ಕಿರುತೆರೆಗೂ ಎಂಟ್ರಿ ಕೊಟ್ಟ ಸಪ್ತಮಿಗೌಡ; ಮುಖದಲ್ಲೇನೋ ಬದಲಾವಣೆ ಕಾಣ್ತಿದೆ ಎಂದ ನೆಟ್ಟಿಗರು

By ಅನಿತಾ ಬನಾರಿ

2022ರಲ್ಲಿ ಬಿಡುಗಡೆಗೊಂಡ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ' ವಿಶ್ವ ವಿಖ್ಯಾತಿ ಪಡೆದಿದ್ದಲ್ಲದೆ, ಅದರಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೂ ಹೊಸ ಐಡೆಂಟಿಟಿಯನ್ನು ತಂದುಕೊಟ್ಟಿದೆ. ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಇದೀಗ ಕನ್ನಡ ಸಿನಿಮಾರಂಗದ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಳ್ಳುತ್ತಿರುವ ಸಪ್ತಮಿ ಗೌಡ ಬಿಗ್ ಬಾಸ್ ಸೀಸನ್ 10ರಲ್ಲೂ ಕಾಣಿಸಿಕೊಂಡಿದ್ದರು.

ಹೌದು, ಸರ್ಕಾರದ 'ನನ್ನ ಮೈತ್ರಿ' ಯೋಜನೆಯನ್ನು ಪ್ರತಿನಿಧಿಸಿದ್ದ ಸಪ್ತಮಿ ಗೌಡ ಬಿಗ್ ಬಾಸ್ ಮನೆಗೆ ಹೋಗಿ ಮುಟ್ಟಿನ ಕುರಿತಾದ ಜಾಗೃತಿಯನ್ನು ಜನರಲ್ಲಿ ಮೂಡಿಸಿದ್ದರು. ಇದೀಗ ಕನ್ನಡದ ಧಾರಾವಾಹಿಯೊಂದರಲ್ಲೂ ಕಾಣಿಸಿಕೊಂಡಿದ್ದರು. ಹೌದು, ಕನ್ನಡ ಕಿರುತೆರೆಯಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದೇನೆಂದರೆ ಧಾರಾವಾಹಿಗಳನ್ನು ಹಿರಿತೆರೆ ಕಲಾವಿದರಿಂದ ವಿಭಿನ್ನವಾಗಿ ಕಿರುತೆರೆಯಲ್ಲಿ ಪ್ರತಿನಿಧಿಸುವ ಕಾರ್ಯವೊಂದು ಕನ್ನಡದ ವಾಹಿನಿಯಿಂದ ನಡೆಯುತ್ತಿದೆ.

 Actress Sapthami Gowda surprised how fast serial reaching people

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ರಸ್ತು ಶುಭಮಸ್ತು' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಇತ್ತೀಚೆಗಷ್ಟೇ ಈ ಧಾರಾವಾಹಿ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಆ ಟ್ವಿಸ್ಟ್ ಏನೆಂಬುದನ್ನು ಕಿರುತೆರೆ ವೀಕ್ಷಕರ ಮುಂದೆ ಪ್ರಸ್ತಾಪಿಸಲು ಸಪ್ತಮಿ ಗೌಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅಂದ ಹಾಗೇ ಈ ನಟಿ ಪ್ರೋಮೋದಲ್ಲಿ ಅಷ್ಟೇ ಕಾಣಿಸಿಕೊಂಡಿದ್ದರೂ, 'ಕಾಂತಾರ' ಬೆಡಗಿಯನ್ನು ಕಿರುತೆರೆಯಲ್ಲಿ ಕಂಡು ಸೀರಿಯಲ್ ವೀಕ್ಷಕರು ಮೆಚ್ಚಿಕೊಂಡಿದ್ದರು.

'ಕಾಂತಾರ'ದಿಂದ ಸಿಕ್ಕ ಜನ ಮನ್ನಣೆಗೆ ನಾನು ಸದಾ ಋಣಿ. ಈಗ ಕಿರುತೆರೆಯಲ್ಲೂ ಒಮ್ಮೆ ಈ ರೀತಿಯಾಗಿ ಕಾಣಿಸಿಕೊಂಡಿದ್ದು ಖುಷಿ ಇದೆ. ಕಿರುತೆರೆಯ ಜನರಿಗೆ ತಲುಪುವ ವೇಗ ನೋಡಿ ಆಶ್ಚರ್ಯವಾಯಿತು. ಕಿರುತೆರೆ ನಟನೆ, ಸಿನಿಮಾ ನಟನೆಗಿಂತ ಬಹಳ ವಿಭಿನ್ನ. ಕಿರುತೆರೆಯಲ್ಲಿ ಎಲ್ಲವನ್ನು ಉತ್ಪ್ರೇಕ್ಷೆಯಿಂದ ನಟಿಸಬೇಕು. ಸಿನಿಮಾದಲ್ಲಿ ನಟಿಸಿದಂತಲ್ಲ. ಈ ಒಂದು ದಿನದ ಪ್ರಚಾರದ ಶೂಟಿಂಗ್ ಅನುಭವ ನನಗೆ ನಟನೆಯ ಹೊಸ ಆಯಾಮಗಳನ್ನು ಪರಿಚಯಿಸಿಕೊಟ್ಟಿದೆ. ಕಿರುತೆರೆ ಕಲಾವಿದರ ಮೇಲಿನ ಪ್ರೀತಿ ಗೌರವ ಹೆಚ್ಚಿದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ಸಪ್ತಮಿ ಗೌಡ ಹೇಳಿಕೊಂಡಿದ್ದರು .

 Actress Sapthami Gowda surprised how fast serial reaching people

'ಕಾಂತಾರ' ಸಿನಿಮಾದ ಲೀಲಾ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಸಪ್ತಮಿ ಗೌಡ ಅವರ ಮೊದಲ ಸಿನಿಮಾ ಯಾವುದು ಎಂಬ ಯೋಚನೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಡಾಲಿ ಧನಂಜಯ್ ನಟನೆಯ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ಗಿರಿಜಾ ಆಗಿ ಅಭಿನಯಿಸುವ ಮೂಲಕ ಸಿನಿಮಾ ಸಪ್ತಮಿ ಗೌಡ ನಂಟು ಬೆಳೆಸಿಕೊಂಡಿದ್ದರು.

ವಿವೇಕ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸಪ್ತಮಿ ಗೌಡ, ಡಾ. ಶ್ರೀಲಕ್ಷ್ಮಿ ಮೋಹನ್ ದಾಸ್ ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ಇದರ ಜೊತೆಗೆ 'ಯುವ' ಸಿನಿಮಾದಲ್ಲಿ ನಾಯಕಿ ಸಿರಿಯಾಗಿ ಈಕೆ ನಟಿಸಿದ್ದು ಅದು ಈ ವರ್ಷ ತೆರೆ ಕಾಣಲಿದೆ.

More from Filmibeat

English summary
Actress Sapthami Gowda shined in the promo of Srirastu Subhamastu serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X