"ಒಂದು ಸೆಕೆಂಡ್ ಆದ್ರೂ ಪುನೀತ್ ರಾಜ್‌ಕುಮಾರ್ ಜೊತೆ ನಟಿಸ್ಬೇಕಿತ್ತು"; ಈ ನಟಿಯ ಆಸೆ ಈಡೇರಲಿಲ್ಲ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಬೇಕು ಎಂಬುದೇ ಈಕೆಯ ಬಹು ದೊಡ್ಡ ಕನಸಾಗಿತ್ತು. ಅಪ್ಪು ಭೇಟಿಗೋಸ್ಕರ ಕೋಟ್ಯಾಧಿಪತಿ ಆಡಿಶನ್ ಕೂಡಾ ಈಕೆ ಅಟೆಂಡ್ ಮಾಡಿದರು. ಅದೃಷ್ಟ ಎಂಬಂತೆ ಆಕೆ ಸೆಲೆಕ್ಟ್ ಕೂಡಾ ಆದರು. ಶೂಟಿಂಗ್ ಡೇಟ್ ಕೂಡಾ ಫಿಕ್ಸ್ ಆಗಿತ್ತು. ಕಾರಣಾಂತರಗಳಿಂದ ಶೂಟಿಂಗ್ ಪೋಸ್ಟ್ ಫೋನ್ ಆಯ್ತು.
ಕೊನೆಗೆ ಕೋಟ್ಯಾಧಿಪತಿಯ ಶೂಟಿಂಗ್ ನಡೆಯಲಿಲ್ಲ. ಏನೇ ಆಗಲಿ, ಪುನೀತ್ ರಾಜ್ ಕುಮಾರ್ ಅವರನ್ನು ಮೀಟ್ ಮಾಡಿಯೇ ಸಿದ್ಧ ಎಂದು ಈ ಹುಡುಗಿ ನಿರ್ಧರಿಸಿದರು. ಮನೆಗೆ ಹೋಗಿ ಭೇಟಿ ಮಾಡಿದ್ದು ಆಯಿತು. ಆ ಮೂಲಕ ತನ್ನ ಕನಸು ನನಸು ಮಾಡಿಕೊಂಡ ಕಿರುತೆರೆ ನಟಿಯ ಹೆಸರು ರಿಷಿಕಾ.

"ಪುನೀತ್ ರಾಜ್ ಕುಮಾರ್ ಮೀಟ್ ಮಾಡಬೇಕು ಎಂಬುದೇ ನನ್ನ ಕನಸಾಗಿತ್ತು. ಕೊನೆಗೂ ಅವರ ಮನೆಗೆ ಹೋಗಿ ಮೀಟ್ ಕೂಡ ಮಾಡಿದೆ. ಅವರನ್ನು ಮೀಟ್ ಮಾಡಿದ ಬಳಿಕ ತೆರೆಮೇಲೆ ಒಂದು ಸೆಕೆಂಡ್ ಆದ್ರೂ ನಾನು ಇವರ ಜೊತೆ ನಟಿಸಬೇಕು ಎಂದು ಅನಿಸಿತ್ತು. ಲಾಕ್‌ಡೌನ್ ಸಮಯದಲ್ಲಿ ಅವಕಾಶಕ್ಕೆ ಟ್ರೈ ಮಾಡೋದಕ್ಕೆ ಶುರು ಮಾಡಿದೆ. ಫೋಟೋಗಳನ್ನು ಕಳುಹಿಸಿದೆ. ಆಮೇಲೆ ಕನ್ಯಾಕುಮಾರಿಯಲ್ಲಿ ಅವಕಾಶ ಸಿಕ್ತು. ಅದರಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಾಣಿಸಿಕೊಂಡೆ" ಎಂದು ನಟನಾ ಜರ್ನಿ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ರಿಷಿಕಾ.
"ಕನ್ಯಾಕುಮಾರಿ ಧಾರಾವಾಹಿಗೆ ನಾನು ಆಯ್ಕೆಯಾಗಿ ಶೂಟಿಂಗ್ ಶುರುವಾಯ್ತು. ಧಾರಾವಾಹಿ ಪ್ರಸಾರ ಶುರುವಾಗಿ ನಾಲ್ಕು ತಿಂಗಳಿಗೆ ಪುನೀತ್ ರಾಜ್ ಕುಮಾರ್ ಅವರು ತೀರಿಕೊಂಡ್ರು. ಅಭಿಮಾನಿಯಾಗಿ ಅವರನ್ನು ನಾನು ಭೇಟಿ ಮಾಡಿದ್ದೆ. ಅದು ನನಗೆ ತುಂಬಾ ಸಂತೋಷ ನೀಡಿದ ಘಳಿಗೆ ನಿಜ. ಆದರೆ ಕಲಾವಿದೆಯಾಗಿ ಅವರೊಂದಿಗೆ ನಟಿಸಲು ಸಾಧ್ಯವಾಗಲಿಲ್ಲ, ನಟಿಯಾಗಿ ಅವರನ್ನು ಭೇಟಿ ಮಾಡಲಾಗಲಿಲ್ಲ ಎಂಬ ಬೇಜಾರು ನನಗಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹೇಳಿದ್ದಾರೆ ರಿಷಿಕಾ.
"ಕನ್ಯಾಕುಮಾರಿ ನನ್ನ ನಟನೆಯ ಎರಡನೇ ಧಾರಾವಾಹಿ. ಆರಂಭದ ದಿನಗಳಲ್ಲಿ ನಾನು ಈ ಧಾರಾವಾಹಿಯಲ್ಲಿ ಇರಲಿಲ್ಲ. ಚಿತ್ರಾ ಆಗಿ ನಟಿಸುತ್ತಿದ್ದವರು ಆ ಪಾತ್ರದಿಂದ ಹೊರಬಂದಾಗ ನಾನು ಆ ಪಾತ್ರಕ್ಕೆ ಆಯ್ಕೆಯಾದೆ. ಹಾಗಾಗಿ ಇದು ರಿಪ್ಲೇಸ್ ಕ್ಯಾರೆಕ್ಟರ್. ಕನ್ಯಾಕುಮಾರಿದ ಚಿತ್ರಾ ಪಾತ್ರದ ಬಗ್ಗೆ ವಿವರಿಸುವಾಗಲೇ ಪ್ರೊಡ್ಯೂಸರ್ ಲವ್ ಸ್ಟೋರಿಯಾಗಲೀ, ಲವ್ ಮಾಡುವ ತರ ರೊಮ್ಯಾಂಟಿಕ್ ಕ್ಯಾರೆಕ್ಟರ್ ಅಂದ್ರೆ ಯಾರೂ ಬೇಕಾದ್ರೂ ಮಾಡುತ್ತಾರೆ. ಆದರೆ ಈ ಪಾತ್ರದಲ್ಲಿ ಇಮೋಷನಲ್ ಇದೆ. ಅನುಮಾನದ ಭೂತ ಇರುವ ಗಂಡನನ್ನು ಸಹಿಸಿಕೊಳ್ಳಬೇಕು.

ಮುಂದೆ ಪ್ರೆಗ್ನೆಂಟ್ ಆಗ್ತಾಳೆ, ಮಗುವನ್ನು ಹೆರುತ್ತಾಳೆ. ಒಟ್ಟಿನಲ್ಲಿ ಈ ಪಾತ್ರದಲ್ಲಿ ನಟನೆ ತುಂಬಾ ಮುಖ್ಯವಾಗುತ್ತದೆ. ಅದಕ್ಕಾಗಿ ನಿಮ್ಮನ್ನ ಅಪ್ರೋಚ್ ಮಾಡ್ತಾ ಇದ್ದೀವಿ ಎಂದಿದ್ದರು. ಚಾಲೆಂಜಿಂಗ್ ಕ್ಯಾರೆಕ್ಟರ್ ಎಂದು ಅನ್ನಿಸ್ತು. ಜೊತೆಗೆ ನನ್ನ ಕೆರಿಯರ್ ನಲ್ಲಿ ಇದು ಮೊದಲನೇ ಲೀಡ್ ರೋಲ್ ಕೂಡ ಹೌದು. ಹಾಗೇ ಒಪ್ಪಿಕೊಂಡೆ" ಎಂದು ಚಿತ್ರಾ ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ರಿಷಿಕಾ.
"ಕಳೆದ ಒಂದು ವರ್ಷದಿಂದ ನಾನು ಕನ್ಯಾಕುಮಾರಿಯ ಚಿತ್ರಾಳಾಗಿ ನಟಿಸುತ್ತಿದ್ದೇನೆ. ಖುಷಿಯಿದೆ. ಟೀಂ ಕೂಡಾ ಒಳ್ಳೆಯ ರೀತಿಯಲ್ಲಿ ಸಪೋರ್ಟ್ ಮಾಡುತ್ತಾರೆ. ಪಾತ್ರವನ್ನು ಎಂಜಾಯ್ ಮಾಡುತ್ತಾ ನಟಿಸುತ್ತೇನೆ. ಜೊತೆಗೆ ಚಿತ್ರಾ ಪಾತ್ರಕ್ಕೆ ಜನರಿಂದಲೂ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ನಾನು ಹೊರಗಡೆ ಹೋದಾಗಲಂತೂ ಜನ ಹೇಗಮ್ಮಾ ಅಂಥ ಗಂಡನ ಜೊತೆಗೆ ಜೀವನ ಮಾಡ್ತೀಯಾ, ನಿನ್ನ ಗಂಡ ತುಂಬಾ ಟಾರ್ಚರ್ ಕೊಡ್ತಾರೆ ಅಲ್ವಾ ಅಂತೆಲ್ಲಾ ಕೇಳುತ್ತಾರೆ. ಈ ರೀತಿಯ ರೆಸ್ಪಾನ್ಸ್ ಖುಷಿ ತರುತ್ತದೆ" ಎಂದು ರಿಷಿಕಾ ಹೇಳುತ್ತಾರೆ.
"ಕಿರುತೆರೆ ಜೊತೆಗೆ ನಾನು ಈಗಾಗಲೇ ಹಿರಿತೆರೆಗೂ ಕಾಲಿಟ್ಟಾಗಿದೆ. ಸುಂದರ್ ಕೃಷ್ಣ ಅರಸ್ ಅವರ ಮೊಮ್ಮಗ ಜೊತೆ ನಟಿಸುತ್ತಿದ್ದೇನೆ. ದೊಡ್ಡ ಮಟ್ಟಿನ ಸಿನಿಮಾವನೂ ಅಲ್ಲ ಇದು. ಇದನ್ನ ಅವಾರ್ಡ್ ಗೋಸ್ಕರ ಮಾಡುತ್ತಿರುವ ಸಿನಿಮಾ ಇದು. ಅದರಲ್ಲಿ ನಾನು ನಾಯಕಿಯಾಗಿ ನಟಿಸುತ್ತಿದ್ದೇನೆ" ಎಂದು ಸಿನಿಮಾ ಪಯಣದ ಬಗ್ಗೆಯೂ ಫಿಲ್ಮಿಬೀಟ್ ಜೊತೆಗೆ ರಿಷಿಕಾ ಮಾತನಾಡಿದ್ದಾರೆ.


Click it and Unblock the Notifications











