twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟ ಮತ್ತಿಬ್ಬರು

    By Bharath Kumar
    |

    Recommended Video

    ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಗೆ ಇಬ್ಬರು ವಿಶೇಷ ಅತಿಥಿಗಳ ಎಂಟ್ರಿ | Filmibeat Kannada

    'ಬಿಗ್ ಬಾಸ್' ಕನ್ನಡ ಮನೆಯಲ್ಲಿ ಪ್ರತಿವಾರ ಒಬ್ಬೊಬ್ಬರು ಎಲಿಮಿನೇಟ್ ಆಗಿ ಹೊರಗೆ ಬರ್ತಿದ್ರೆ, ಮತ್ತೊಂದೆಡೆ ಇನ್ನೊಬ್ಬರು ಎಂಟ್ರಿ ಕೊಡ್ತಿದ್ದಾರೆ. ಕಳೆದ ವಾರವಷ್ಟೇ ನಟಿ ವೈಷ್ಣವಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆ ಪ್ರವೇಶ ಮಾಡಿದ್ದರು. ಆದ್ರೆ, ಗಾಯದ ಸಮಸ್ಯೆಯಿಂದ ಬಿಗ್ ಬಾಸ್ ನಿಂದ ಹೊರನಡೆದರು.

    ಅದಕ್ಕೂ ಮುಂಚೆ ಬಿಗ್ ಬಾಸ್ ನ ಹಲವು ಮಾಜಿ ಸ್ಪರ್ಧಿಗಳು ಮನೆಯೊಳಗೆ ಹೋಗಿ ಬಂದಿದ್ದರು. ಶಾಲಿನಿ, ಕೀರ್ತಿ, ಶೀತಲ್ ಶೆಟ್ಟಿ, ಅಕುಲ್ ಬಾಲಾಜಿ ಎಲ್ಲರೂ ಸರ್ಪ್ರೈಸ್ ಆಗಿ ಹೋಗಿ ಬಂದಿದ್ದರು.

    'ಬಿಗ್ ಬಾಸ್' ಅರ್ಧಕ್ಕೆ ಬಿಟ್ಟು ಹೊರನಡೆದ ವೈಲ್ಡ್ ಕಾರ್ಡ್ ಸ್ಪರ್ಧಿ ವೈಷ್ಣವಿ'ಬಿಗ್ ಬಾಸ್' ಅರ್ಧಕ್ಕೆ ಬಿಟ್ಟು ಹೊರನಡೆದ ವೈಲ್ಡ್ ಕಾರ್ಡ್ ಸ್ಪರ್ಧಿ ವೈಷ್ಣವಿ

    ಇದೀಗ, ಅಂತಹ ಸರ್ಪ್ರೈಸ್ ಅತಿಥಿಗಳಿಬ್ಬರು ಮನೆ ಪ್ರವೇಶ ಮಾಡಿದ್ದಾರೆ. ಇವರ ಸ್ಪರ್ಧಿನಾ ಅಥವಾ ಅತಿಥಿನಾ ಎಂಬುದರ ಬಗ್ಗೆ ಮಾಹಿತಿ ಇಲ್ಲವಾದರೂ, ಕುತೂಹಲ ಮಾತ್ರ ಹೆಚ್ಚಾಗಿದೆ. ಹಾಗಿದ್ರೆ, ಮನೆಯೊಳಗೆ ಹೋಗಿರುವ ಇಬ್ಬರು ಯಾರು? ಎಂದು ತಿಳಿದುಕೊಳ್ಳಲು ಮುಂದೆ ಓದಿ....

    ಇಬ್ಬರು ಯುವತಿಯರು ಬಿಗ್ ಮನೆಗೆ ಹೋಗಿದ್ದಾರೆ

    ಇಬ್ಬರು ಯುವತಿಯರು ಬಿಗ್ ಮನೆಗೆ ಹೋಗಿದ್ದಾರೆ

    ಡಿಸೆಂಬರ್ 12ನೇ ತಾರೀಖಿನ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆಯೊಳಗೆ ಇಬ್ಬರು ನಟಿಯರು ಸರ್ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ಇಬ್ಬರು ಮುಖ ಪರಿಚಯ ಮಾಡದೇ ಹೋದರು, ಆ ಇಬ್ಬರ ದ್ವನಿ ಪರಿಚಯ ಮಾಡಿಕೊಟ್ಟಿದ್ದಾರೆ.

    'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಾ ನಟಿ ಶ್ರದ್ಧಾ ಶ್ರೀನಾಥ್.?'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಾ ನಟಿ ಶ್ರದ್ಧಾ ಶ್ರೀನಾಥ್.?

    'ಕಿರಿಕ್' ಹುಡುಗಿ

    'ಕಿರಿಕ್' ಹುಡುಗಿ

    ಆ ಇಬ್ಬರಲ್ಲಿ ಒಬ್ಬರ 'ಕಿರಿಕ್ ಪಾರ್ಟಿ' ಹಾಗೂ 'ಕಾಲೇಜ್ ಕುಮಾರ' ಚಿತ್ರದ ನಾಯಕಿ ಸಂಯುಕ್ತ ಹೆಗಡೆ.

    'ದೊಡ್ಮನೆ'ಯೊಳಗೆ 'ಕಿರಿಕ್' ಕೀರ್ತಿ ಕನ್ನಡ ಕಲರವ'ದೊಡ್ಮನೆ'ಯೊಳಗೆ 'ಕಿರಿಕ್' ಕೀರ್ತಿ ಕನ್ನಡ ಕಲರವ

     ಪ್ರಾಮೀಸ್ ಮಾಡಿದ್ರು, ಈಗ ಹೋದ್ರು

    ಪ್ರಾಮೀಸ್ ಮಾಡಿದ್ರು, ಈಗ ಹೋದ್ರು

    ಈ ಹಿಂದೆ ಕಿಚ್ಚ ಸುದೀಪ್ ಅವರ ಜೊತೆ ಕಿಚ್ಚನ್ ಟೈಂನಲ್ಲಿ ಸಂಯುಕ್ತ ಭಾಗಿಯಾಗಿದ್ದಾಗ, ''ಬಿಗ್ ಬಾಸ್ ಗೆ ನೀವು ಹೋಗ್ಬೇಕ್ರಿ ಎಂದು ಸುದೀಪ್ ಕೇಳಿದ್ದರು. ಮೊದಲು ಬೇಡ ಎಂದಿದ್ದ ಸಂಯುಕ್ತ, ನಂತರ ಸರಿ ಹೋಗೋಣ ಎಂದು ಪ್ರಾಮೀಸ್ ಮಾಡಿದ್ದರು. ಈಗ ಹೇಳೀದಂತೆ ಮನೆ ಪ್ರವೇಶ ಮಾಡಿದ್ದಾರೆ.

    'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರೆ ನಟಿ ಸಂಯುಕ್ತ ಹೆಗ್ಡೆ.! ಪ್ರಾಮಿಸ್.!'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರೆ ನಟಿ ಸಂಯುಕ್ತ ಹೆಗ್ಡೆ.! ಪ್ರಾಮಿಸ್.!

    ಇನ್ನೊಬ್ಬರು ಯಾರು?

    ಇನ್ನೊಬ್ಬರು ಯಾರು?

    ಸಂಯುಕ್ತ ಹೆಗಡೆ ಜೊತೆ ಮತ್ತೊಬ್ಬರು ಮನೆಯೊಳಗೆ ಹೋಗಿದ್ದಾರೆ. ಜೊತೆಗೆ ಒಂದು ಪುಟ್ಟ ಮಗುವನ್ನ ಕೂಡ ಕರೆದುಕೊಂಡು ಹೋಗಿದ್ದಾರೆ. ಈಕೆ ಯಾರು ಎಂಬುದು ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ನಟಿ ಲಾಸ್ಯ ನಾಗ್ ಎಂದು ಹೇಳಲಾಗ್ತಿದೆ.

    'ಬಿಗ್ ಬಾಸ್' ಮನೆಯೊಳಗೆ ಶಾಲಿನಿ ಚಿಲಿಪಿಲಿ'ಬಿಗ್ ಬಾಸ್' ಮನೆಯೊಳಗೆ ಶಾಲಿನಿ ಚಿಲಿಪಿಲಿ

    ಸ್ಪರ್ಧಿನಾ ಅಥವಾ ಅತಿಥಿನಾ?

    ಸ್ಪರ್ಧಿನಾ ಅಥವಾ ಅತಿಥಿನಾ?

    ಸದ್ಯ, ಈ ಇಬ್ಬರು ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಪ್ರೋಮೋ ರಿಲೀಸ್ ಮಾಡಿದ್ದು, 'ಸರ್ಪ್ರೈಸ್'...'ಸರ್ಪ್ರೈಸ್' ಎಂದು ಕುತೂಹಲ ಹೆಚ್ಚಿಸಿದ್ದಾರೆ ಬಿಗ್ ಬಾಸ್. ಈ ಸರ್ಪ್ರೈಸ್ ಏನೂ ಎಂದು ತಿಳಿಯಲು ಇಂದಿನ ಎಪಿಸೋಡ್ ಮಿಸ್ ಮಾಡದೆ ನೋಡಬೇಕಾಗಿದೆ.

    'ಬಿಗ್ ಬಾಸ್' ಮನೆಯೊಳಗೆ ಮತ್ತೆ ಬಂದ ಶೀತಲ್ ಶೆಟ್ಟಿ'ಬಿಗ್ ಬಾಸ್' ಮನೆಯೊಳಗೆ ಮತ್ತೆ ಬಂದ ಶೀತಲ್ ಶೆಟ್ಟಿ

    English summary
    Kannada Actress Samyuktha hegde Enter to Kannada Bigg boss House.
    Tuesday, December 12, 2017, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X