Saanya Iyer: ಸಾನ್ಯಾ ಅಯ್ಯರ್ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ರೂಪೇಶ್ ಶೆಟ್ಟಿ, ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸದ ನಟಿ!
ಪದೇ ಪದೇ ಸುದ್ದಿಯಲ್ಲಿ ಇರುವ ನಟಿ ಸಾನ್ಯಾ ಅಯ್ಯರ್. ಹೌದು.. ಬಿಗ್ ಬಾಸ್‌ಗೆ ಹೋಗಿ ಬಂದ ಬಳಿಕ ಸಾನ್ಯಾ ಅಯ್ಯರ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದಾರೆ. ಸಾನ್ಯಾ ಅಯ್ಯರ್ ಅವರನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳು ಬಹಳ ಖುಷಿಯಲ್ಲಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸಾನ್ಯಾ ಅಯ್ಯರ್ ತಮ್ಮ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಈ ನಟಿ ತನ್ನ ಹುಟ್ಟು ಹಬ್ಬವನ್ನು ಬಹಳ ಗ್ರಾಂಡ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ.
ವಿಶೇಷ ಎಂದರೆ ಈ ಹುಟ್ಟು ಹಬ್ಬದಂದು ಸಾನ್ಯಾ ಅಯ್ಯರ್ ಅವರ ಜೊತೆ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಬ್ಬರು ಬಹಳ ಆತ್ಮೀಯವಾಗಿ ಇದ್ದವರು. ಬಹಳ ಆತ್ಮೀಯತೆಯಿಂದ ಇರುವುದನ್ನು ನೋಡಿದ ಅಭಿಮಾನಿಗಳು ಇಬ್ಬರ ಮದುವೆ ಯಾವಾಗ ಎಂದು ಆಗಾಗ ಕೇಳುತ್ತಾ ಇರುತ್ತಾರೆ. ಆದರೆ ಬಿಗ್ ಬಸ್ ಮುಗಿದ ಬಳಿಕ ರೂಪೇಶ್ ಹಾಗೂ ಸಾನ್ಯಾ ಅಯ್ಯರ್ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅವರವರ ಸಿನಿಮಾದಲ್ಲಿ ಇಬ್ಬರು ಬ್ಯುಸಿ ಆಗಿಯೇ ಇದ್ದಾರೆ.

ಸಾನ್ಯಾ ಅಯ್ಯರ್ ಬಿಗ್ ಬಾಸ್‌ನಿಂದ ಬಂದ ಬಳಿಕ ಬಹಳ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಕೆಲವು ಫೋಟೋಗಳಲ್ಲಿ ಬಹಳ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇವರನ್ನು ನೋಡಿದ ಅನೇಕ ಜನರಿಗೆ ಬಹಳ ಖುಷಿ ಕೂಡ ಆಗಿತ್ತು.ಇದೀಗ ತಾನು ಅಂದುಕೊಂಡದ್ದು ಸಾಧಿಸಿದ ಈ ಚೆಲುವೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಸಾನ್ಯಾಗೆ ವಿಶ್ ಮಾಡಿದ ರೂಪೇಶ್ ಶೆಟ್ಟಿ
ಸೆಪ್ಟೆಂಬರ್ 21 ರಂದು ನಡೆದ ಸಾನ್ಯಾ ಅಯ್ಯರ್ ಹುಟ್ಟು ಹಬ್ಬಕ್ಕೆ ರೂಪೇಶ್ ಶೆಟ್ಟಿ ಆಗಮಿಸಿ, ನಟಿಗೆ ವಿಶ್ ಮಾಡಿದ್ದಾರೆ. ಹಾಗೆಯೇ ಇವರಿಬ್ಬರೂ ಫೋಟೋಗೆ ಕ್ಯೂಟ್ ಆಗಿ ಪೋಸ್ ನೀಡಿದ್ದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಆ ಬಳಿಕ ಅಭಿಮಾನಿಗಳು ಸಾನ್ಯಾಗೆ ನಿಮ್ಮಿಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಇಟ್ಟಿದ್ದಾರೆ.

ಇಬ್ಬರು ಸಿನಿಮಾದಲ್ಲಿ ಬ್ಯುಸಿ
ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇಬ್ಬರು ಅವರವರ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಬಿಗ್ ಬಾಸ್ ಬಳಿಕ ಇಬ್ಬರೂ ಅಷ್ಟಾಗಿ ಟಚ್ ನಲ್ಲಿ ಇರುವುದಿಲ್ಲ ಎಂದುಕೊಂಡವರು ಇದೀಗ ಇವರಿಬ್ಬರನ್ನು ಒಟ್ಟಿಗೆ ನೋಡು ಖುಷಿ ಪಟ್ಟಿದ್ದಾರೆ ಇವರಿಬ್ಬರೂ ಜೊತೆಗೆ ಸೆಲ್ಫಿ ಕ್ಲಿಕ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಇಬ್ಬರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳ ಖುಷಿ ಇಮ್ಮಡಿ ಆಗಿದೆ. ಇನ್ನೂ ಸಾನ್ಯಾ ಅಯ್ಯರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಗನ ಜೊತೆ ಸಿನಿಮಾ ಮಾಡುತ್ತಾ ಇದ್ದಾರೆ.


Click it and Unblock the Notifications











