"ಯು ಆರ್ ಟು ಲೇಟ್.. 13 ವರ್ಷದ ಹಿಂದೆಯೇ ನನಗೆ ಮದುವೆಯಾಗಿದೆ"; ಸಂಗೀತಾ ಭಟ್ ಪತಿಗೆ ಹೀಗೆ ಹೇಳಿದ್ದೇಕೆ?
ನಟಿ ಸಂಗೀತಾ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಹಾಗೂ ಬೋಲ್ಡ್ ಫೋಟೋಶೂಟ್ ಗಳಿಂದಲೇ ಈ ನಟಿ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ಇವರು ಮಾಡಿಸಿಕೊಂಡ ಫೋಟೋಶೂಟ್ ಬಹಳ ವೈರಲ್ ಆಗಿದೆ. ಬಿಳಿ ಬಣ್ಣದ ಬಟ್ಟೆಗೆ ಗೋಲ್ಡನ್ ಕಸೂತಿ ಇರುವ ಬಟ್ಟೆಯನ್ನು ಧರಿಸಿ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಸಂಗೀತ ಭಟ್ ಅವರ ಪೋಸ್ಟ್‌ಗೆ ನೆಟ್ಟಿಗರು ಬಹಳ ಖುಷಿಯಾಗಿದ್ದು ಬಹಳಷ್ಟು ಕಾಮೆಂಟ್ ಹಾಗೂ ಲೈಕ್ಸ್ ಬಂದಿವೆ.
ಇದರಲ್ಲಿ ಇದೀಗ ವಿಶೇಷವಾದ ಕಮೆಂಟ್ ಒಂದು ಬಂದಿದೆ. ಹೌದು, ಹೆಚ್ಚಾಗಿ ನಟಿಯರು ಯಾವುದೇ ರೀತಿಯ ಪೋಸ್ಟ್‌ಗಳನ್ನು ಹಾಕಿದಾಗಲೂ ಹಲವಾರ ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರು "ಮೇಡಂ ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ", "ಐ ಲವ್ ಯು", "ನನಗೆ ನಿಮ್ಮ ನಂಬರ್ ಕೊಡಿ" ಅಂತೆಲ್ಲ ಕಾಮೆಂಟ್ ಮಾಡುವುದು ಸರ್ವೇಸಾಮಾನ್ಯ.

ಒಂದಷ್ಟು ಕಾಮೆಂಟ್ ಬಂದಿದ್ದು, ಅದರಲ್ಲಿ ಒಂದು ವಿಶೇಷವಾದ ಕಾಮೆಂಟ್ ಕೂಡ ಬಂದಿದೆ. ಅದೇ ನಟ ಸುದರ್ಶನ್ ರಂಗ ಪ್ರಸಾದ್ ಅವರದ್ದು. ಅಂದಹಾಗೆ, ನಟ ಸುದರ್ಶನ್ ರಂಗಪ್ರಸಾದ್ ಅವರು ಸದ್ಯಕ್ಕೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ತಾಂಡವ್ ಎನ್ನುವ ಪಾತ್ರದ ಮೂಲಕ ಜನಮನ ಗೆಲ್ಲುತ್ತಿದ್ದಾರೆ. ದಿನೇ ದಿನೇ ಪ್ರತಿ ಸಂಚಿಕೆಯಲ್ಲೂ ನಟ ಸುದರ್ಶನ್ ರಂಗಪ್ರಸಾದ್ ಅವರ ಪಾಪ್ಯುಲಾರಿಟಿ ಹೆಚ್ಚಾಗುತ್ತಲೇ ಇದೆ.
ನಟಿ ಸಂಗೀತಾ ಭಟ್ ಅವರ ಇತ್ತೀಚೆಗಿನ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ನಟ ಸುದರ್ಶನ್ ರಂಗಪ್ರಸಾದ್ "ಮೇಡಂ ಕಾಲ್ ಮೀ, ಐ ಆಮ್ ಸಿಂಗಲ್" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯ ಕೊಟ್ಟಿರುವ ನಟಿ ಸಂಗೀತ ಭಟ್ "ಸಾರಿ ಸರ್ ಯು ಆರ್ ಟು ಲೇಟ್.. 13 ವರ್ಷದ ಹಿಂದೆಯೇ ನನಗೆ ಮದುವೆಯಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ನಟ ಸುದರ್ಶನ್ ರಂಗಪ್ರಸಾದ್ ಬೇರೆ ಯಾರು ಅಲ್ಲ ಸ್ವತಃ ನಟಿ ಸಂಗೀತಾ ಭಟ್ ಅವರ ಪತಿ. ಈ ರೀತಿ ಸತಿ ಪತಿ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಛೇಡಿಸಿಕೊಂಡಿರುವ ಕಾಮೆಂಟ್‌ಗಳು ಇದೀಗ ಬಹಳ ವೈರಲ್ ಆಗಿದೆ. ಇದನ್ನು ಗಮನಿಸಿರುವ ನೆಟ್ಟಿಗರಂತೂ ಸಖತ್ ಎಂಜಾಯ್ ಮಾಡಿದ್ದಾರೆ. ಲೈಕ್ಸ್ ಹಾಗೂ ಕಾಮೆಂಟ್ಸ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಟಿ ಸಂಗೀತಾ ಭಟ್ ಹಾಗೂ ನಟ ಸುದರ್ಶನ್ ರಂಗಪ್ರಸಾದ್ ಅವರು 13 ವರ್ಷಗಳಿಂದ ದಂಪತಿಗಳಾಗಿದ್ದಾರೆ. ಸಂಗೀತಾ ಭಟ್ ಹಾಗೂ ಸುದರ್ಶನ್ ಇಬ್ಬರೂ ಅನ್ಯೋನ್ಯತೆ ಬಗ್ಗೆನೂ ನೆಟ್ಟಿಗರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇವರು ಹಾಕಿಕೊಂಡಿರುವ ಕಾಮೆಂಟ್‌ಗಳು ಬಹಳ ವೈರಲ್ ಆಗಿದ್ದು ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











