ಹೋಳಿ ಮುಗಿದಿದ್ರೂ ಸಂಭ್ರಮ ಮುಗಿದಿಲ್ಲ; ಬಣ್ಣದ ಓಕುಳಿಯಲ್ಲಿ ಮಿಂಚಿದ ನಟಿ ಸಂಗೀತಾ ಭಟ್

By ಅನಿತಾ ಬನಾರಿ

ಇತ್ತೀಚೆಗಷ್ಟೇ ಹೋಳಿ ಹಬ್ಬ ಮುಗಿದಿದ್ದು, ಹಲವಾರು ನಟ ನಟಿಯರು ತಮ್ಮದೇ ರೀತಿಯಲ್ಲಿ ಹೋಳಿ ಹಬ್ಬದ ಸಂಭ್ರಮವನ್ನು ಆಚರಿಸಿದರು. ಹಲವಾರು ಜನ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹೋಳಿ ಹಬ್ಬದ ಫೋಟೋಶೂಟ್‌ಗಳನ್ನು ಶೇರ್ ಮಾಡಿಕೊಂಡಿದ್ದರು. ಅಂದ ಹಾಗೆ, ನಟಿ ಸಂಗೀತಾ ಭಟ್ ಅವರು ಕೂಡ ತಮ್ಮ ಹೋಳಿ ಸಂಭ್ರಮಾಚರಣೆ ಫೋಟೋ ಶೂಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಅದು ಭಾರೀ ವೈರಲ್ ಆಗಿದೆ.

ಹೌದು, ಬಿಳಿ ‌ಸೀರೆ ಉಟ್ಟು ಬಿಳಿ ಸ್ಲೀವ್ಲೆಸ್ ಬ್ಲೌಸ್ ತೊಟ್ಟ ನಟಿ ಸಂಗೀತಾ ಭಟ್ ಒಂದು ದೊಡ್ಡ ಜ್ಯುವೆಲ್ಲರಿ ಪೀಸ್ ಅನ್ನು ಕತ್ತಿಗೇರಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರ ಮೈತುಂಬ ರಂಗು ರಂಗಿನ ಹೋಳಿ ಬಣ್ಣಗಳು ಬಿದ್ದು ಅವರನ್ನು ವಿಶೇಷವಾಗಿ ಕಾಣುವಂತೆ ಮಾಡಿದೆ. ಈ ರೀತಿಯ ಇಂಟ್ರೆಸ್ಟಿಂಗ್ ಫೋಟೋ ಶೂಟ್‌ಗಳನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಸಂಗೀತಾ ಭಟ್ ಅವರಿಗೆ ಅಭಿಮಾನಿಗಳು ಹಾಗೂ ಫಾಲೋವರ್ಸ್ ಜೈ ಅಂದಿದ್ದಾರೆ.

Actress Sangeetha Bhat shines in Holi celebrations

ಇನ್ನು ಕಮೆಂಟ್ ಸೆಕ್ಷನ್‌ನಲ್ಲಿ ಕಾಂಪ್ಲಿಮೆಂಟ್‌ಗಳ ಸುರಿಮಳೆಗೆ ಸುರಿದಿದೆ. ಒಟ್ಟಿನಲ್ಲಿ ಈ ಹೋಳಿ ಲುಕ್‌ನಲ್ಲಿ ನಟಿ ಸಂಗೀತಾ ಭಟ್ ಬಹಳ ವಿಭಿನ್ನವಾಗಿ ಕಾಣುತ್ತಿದ್ದಾರೆ. ಮುಖ್ಯವಾದ ವಿಚಾರವೆಂದರೆ, ನಟಿ ಸಂಗೀತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಆಗಿದ್ದು, ಆಗಾಗ ಫೋಟೋಶೂಟ್‌ಗಳನ್ನು ಮಾಡಿ ಶೇರ್ ಮಾಡುತ್ತಲೇ ಇರುತ್ತಾರೆ. ತಾವು ಬೇರೆ ಬೇರೆ ಲುಕ್‌ಗಳಲ್ಲಿ ಹೇಗೆ ಕಾಣುತ್ತಾರೆ ಎಂದು ಅವರ ಅಭಿಮಾನಿಗಳಿಗೆ ಈ ಮೂಲಕ ತೋರಿಸುತ್ತಿರುತ್ತಾರೆ. ಅವರು ಬಹಳಷ್ಟು ಬೋಲ್ಡ್ ಫೋಟೋ ಶೂಟ್‌ಗಳನ್ನು ಮಾಡಿದ್ದೆವು.

ಬಹಳ ಅಡ್ವೆಂಚರಸ್ ಸ್ವಭಾವ ಇರುವಿರುವ ನಟಿ ಸಂಗೀತಾ ಭಟ್ ಅವರು ಬೇರೆ ಬೇರೆ ರೀತಿಯ ಸ್ಕಿಲ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ 'ಹೀಲ್ಸ್ ವಿಥ್ ವೀಲ್ಸ್' ಎಂಬ ಸಂಸ್ಥೆಯ ಕಡೆಯಿಂದ ಬುಲೆಟ್ ಬೈಕ್ ರೈಡಿಂಗ್ ಅನ್ನು ಕಲಿತಿದ್ದಾರೆ. ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿರುವ ನಟಿ ಸಂಗೀತಾ ಭಟ್ ಅವರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

Actress Sangeetha Bhat shines in Holi celebrations

ಸಿನಿಮಾಗಳಾದ 'ದಯವಿಟ್ಟು ಗಮನಿಸಿ', 'ಅನುಕ್ತ', 'ಕ್ಲಾಂತಾ', ಕಿಸ್ಮತ್ 'ಆದ್ಯ' ಎರಡನೇ ಸಲ' ಮುಂತಾದವುಗಳಲ್ಲಿ ಪ್ರಮುಖ ರೋಲ್ ಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬಿಝಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರ ಹೊಸ ಸಿನಿಮಾಗಳನ್ನು ಅವರ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಮುನ್ನೋಡುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

More from Filmibeat

English summary
TV actress Sangeetha Bhat in Holi celebration charmed through photo shoot:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X