ನಳಿನಿ ಅಂತ ಹೆಸರಿಟ್ಟುಕೊಂಡಿದ್ದ ಈ ನಟಿ ಸಪ್ನಾ ದೀಕ್ಷಿತ್ ಆಗಿ ಬದಲಾಗಿದ್ದು ಹೇಗೆ ಗೊತ್ತೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರೀರಸ್ತು ಶುಭಮಸ್ತು' ಕೂಡಾ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಈ ಧಾರಾವಾಹಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೀಗಿರುವಾಗ ಧಾರಾವಾಹಿಯಲ್ಲಿ ಶಾರ್ವರಿ ಪಾತ್ರದಲ್ಲಿ ನಟಿಸುತ್ತಿದ್ದ ನೇತ್ರಾ ಜಾಧವ್ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಿದ್ದಿರುವ ವಿಚಾರ ಸೀರಿಯಲ್ ವೀಕ್ಷಕರಿಗೆ ತಿಳಿದೇ ಇದೆ.

ಮಾತ್ರವಲ್ಲದೇ ಶಾರ್ವರಿ ಪಾತ್ರಕ್ಕೆ ಈಗಾಗಲೇ ನಟಿ ಸಪ್ನಾ ದೀಕ್ಷಿತ್ ಆಗಮನವೂ ಕೂಡಾ ಆಗಿದ್ದಾಗಿದೆ. ಜೀ ಕನ್ನಡ ವಾಹಿನಿಯ ವೀಕ್ಷಕರಿಗೆ ಸಪ್ನಾ ದೀಕ್ಷಿತ್ ಅವರು ತೀರಾ ಪರಿಚಿತ ಹೆಸರು ಕೂಡ ಹೌದು. ವರ್ಷಗಳ ಹಿಂದೆ ಮುಕ್ತಾಯಗೊಂಡಿದ್ದ 'ಕಮಲಿ' ಧಾರಾವಾಹಿಯಲ್ಲಿ ನಾಯಕ ರಿಷಿಯ ತಾಯಿ ತಾರಾ ಪಾತ್ರದಲ್ಲಿ ಈ ನಟಿ ಅಭಿನಯಿಸುತ್ತಿದ್ದರು.

Actress Sapna Deekshith real name is Nalini who plays Sharwari in Shrirasthu Shubhamasthu

ಉದಯ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಸಪ್ನಾ ಮೊದಲ ಬಾರಿಗೆ ಬಣ್ಣ ಹಚ್ಚಿ ನಟಿಸಿದ್ದು 'ಪ್ರಾಯಶ್ಚಿತ' ಧಾರಾವಾಹಿಯಲ್ಲಿ. ತದ ನಂತರ 'ಪಾ.ಪ ಪಾಂಡು', 'ಸಿಲ್ಲಿ ಲಲ್ಲಿ', 'ಪಾಯಿಂಟ್ ಪರಿಮಳ', 'ಪಾಂಡುರಂಗ ವಿಠಲ', 'ದಂಡ ಪಿಂಡಗಳು', 'ದರಿದ್ರ ಲಕ್ಷ್ಮಿಯರು', 'ಜನನಿ', 'ಶಕ್ತಿ', 'ಚಂದ್ರಿಕಾ', 'ಮಾಂಗಲ್ಯ', 'ಪುರುಷೋತ್ತಮ', 'ಪದ್ಮಾವತಿ' ಸೇರಿದಂತೆ ಎಪ್ಪತ್ತೈದಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿದ್ದ ಸಪ್ನಾ ಅದ್ಭುತ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಾಕೆ.

ಕನ್ನಡ ಕಿರುತೆರೆಯ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಪ್ನಾ ಬೆಳ್ಳಿತೆರೆಯಲ್ಲಿಯೂ ಕಮಾಲ್ ಮಾಡಿದ ಬೆಡಗಿ. 'ರನ್ನ', 'ರಂಗಿತರಂಗ', 'ಕೃಷ್ಣ ರುಕ್ಕು', 'ನಿಜ','ಪ್ರೀತಿಯ ಲೋಕ', 'ಶಿವಲಿಂಗ', 'ಭರ್ಜರಿ' ಸೇರಿದಂತೆ ಹತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಈಕೆ ಗಮನ ಸೆಳೆದಿದ್ದಾರೆ.

Actress Sapna Deekshith real name is Nalini who plays Sharwari in Shrirasthu Shubhamasthu

ನಟನೆಯ ಹೊರತಾಗಿ ಕೆಲವೊಂದು ಅಡುಗೆ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಈಕೆ ಗುರುತಿಸಿಕೊಂಡಿದ್ದರು. ಜೊತೆಗೆ ಕೇಬಲ್ ನೆಟ್​ವರ್ಕ್ ನಡೆಸಿದ ಮಾಧ್ಯಮ ಸನ್ಮಾನ ಅವಾರ್ಡ್​ನಲ್ಲಿ 'ವರ್ಸಟೈಲ್ ಪ್ರಶಸ್ತಿ'ಯನ್ನು ಈಕೆ ಪಡೆದುಕೊಂಡಿದ್ದಾರೆ.

ಗಿರಿಜಾ ಕಲ್ಯಾಣದಲ್ಲಿನ ತಾಯಿಯ ಪಾತ್ರ ಮತ್ತು ಆಸೆಗಳು ಧಾರಾವಾಹಿಯಲ್ಲಿ ನಾಯಕಿಯಗಿ ನಟಿಸಿದ್ದು ಖುಷಿಯ ಕ್ಷಣಗಳು ಎಂದು ಈ ಹಿಂದೆ ಹೇಳಿಕೊಂಡಿದ್ದರು ಸಪ್ನಾ ದೀಕ್ಷಿತ್. ಸದ್ಯ ಶಾರ್ವರಿಯಾಗಿ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸುತ್ತಿರುವ ಸಪ್ನಾ ಅವರ ನಿಜವಾದ ಹೆಸರು ನಳಿನಿ.

ಹೌದು, ನಳಿನಿ ಎಂಬ ಹೆಸರಿನ ಈಕೆ ಸಪ್ನಾ ಆಗಿ ಬದಲಾದ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ. 'ಏಕ್ ದುಜೇ ಕೇಲಿಯೇ' ಸಿನಿಮಾದಿಂದ ಪ್ರಭಾವಿತರಾಗಿದ್ದ ನಳಿನಿ ತಂದೆ ತಾಯಿ ತಮ್ಮ ಪ್ರೀತಿಯ ಮಗಳ ಹೆಸರನ್ನು ಸಪ್ನಾ ಆಗಿ ಬದಲಾಯಿಸುವ ತೀರ್ಮಾನ ಮಾಡಿದರು. ಹೀಗಾಗಿಯೇ ನಳಿನಿಯಾಗಿದ್ದ ಈ ನಟಿ ಸಪ್ನಾಳಾಗಿ ಬದಲಾದರು.

More from Filmibeat

English summary
Actress Sapna Deekshith real name is Nalini who plays Sharwari in Shrirasthu Shubhamasthu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X