»   » ಬಿಗ್ ಬಾಸ್‌ನಲ್ಲಿ ಶರ್ಮಾ ಅಂದರ್, ಸಂಜನಾ ಬಾಹರ್

ಬಿಗ್ ಬಾಸ್‌ನಲ್ಲಿ ಶರ್ಮಾ ಅಂದರ್, ಸಂಜನಾ ಬಾಹರ್

Posted By:
Subscribe to Filmibeat Kannada

ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಅಂದುಕೊಂಡಿದ್ದದ್ದೇ ಬೇರೆ. ಆದರೆ ಆಗಿದ್ದೇ ಬೇರೆ. ಎಲ್ಲರೂ ಬೃಹತ್ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಮನೆಯಿಂದ ಹೋಗುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ನಟಿ ಸಂಜನಾ ಪಾಲಿಗೆ ಈ ಶುಕ್ರವಾರ (ಏ.5) ಬ್ಯಾಡ್ ಫ್ರೈಡೆ. ಈಟಿವಿ ಕನ್ನಡ ವಾಹಿನಿ ಬಿಗ್ ಬಾಸ್ ರಿಯಾಲಿಟಿ ಶೋದಿಂದ ಸಂಜನಾರನ್ನು ಬೀಳ್ಕೊಡಲಾಯಿತು.

ಈ ಸಲದ ವಾರದ ಕಥೆ ಕಿಚ್ಚ ಸುದೀಪ್ ಜೊತೆಗೆ ಹಲವು ಅಚ್ಚರಿಗಳಿಗೆ ಕಾರಣವಾಯಿತು. ಈ ವಾರ ಯಾರಿಗೆ ಗುಡ್ ಫ್ರೈಡೆ, ಯಾರಿಗೆ ಬ್ಯಾಡ್ ಫ್ರೈಡೆ ಎಂದು ಮಾತಿಗಿಳಿದ ಸುದೀಪ್ ಶೋ ಬೊಂಬಾಟ್ ಆಗಿತ್ತು. ಈ ವಾರದ ಎಲಿಮಿನೇಷನ್‌ಗೆ ನರೇಂದ್ರ ಬಾಬು ಶರ್ಮಾ, ಸಂಜನಾ, ಅರುಣ್ ಸಾಗರ್, ನಿಕಿತಾ ಹೆಸರುಗಳು ನಾಮಿನೇಟ್ ಆಗಿದ್ದವು.

Actress Sanjjanaa

ಕೊನೆಯ ಹಂತದವರೆಗೂ ಶರ್ಮಾ ಹೆಸರೇ ಕೇಳಿಬರುತ್ತಿತ್ತು. ಆದರೆ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಅರುಣ್ ಸಾಗರ್ ಹಾಗೂ ಸಂಜನಾ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗಬೇಕಾಯಿತು. ಮನೆಯಿಂದ ಹೊರಬಿದ್ದಕ್ಕೆ ಸಂಜನಾ ಏನೇನು ಬೇರಮಾಡಿಕೊಂಡಿಲ್ಲ.

ಇಲ್ಲೇ ಇದ್ದರೂ ಸರಿ ಹೊರಗೆ ಹೋದರೂ ಸರಿ ಎಂದು ಅವರು ಎರಡೂ ಸನ್ನಿವೇಶಗಳಿಗೆ ರೆಡಿಯಾಗಿದ್ದರು. ಸುದೀಪ್ ಸಹ ಅಷ್ಟೇ ಕೂಲ್ ಆಗಿ ಮನೆಯಿಂದ ಹೊರಗೆ ಬರಬೇಕು ಎಂದು ಸಂಝನಾಗೆ ತಿಳಿಸುತ್ತಿದ್ದಂತೆ ಎಲ್ಲರಿಗೂ ಅಚ್ಚರಿಯಾಯಿತು.

ನರೇಂದ್ರ ಬಾಬು ಶರ್ಮಾ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ವತಃ ಅವರೇ ಮನೆಯಿಂದ ಹೊರಬೀಳಲು ಮುಂದಾಗಿದ್ದರು.ಮನೆಯಲ್ಲಿ ನಾನ್ ವೆಜ್ ಮಾಡುತ್ತಾರೆ. ನನಗೆ ಇದು ಒಗ್ಗಲ್ಲ ಎಂದು ಹೇಳಿಕೊಂಡಿದ್ದರು.

ಇನ್ನು ಮುಂದೆ ಮನೆಯಲ್ಲಿ ನಾನ್ ವೆಜ್ ಇರಲ್ಲ. "ಏನು ಗುರುಗಳೇ ಕರ್ನಾಟಕ ಜನತೆ ನಿಮ್ಮನ್ನು ಮನೆಯಿಂದ ಹೊರಗೆ ಕಳುಹಿಸಲು ಒಪ್ಪುತ್ತಿಲ್ಲ" ಎಂದು ಸುದೀಪ್ ಶರ್ಮಾ ಅವರನ್ನು ಕೊಂಡಾಡಿದರು. ಅವರು ವಿರಾಜಮಾನರಾಗಿ ಕೂತು ಎಲ್ಲಾ ತಮ್ಮ ದಯೆ ಎಂಬಂತಿದ್ದರು. ಹೈಲೈಟ್ಸ್ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

English summary
Here’s some fresh news from the house of Bigg Boss Kannada reality show. One of the contestant actress Sanjjanaa has moved out of the house. She left the house on Friday episode (5th April).
Please Wait while comments are loading...