Namma Lacchi: ಮತ್ತೆ ವಿಲನ್ ಪಾತ್ರಕ್ಕೆ ಜೈ ಎಂದ ವರೂಧಿನಿ ಈಗ ದೀಪಿಕಾ
ಬೋಲ್ಡ್ ನಟಿ ಸಾರಾ ಅಣ್ಣಯ್ಯ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಿಂಚುತ್ತಿದ್ದಾರೆ. ಇದರಲ್ಲೂ ವಿಲನ್ ಪಾತ್ರವನ್ನೇ ಆರಿಸಿಕೊಂಡಿದ್ದು, ಪ್ರೇಕ್ಷಕರು ಏನ್ ಹೇಳುತ್ತಾರೋ ಎಂಬ ಕುತೂಹಲವಂತೂ ಇದೆ.
ಸಾರಾ ಅಣ್ಣಯ್ಯ ಇಷ್ಟು ದಿನ 'ಕನ್ನಡತಿ' ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ರೋಲ್‌ನಲ್ಲಿ ನಟಿಸಿದ್ದರು. ವರೂಧಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ.
ಹಾಗಿದ್ದರೆ ಬನ್ನಿ, ಸಾರಾ ಅಣ್ಣಯ್ಯ ಅವರು ಸೀರಿಯಲ್ ಜರ್ನಿ ಜೊತೆಗೆ ಅವರ ಪಾತ್ರದ ಬಗ್ಗೆಯೂ ಒಂದಷ್ಟು ಮಾಹಿತಿಯನ್ನು ತಿಳಿಯೋಣ.

ಸಂಗಮ್ ಪತ್ನಿ ಪಾತ್ರದಲ್ಲಿ ಸಾರಾ
ನಾಯಕ ಸಂಗಮ್ ಅವರ ಪತ್ನಿ ಪಾತ್ರದಲ್ಲಿ ಸಾರಾ ನಟಿಸಿದ್ದು, ಕಂಪ್ಲೀಟ್ ವಿಲನ್ ಪಾತ್ರವನ್ನು ನಿರ್ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಸಂಗಮ್ ತನಗೆ ಇಷ್ಟವಿಲ್ಲದಿದ್ದರೂ ಪತ್ನಿ ದೀಪಿಕಾಳ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿದ್ದಾನೆ. ಆತನಿಗೆ ದೀಪಿಕಾ ತಂದೆ ಹಣದ ಸಹಾಯ ಮಾಡಿದ್ದು, ಹಾಗಾಗಿ ತನ್ನ ಮಾತನ್ನು ಸಂಗಮ್ ಕೇಳಬೇಕು ಎಂದು ಬಯಸುತ್ತಾಳೆ. ಸಂಗಮ್ ಹಾಗೂ ದೀಪಿಕಾಗೆ ಮುದ್ದಾದ ಮಗು ಕೂಡ ಇದೆ.

ಗಿರಿಜಾಳನ್ನು ಪ್ರೀತಿಸಿದ್ದ ಸಂಗಮ್
ಸಂಗಮ್ ಮದುವೆಗೂ ಮುನ್ನ ಹಳ್ಳಿಗೆ ಹೋದಾಗ ಗಿರಿಜಾಳನ್ನು ಪ್ರೀತಿಸಿರುತ್ತಾನೆ. ಇವರಿಬ್ಬರ ಪ್ರೀತಿಯ ಫಲವಾಗಿ ಲಚ್ಚಿ ಜನಿಸಿರುತ್ತಾಳೆ. ಆದರೆ ಈ ಬಗ್ಗೆ ಸಂಗಮ್‌ಗೆ ಗೊತ್ತಿರುವುದಿಲ್ಲ. ಬೇಗ ಬರುತ್ತೇನೆ ಎಂದು ಹೋದ ಸಂಗಮ್ ಸಿಟಿಯಲ್ಲಿ ಬೇರೆ ಜೀವನ ನಡೆಸುತ್ತಿರುತ್ತಾನೆ. ದೊಡ್ಡ ಹಾಡುಗಾರನಾಗಿರುವ ಸಂಗಮ್ ಹಾಡುಗಳನ್ನು ಲಚ್ಚಿ ಇಷ್ಟಪಡುತ್ತಾಳೆ. ಆದರೆ, ಲಚ್ಚಿಗೆ ಅವರೇ ತನ್ನ ತಂದೆ ಎಂಬ ಸತ್ಯವೂ ಗೊತ್ತಿರುವುದಿಲ್ಲ.

ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ
ಮೂಲತಃ ಹುಣಸೂರಿನವರಾದ ಸಾರಾ ಅಣ್ಣಯ್ಯ ಅವರಿಗೆ ಮಾಡೆಲಿಂಗ್‌ನಲ್ಲಿ ಇರಬೇಕೆಂದು ಆಸೆ ಇತ್ತು. ಹೀಗಾಗಿ ಸಾರಾ ಅಣ್ಣಯ್ಯ ಅವರು ಫ್ರೀಲಾನ್ಸ್ ಮಾಡೆಲಿಂಗ್ ಮಾಡುತ್ತಿದ್ದರು. ಆದರೆ, ನಟಿಸುವ ಆಸೆ ಏನೂ ಇರಲಿಲ್ಲ. ಕಿರಣ್ ರಾಜ್, ರಕ್ಷಿತ್ ಸೇರಿದಂತೆ ಸಾರಾ ಅಣ್ಣಯ್ಯ ಅವರಿಗೆ ಹಲವು ನಟ ನಟಿಯರ ಪರಿಚಯವಿತ್ತು. ಆದರೆ, ಅದೊಂದು ದಿನ 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಬಯಸದೇ ಬಂದ ಭಾಗ್ಯ ಎಂದು ಒಪ್ಪಿಕೊಂಡ ಸಾರಾ ಅವರು ಈಗ ತಮ್ಮ ಎರಡನೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಬೋಲ್ಡ್ ನಟಿ ಸಾರಾ ಅಣ್ಣಯ್ಯ
ಇನ್ನು ಸಾರಾ ಅಣ್ಣಯ್ಯ ಅವರಿಗೆ ಪರಭಾಷೆಯಲ್ಲಿ ನಟಿಸುವ ಅವಕಾಶಗಳು ಒದಗಿಬರುತ್ತಿದೆ. ಸಿನಿಮಾದಲ್ಲಿ ನಟಿಸಬೇಕು ಎಂದು ಕೊಂಡಿರುವ ಸಾರಾ ಅವರು ನಾಯಕಿ ಆಗುವುದಕ್ಕಿಂತಲೂ ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್ ನಲ್ಲಿ ಆಗಾಗ ಫೋಟೋಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಸಾರಾ ಅವರ ಡ್ರೆಸ್ಸಿಂಗ್ ಫ್ಯಾಷನ್ ಅನ್ನು ಹುಡುಗಿಯರು ಇಷ್ಟಪಟ್ಟು ಫಾಲೋ ಮಾಡುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸಾರಾ ಅವರು ಸಾಕಷ್ಟು ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ಈ ಬಗ್ಗೆ ಕೆಟ್ಟ ಕಮೆಂಟ್‌ಗಳು ಬಂದರೂ ಕೇರ್ ಮಾಡೊಲ್ಲ ಎಂದು ಹೇಳುತ್ತಾರೆ. ಇನ್ನು ಸಾರಾ ಅಣ್ಣಯ್ಯ ಅವರಿಗೆ ಟ್ರಾವೆಲಿಂಗ್ ಮಾಡುವುದೆಂದರೆ ಬಹಳ ಇಷ್ಟವಂತೆ. ಆಗಾಗ ಟ್ರಿಪ್‌ಗಳಿಗೂ ಹೋಗುತ್ತಿರುತ್ತಾರೆ.


Click it and Unblock the Notifications











