Sara Annaiah: ಗಣೇಶ ಹಬ್ಬದಂದು ಝರಿ ಸೀರೆಯಲ್ಲಿ ಕಂಗೊಳಿಸಿದ ನಟಿ ಸಾರಾ ಅಣ್ಣಯ್ಯ
ಕನ್ನಡ ನಟಿ ಮಣಿಯರ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕನ್ನಡತಿ ಧಾರವಾಹಿ ಮೂಲಕ ಮಿಂಚಿ ಇದೀಗ ಅಮೃತಧಾರೆ ಧಾರವಾಹಿ ಮೂಲಕ ಎಲ್ಲರ ಮನ ಗೆದ್ದ ಮಹಿಮಾ ಪಾತ್ರಧಾರಿ, ಸಾರಾ ಅಣ್ಣಯ್ಯ ಹಬ್ಬದ ದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.
ಗಣಪತಿ ಹಬ್ಬವನ್ನು ಸಾರಾ ಅಣ್ಣಯ್ಯ ಅವರ ಮನೆಯಲ್ಲಿ ಕೊಂಚ ಜೋರಾಗಿಯೇ ಮಾಡುತ್ತಾರೆ ಎಂದು ಇದರಲ್ಲಿಯೇ ತಿಳಿಯುತ್ತದೆ. ಇನ್ನೂ ಸಾರಾ ಅಣ್ಣಯ್ಯ ಗಣಪತಿ ದೇವರ ಮೂರ್ತಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಮಹಿಮಾ ಪಾತ್ರದಲ್ಲಿ ಎಲ್ಲರ ಮನೆಮಾತಾದ ಈ ನಟಿ ನೋಡುಗರ ಮನ ಸೆಳೆದಿದ್ದಾರೆ.. ಆದರೆ ಕೆಲವರಿಗೆ ಮಹಿಮಾ ಪಾತ್ರಧಾರಿಯನ್ನೂ ಕಂಡರೆ ಆಗುವುದಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಆ ಪಾತ್ರದಲ್ಲಿ ಆಕೆ ಪರಕಾಯಪ್ರವೇಶ ಮಾಡಿದ್ದಾರೆ.

ಕನ್ನಡತಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿರಿಸಿದ ಸಾರಾ ಅಣ್ಣಯ್ಯ ಅವರ ಅಭಿನಯಕ್ಕೆ ಮರುಳಾಗದವರೆ ಇಲ್ಲ. ಅಷ್ಟ್ರವರೆಗೆ ಇವರು ಅಭಿಮಾನಿಗಳ ಮನ ಗೆದ್ದಿದ್ದಾರೆ ಎಂದರೆ ತಪ್ಪಿಲ್ಲ. ಯಾವತ್ತೂ ಮಾಡರ್ನ್ ಆಗಿ ಉಡುಗೆ ತೊಟ್ಟುಕೊಳ್ಳುವ ಇವರು ಹಬ್ಬದಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಅಭಿಮಾನಿಗಳ ಮನಗೆದ್ದಿದ್ದಾರೆ.
ಸಾರಾ ಫೋಟೋ ವೈರಲ್
ಇನ್ನೂ ಸಾರಾ ಅಣ್ಣಯ್ಯ ಕೊಡಗಿನಲ್ಲಿ ಜನಿಸಿದ್ದು ನೋಡಲು ಸಖತ್ ಕ್ಯೂಟ್ ಆಗಿ ಇದ್ದಾರೆ. ಇನ್ನೂ ಸಾರಾ ಅಣ್ಣಯ್ಯ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು ಇದ್ದು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಹಾಗೆಯೇ ಅಭಿಮಾನಿಗಳು ಕಾಮೆಂಟ್ ಲೈಕ್ ಮಾಡಿ ಬಹಳ ಖುಷಿ ಪಟ್ಟಿದ್ದಾರೆ. ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ
ಇವರು ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವುದು ಎಲ್ಲರಿಗೂ ಖುಷಿ ನೀಡಿದೆ. ಇನ್ನೂ ಸಾರಾ ಅಣ್ಣಯ್ಯ ಹಲವಾರು ಬಾರಿ ಫೋಟೋಶೂಟ್ ಮಾಡಿಸಿಕೊಂಡು ಖುಷಿ ಪಟ್ಟಿದ್ದಾರೆ. ಹಾಗೆಯೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದ್ದರು. ಗೌರಿ ಗಣೇಶ ಹಬ್ಬದಂದು ಸಾರಾ ಅಣ್ಣಯ್ಯ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದು, ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.
ಝರಿ ಸೀರೆಯಲ್ಲಿ ಕಂಗೊಳಿಸಿದ ನಟಿ
ನಟಿ ಝರಿ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಸ್ ಈಗ ವೈರಲ್ ಆಗಿದೆ. ಗಣೇಶ ಹಬ್ಬವನ್ನು ಎಲ್ಲರೂ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಸಾರ್ವಜನಿಕವಾಗಿ ಗಣೇಶ ಹಬ್ಬ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಹಳದಿ ಬಣ್ಣದ, ನೇರಳೆ ಬಾರ್ಡರ್ ಇದ್ದಂತಹ ಸೀರೆ ಉಟ್ಟಿದ್ದಾರೆ. ಈ ಸೀರೆ ಉಟ್ಟು ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











