ಹೆಣ್ಣಿಗೆ ಹೆಣ್ಣೇ ಶತ್ರು ; ಏಕಾಏಕಿ ಕಿಡಿ ಕಾರಿದ್ದೇಕೆ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ..?
ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ನಾವು ಅಷ್ಟೂ ಮಾಡದೇ ಇದ್ದರೆ ಹೇಗೆ ಎನ್ನುವುದು ಬಹುತೇಕರ ಆಲೋಚನೆ ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ.
ಆದರೆ ಈ ಟ್ರೋಲ್‌ಗಳನ್ನು ಸಹಿಸಲಾಗದೇ ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಮತ್ತೂ ಕೆಲವರು ಸಮಯ ಬಂದಾಗ ತಮ್ಮ ಮನದ ನೋವು ಹೊರ ಹಾಕುತ್ತಾರೆ. ತಮ್ಮ ಅಸಹನೆ ಮತ್ತು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ ಸಂಜನಾ ಬುರ್ಲಿ.

ಹೌದು, ಸಂಜನಾ ಬುರ್ಲಿ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಮನೆ ಮತ್ತು ಮನವನ್ನು ತಲುಪಿದ ಚೆಲುವೆ. ಅನ್ಯಾಯವನ್ನು ಪ್ರಶ್ನಿಸುವ, ಶೋಷಣೆಯ ವಿರುದ್ಧ ತಿರುಗಿ ಬೀಳುವ, ಐಎಎಸ್ ಅಧಿಕಾರಿಯಾಗುವ ಕನಸನ್ನೊತ್ತ ಪಾತ್ರವನ್ನು ಅಷ್ಟೇ ಸೊಗಸಾಗಿ ನಿರ್ವಹಿಸಿದ ಸಂಜನಾ ಬುರ್ಲಿ ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ತಮ್ಮ ಈ ಚಾನೆಲ್ ಮೂಲಕ ಹಲವರ ಸಂದರ್ಶನಗಳನ್ನು ಮಾಡಿದ್ದಾರೆ. ಅಡುಗೆ, ದೇವರು, ಇತ್ಯಾದಿ ವಿಚಾರಗಳ ಕುರಿತು ಕೂಡ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇಂಥಾ ಸಂಜನಾ ಬುರ್ಲಿ ಸದ್ಯ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅತ್ಯಂತ ಕೊಳಕಾದ ಕಾಮೆಂಟ್‌ಗಳನ್ನು ಮಾಡುವರ ವಿರುದ್ಧ ಕಿಡಿ ಕಾರಿದ್ದಾರೆ. ಏನು ಯೋಚನೆ ಮಾಡದೇ ಕಾಮೆಂಟ್ ಮಾಡೋರಿಗೆ ಉತ್ತರವನ್ನು ನೀಡಿದ್ದಾರೆ. ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಸಂಜನಾ ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡಬೇಕಾದರೆ ಇನ್‌ಸ್ಟಾಗ್ರಾಮ್ ಜನಜನಿತವಾಗಿತ್ತು, ಹೀಗಾಗಿ 2017ರಲ್ಲಿ ಇನ್‌ಸ್ಟಾಗ್ರಾಮ್ ಉಪಯೋಗಿಸಲು ಶುರು ಮಾಡಿದ್ದೇ ಎಂದು ಹೇಳಿದ್ದಾರೆ.
ಆಗ ನಾನು ಇನ್ನೂ ಕಿರುತೆರೆಗೆ ಬಂದಿರಲಿಲ್ಲ ಹೀಗಾಗಿ ನನ್ನ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ನನಗೆ ಕಹಿ ಅನುಭವ ಕೂಡ ಆಗಿರಲಿಲ್ಲ ಎಂದು ಹೇಳಿರುವ ಸಂಜನಾ ಬುರ್ಲಿ ಮುಂದೆ ಎಲ್ಲವೂ ಬದಲಾಗುತ್ತಾ ಹೋಯಿತು, ಬೆಳೆಯುತ್ತಾ ಹೋದಂತೆ ನೆಗೆಟಿವ್ ಕಾಮೆಂಟ್‌ಗಳು ಬರಲು ಶುರುವಾದವು ಎಂದು ಹೇಳಿದ್ದಾರೆ. ನಮ್ಮ ಬಗ್ಗೆ ಅವರಿಗೆ ಏನೂ ಗೊತ್ತಿರಲ್ಲ ಆದರೂ ನಮ್ಮ ಕ್ಯಾರೆಕ್ಟರ್ ಸರ್ಟಿಫಿಕೆಟ್ ಕೊಡ್ತಾರೆ, ನೆಗೆಟಿವ್ ಕಾಮೆಂಟ್ ಮಾಡ್ತಾರೆ ಎಂದಿರುವ ಸಂಜನಾ ನಾನು ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್ ಆಗಿದ್ದರೂ ಕೂಡ ಕೆಲ ಕಾಮೆಂಟ್‌ಗಳು ನನಗೆ ನೋವು ನೀಡುತ್ತಿದ್ದವು ಎಂದು ಹೇಳಿದ್ಧಾರೆ.
ಅಸಹ್ಯ ಮತ್ತು ಅಶ್ಲೀಲವಾದ ಕಾಮೆಂಟ್‌ಗಳು ನನ್ನ ಮೇಲೆ ಪರಿಣಾಮ ಬೀರುತ್ತಿರಲಿಲ್ಲ ಆದರೆ ನನ್ನ ತಂದೆ ತಾಯಿ ನನ್ನ ಸ್ನೇಹಿತರು ಆ ಕಾಮೆಂಟ್‌ಗಳನ್ನ ಓದಿ ಬೇಜಾರು ಮಾಡಿಕೊಳ್ಳುತ್ತಿದ್ದರು, ಹೀಗಾಗಿ ಆ ನಂತರ ನಾನು ಕಾಮೆಂಟ್ ಸೆಕ್ಷನ್‌ನ ಸೀಮಿತಗೊಳಿಸಿದೆ, ಯಾರು ಬೇಕು ಅವರಿಗೆ ಮಾತ್ರ ಕಾಮೆಂಟ್ ಮಾಡುವ ಅವಕಾಶವನ್ನು ನೀಡಿದೆ ಎಂದಿರುವ ಸಂಜನಾ ಬುರ್ಲಿ ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡುವುದು ಹೊಸದಲ್ಲ, ಅನೇಕರು ಏನಾದರೂ ಸಿಗುತ್ತಾ ಕಾಲು ಎಳೆಯೋದಕ್ಕೆ ಅಂತ ಕಾದು ಕುಂತಿರುತ್ತಾರೆ ಎಂದು ಹೇಳಿದ್ದಾರೆ. ತಮ್ಮ ಮನದ ನೋವನ್ನು ಈ ಮೂಲಕ ಹೊರ ಹಾಕಿದ್ದಾರೆ.
ಇನ್ನು ಕಾಮೆಂಟ್ ಮಾಡುವರ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳಿರುತ್ತಾರೆ, ಆದರೂ ಕೂಡ ಬೇರೆ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಾರೆ ಎಂದಿರುವ ಸಂಜನಾ ಬುರ್ಲಿ, ದುರಂತ ಅಂದರೆ ಹೀಗೆ ಕೆಟ್ಟ ಕಾಮೆಂಟ್ ಮಾಡುವರಲ್ಲಿ ಶೇಕಡಾ 90 ರಷ್ಟು ಹೆಣ್ಣುಮಕ್ಕಳೇ ಇರುತ್ತಾರೆ ಎಂದು ಹೇಳಿದ್ದಾರೆ.ಹೆಣ್ಣಿಗೆ ಹೆಣ್ಣೆ ಶತ್ರು ಅವರ ಜೀವನದಲ್ಲಿ ಅವರಿಗೇನೋ ಮಾಡಬೇಕಾಗಿರುತ್ತೆ ಆದರೆ ಅದು ಸಾಧ್ಯವಾಗಿರುವುದಿಲ್ಲ ಹೀಗಾಗಿ ನಮ್ಮ ಕಾಲೆಳೆದು ಅವರು ಖುಷಿ ಪಡುತ್ತಾರೆ, ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ ಎಂದು ಕೂಡ ಹೇಳಿರುವ ಸಂಜನಾ ಬುರ್ಲಿ, ಈ ಸೋಶಿಯಲ್ ಮೀಡಿಯಾ ಕಿರುಕುಳದಿಂದ ಯಾರಾದಾದರೂ ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ.


Click it and Unblock the Notifications











