪ್ರಭಾಕರ್ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯ. 'ಲಕ್ಷ್ಮೀ ಬಾರಮ್ಮ', 'ಕಾವ್ಯಾಂಜಲಿ', 'ಪೌರ್ಣಮಿ', 'ಮನಸೆಲ್ಲಾ ನೀನೆ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಈ ನಟಿ ತಮ್ಮ ಕಣ್ಣಿನ ಸಮಸ್ಯೆ ಒಂದನ್ನು ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

ಹೌದು, ನಟಿ ರಶ್ಮಿ ಪ್ರಭಾಕರ್ ಅವರು ಶೂಟಿಂಗ್ ಕಿರುತೆರೆ ನಟನೆ ಎಂದು ಇತ್ಯಾದಿ ವಿಚಾರಗಳಿಂದ ತಮ್ಮ ಕಣ್ಣಿಗೆ ಬಹುದೊಟ್ಟ ಡ್ಯಾಮೇಜ್ ಮಾಡಿಕೊಂಡಿದ್ದಾರೆ. ನಟರು ಹಲವಾರು ಸೀನ್‌ಗಳಲ್ಲಿ ಅಳುವ ಸಂದರ್ಭದಲ್ಲಿ ಇರುತ್ತವೆ. ಆಗ ಕಣ್ಣೀರು ಬರಿಸಲು ಗ್ಲಿಸರಿನ್ ಬಳಸುವ ಅಭ್ಯಾಸವು ಇದೆ. ಇಂತಹದೊಂದು ಅಭ್ಯಾಸದಿಂದ ನಟಿ ರಶ್ಮಿ ಪ್ರಭಾಕರ್ ಅವರ ಕಣ್ಣು ಬಹಳ ಡ್ಯಾಮೇಜ್ ಆಗಿದೆಯಂತೆ.
"ನಟನೆಯಲ್ಲಿ ಅಳುವ ಸೀನ್‌ಗಳಿರುವಾಗ ಎಷ್ಟೇ ಸಹಜವಾಗಿ ಚೆನ್ನಾಗಿ ನಟಿಸಿದರೂ, ಕಂಟಿನ್ಯೂಟಿಗಾಗಿ ಗ್ಲಿಸರಿನ್ ಬಳಸಲು ಹೇಳುತ್ತಾರೆ. ತಣ್ಣೀರು ಕಾಣಿಸಬೇಕೆಂಬ ಕಾರಣಕ್ಕೆ ಗ್ಲಿಸರಿನನ್ನು ಪದೇ ಪದೇ ಕಣ್ಣಿಗೆ ಹಾಕುವುದು ಕಿರುತೆರೆ ಹಾಗೂ ಹಿರಿತೆರೆ ಕ್ಷೇತ್ರಗಳಲ್ಲಿದೆ. ಇವರಿಂದ ನನ್ನ ಒಂದು ಕಣ್ಣು ಎಷ್ಟು ಎಂದರೆ ಕಣ್ಣಿನ ಆಪರೇಷನ್ ಮಾಡಿಕೊಳ್ಳುವ ಸ್ಥಿತಿ ಬಂತು" ಎಂದು ಸುವರ್ಣ ಸೂಪರ್ ಸ್ಟಾರ್‌ನಲ್ಲಿ ಭಾಗವಹಿಸಿದ ರಶ್ಮಿ ಪ್ರಭಾಕರ್ ಹೇಳಿದ್ದಾರೆ.

ಇದರ ಜೊತೆಗೆ "ಗ್ಲಿಸರಿನ್ ಬಳಕೆಯಿಂದ ಡ್ಯಾಮೇಜ್ ಆದ ನನ್ನ ಒಂದು ಕಣ್ಣಿಗೆ ಇನ್ನೊಂದು ಕಣ್ಣಿನ ಕೂರಿಸಿ ಆಪರೇಷನ್ ಮಾಡಲಾಗಿತ್ತು. ಆಪರೇಷನ್ ಯಶಸ್ವಿಯಾಗಿ ಕೂಡ ಆಯ್ತು. ಆಪರೇಷನ್ ಆದಮೇಲೆ ಎರಡು ತಿಂಗಳ ಕಾಲ ನಾನು ರೆಸ್ಟ್ ಮಾಡಬೇಕಿತ್ತು. ಆದರೆ ಮಧ್ಯದಲ್ಲೇ ನಾನು ನಟಿಸುತ್ತಿದ್ದ ಧಾರಾವಾಹಿ ಅವರು ಕಥೆ ಬದಲಾಗಿದೆ ಅರ್ಜೆಂಟಾಗಿ ಬರಲೇಬೇಕೆಂದು ಡಿಮಾಂಡ್ ಇಟ್ಟರು. ಹೀಗಾಗಿ ನಾನು ರೆಸ್ಟ್ ಮಾಡುವ ಬದಲು ಆಪರೇಷನ್ ಆದ ಕಣ್ಣಿನಲ್ಲಿದ್ದ ಕೃತಕ ಲೆನ್ಸ್ ನೊಂದಿಗೆ ಶೂಟಿಂಗಿಗೆ ಹೋದೆ. ಅಲ್ಲಿ ಯಾವುದು ಶೂಟಿಂಗ್ ಸಮಯದಲ್ಲಿ ಹೆಚ್ಚು ಕಮ್ಮಿಯಾಗಿ ನನ್ನ ಕೃತಕ ಲೆನ್ಸ್ ಬಿದ್ದುಹೋಗಿತ್ತು. ಇದರಿಂದ ಎಂತಹ ಸಮಸ್ಯೆ ಆಯ್ತೆಂದರೆ ನನ್ನ ಆಪರೇಷನ್ ಫೇಲ್ಯೂರ್ ಆಯ್ತು. ನನ್ನ ಒಂದು ಕಣ್ಣು ಇವತ್ತಿಗೂ ಡ್ಯಾಮೇಜ್ ಆಗಿದೆ ಮತ್ತೊಮ್ಮೆ ಆಪರೇಷನ್ ಮಾಡಿಸಿಕೊಳ್ಳಬೇಕಿದೆ ಆದರೆ ಸಮಯ ಸಿಗುತ್ತಿಲ್ಲ" ಎಂದು ಹೇಳಿಕೊಂಡಿದ್ದರು ನಟಿ ರಶ್ಮಿ ಪ್ರಭಾಕರ್.
"ನಾವು ನಟರು ಧಾರಾವಾಹಿ, ಸಿನಿಮಾ ಅಥವಾ ಯಾವುದೇ ಕ್ಷೇತ್ರದಲ್ಲಾದರೂ ಬಹಳಷ್ಟು ಆಸಕ್ತಿಯಿಂದ ನಮ್ಮ ಸಮಯ ಕೊಡುತ್ತೇವೆ. ಹತ್ತಿರದಲ್ಲಿ ಸಾವಾದರೂ, ಸಾವಿನ ಮನೆಯಿಂದ ಬಂದು ಸ್ನಾನ ಮಾಡಿ ಶೂಟಿಂಗ್ ಗೆ ಹೋದ ಎಷ್ಟೋ ಸಂದರ್ಭದಲ್ಲಿ. ಹೀಗಿರುವಾಗ ಶೂಟಿಂಗ್‌ನಲ್ಲಿ ಇಂತಹದೊಂದು ತೊಂದರೆಯಾಗುವುದು ನಮ್ಮ ಜೀವನಕ್ಕೆ ಬಹಳ ದೊಡ್ಡ ಸಂಕಷ್ಟವಾಗುತ್ತದೆ. ಈವರೆಗೂ ನಾನು ಎಲ್ಲೂ ನನ್ನ ಕಣ್ಣಿನ ಸಮಸ್ಯೆ ಬಗ್ಗೆ ಮಾತನಾಡಿರಲಿಲ್ಲ ಇದೇ ಮೊದಲ ಬಾರಿಗೆ ಹೇಳಿಕೊಳ್ಳುತ್ತಿದ್ದೇನೆ. " ಎಂದು ತಮ್ಮ ಕೆಟ್ಟ ಅನುಭವವೊಂದನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ ನಟಿ ರಶ್ಮಿ ಪ್ರಭಾಕರ್.


Click it and Unblock the Notifications











