"ನಾನು ರಿಲೇಷನ್‌ಶಿಪ್‌ನಲ್ಲಿದ್ದೆ, ಅದು ಟಾಕ್ಸಿಕ್ ಆಗಿತ್ತು"; 'ಲಕ್ಷ್ಮಿ ನಿವಾಸ' ನಟಿ ರೂಪಿಕಾ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಆಗಿ ನಟಿಸುತ್ತಿದ್ದಾರೆ ನಟಿ ರೂಪಿಕಾ. ಹೌದು 'ಲಕ್ಷ್ಮಿ ನಿವಾಸ'ದ ಸೊಸೆಯಾಗಿರುವ ರೂಪಿಕಾ ಪಾತ್ರ ಶ್ರೀಮಂತ ಮನೆತನದ ಹೆಣ್ಣು ಮಗಳಾಗಿ ಇದೀಗ ಮಿಡಲ್ ಕ್ಲಾಸ್ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವ ಸೊಸೆಯ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

ಈ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ರೂಪಿಕಾ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ತಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ತಾವು ಅರೇಂಜ್ ಮ್ಯಾರೇಜ್ ಆಗುವುದಾಗಿ ಹೇಳಿದ್ದಾರೆ.

Actress Roopika shares her relationship status

ನಾನು ಒಂದು ರಿಲೇಶನ್‌ಶಿಪ್‌ನಲ್ಲಿ ಇದ್ದೆ. ಅದು ಬಹಳ ಟಾಕ್ಸಿಕ್ ರಿಲೇಶನ್ಶಿಪ್ ಆಗಿತ್ತು. ಈಗ ಆದ್ದರಿಂದ ಹೊರ ಬಂದಿದ್ದೇನೆ. ನನಗೆ ಇಂತಹ ಟಾಕ್ಸಿಕ್ ರಿಲೇಶನ್‌ಶಿಪ್‌ಗಳು ಸಾಕಾಗಿದೆ. ಇನ್ನೇನಿದ್ದರೂ ಅರೇಂಜ್ ಮ್ಯಾರೇಜ್ ಆಗುತ್ತೇನೆ. ಅಜ್ಜ ಅಜ್ಜಿ, ತಂದೆ ತಾಯಿ ಸಹೋದರರೆಲ್ಲ ಇರುವ ತುಂಬು ಕುಟುಂಬ ಸಿಕ್ಕರೆ ಬಹಳ ಸಂತೋಷ ಎಂದಿದ್ದಾರೆ ನಟಿ ರೂಪಿಕಾ.

ತಮ್ಮ ನಟನ ಜರ್ನಿ ಬಗ್ಗೆ ಮಾತನಾಡಿದ ರೂಪಿಕಾ "ಹಲವಾರು ಅವಕಾಶಗಳು ಕೈಗೆ ಬಂದು ಬಾಯಿಗೆ ಬರದಂತಾಯಿತು. ಯಾರ್‍ಯಾರೋ ಮಾತನಾಡಿ, ಯಾವ್ಯಾವುದೋ ಮಿಸ್ ಅಂಡರ್‍‌ಸ್ಟ್ಯಾಂಡಿಂಗ್‌ನಿಂದ ನನಗೆ ಸಿಗಬೇಕಾದ ಅವಕಾಶಗಳು ತಪ್ಪಿ ಹೋಗಿವೆ. ಎಷ್ಟೋ ಬಾರಿ ನಿರ್ದೇಶಕರು ಪ್ರೊಡಕ್ಷನ್ ಹೌಸ್‌ಗಳು ನಮ್ಮನ್ನೇ ನೇರ ಸಂಪರ್ಕ ಮಾಡುವ ಬದಲು ಬೇರೆ ಯಾರನ್ನು ಕೇಳಿ ತಪ್ಪು ತಿಳಿಯುತ್ತಾರೆ. ನನ್ನ ವಿಚಾರದಲ್ಲೂ ಹಾಗೆ ಆಗಿದೆ. ರೂಪಿಕಾ ಸಂಭಾವನೆ ಹೆಚ್ಚು ಕೇಳುತ್ತಾರೆ ಎಂಬಿತ್ತ್ಯಾದಿ ರೂಮರ್ಸ್‌ನಿಂದ ನನಗೆ ಹಲವಾರು ಅವಕಾಶಗಳು ತಪ್ಪಿ ಹೋದವು" ಎಂದು ಹೇಳಿದ್ದಾರೆ.

ಇದರ ಜೊತೆಗೆ ನೇರವಾಗಿ ನಮ್ಮನ್ನೇ ಕೇಳಿ ಮಾತನಾಡಿದರೆ ನಮಗೂ ಅವರಿಗೂ ಸಹಾಯವಾಗುತ್ತದೆ. ಅದರ ಬದಲು ಮಧ್ಯವರ್ತಿಗಳಿಂದ ಮಾಹಿತಿ ಕಲೆ ಹಾಕ ಹೊರಟರೆ ತಪ್ಪು ಮಾಹಿತಿಗಳೇ ಹರಡುವುದು. ನಾನು ಫಾರಿನ್‌ನಲ್ಲಿ ಸೆಟಲಾಗಲಿದ್ದೇನೆ. ಹೆಚ್ಚಿನ ಸಂಭಾವನೆ ಕೇಳುತ್ತೇನೆ. ಪಾತ್ರಗಳ ಬಗ್ಗೆ ಬಹಳ ಚೂಸಿ ಇದ್ದೇನೆ, ಎಂಬಿತ್ಯಾದಿ ರೂಮರ್‌ಗಳು ನನ್ನ ಬಗ್ಗೆಯೇ ಹರಡಿವೆ" ಎಂದು ಆಕೆ ಬೇಸರ ವ್ಯಕ್ತಪಡಿಸಿದರು.

ಕಲಾವಿದರ ಸಂಭಾವನೆ ಬಗ್ಗೆಯೂ ಮಾತನಾಡಿದ ರೂಪಿಕಾ ಕಲಾವಿದರಿಗೆ ನಿರ್ದಿಷ್ಟ ಸಂಭಾವನೆ ಎಂದಿರುವುದಿಲ್ಲ. ಆಯಾ ಪ್ರಾಜೆಕ್ಟ್ ಹಾಗೂ ಪಾತ್ರದ ಡಿಮಾಂಡ್ ಮೇಲೆ ಸಂಭಾವನೆ ನಿಗದಿಯಾಗುತ್ತದೆ. ಕಲಾವಿದರ ಜೀವನ ತೆರೆ ಮೇಲೆ ಕಂಡಷ್ಟು ಗ್ಲಾಮರಸ್ ಆಗಿ ಇರುವುದಿಲ್ಲ ಎಂದು ಗ್ಲಾಮರಸ್ ಲೋಕದ ಕಟು ಸತ್ಯವನ್ನು ಹೊರಗಿಟ್ಟಿದ್ದಾರೆ ನಟಿ ರೂಪಿಕಾ.

ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಲ್ಲಿಯೂ ನಟಿಸಿರುವ ನಟಿ ರೂಪಿಕಾ 'ಚೆಲುವಿನ ಚಿಲಿಪಿಲಿ' ಸಿನಿಮಾದಲ್ಲಿ ಜನರ ಗಮನ ಸೆಳೆದಿದ್ದರು. ಆದರೂ ಇವರ ಹೆಚ್ಚಿನ ಸಿನಿಮಾಗಳು ಯಾವುದೇ ರೀತಿಯ ಯಶಸ್ಸು ತಂದು ಕೊಟ್ಟಿಲ್ಲ.

More from Filmibeat

English summary
Do you know what Roopika said, revealing the harsh truth of the glamorous world,
Read more about: actress roopika relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X