ಕಪ್ಪು ಸೀರೆಯುಟ್ಟು ಮಿಂಚಿದ 'ಅಮೃತಧಾರೆ' ಮಹಿಮಾ; ಸಾರಾ ಅಣ್ಣಯ್ಯ ಲುಕ್‌ಗೆ ನೆಟ್ಟಿಗರು ಕ್ಲೀನ್ ಬೋಲ್ಡ್
'ಅಮೃತಧಾರೆ' ಧಾರಾವಾಹಿಯಲ್ಲಿ ನಟಿ ಸಾರಾ ಅಣ್ಣಯ್ಯ ಶ್ರೀಮಂತ ಉದ್ಯಮಿ ಗೌತಮ್ ದಿವಾನನ ಮುದ್ದಿನ ತಂಗಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿ ಮಿಡಲ್ ಕ್ಲಾಸ್ ಜೀವನಕ್ಕೆ ಹೊಂದಿಕೊಳ್ಳುವ ಪಾತ್ರವದು. ಜೀವನದೊಂದಿಗೆ ತನ್ನ ಆಸೆ ಆಕಾಂಕ್ಷೆಗಳನ್ನು ಹೊಂದಿಸಿಕೊಳ್ಳುತ್ತಾ ಸಾಗುತ್ತಿರುವ ಮಹಿಮಾ ಜನರಿಗೆ ಬಹಳ ಹಿಡಿಸಿರುವಂತಹ ಪಾತ್ರ.
ಮಹಿಮಾ ಪಾತ್ರ ಇತ್ತ ಪೂರ್ತಿ ಒಳ್ಳೆಯವಳೂ ಅಲ್ಲದ, ಆಚೆ ಕೆಟ್ಟವಳು ಅಲ್ಲದ ಗ್ರೇ ಶೇಡ್ ಹೊಂದಿರುವಂತಹ ಪಾತ್ರವಾಗಿರುವುದರಿಂದ ಧಾರಾವಾಹಿ ವೀಕ್ಷಕರಿಗೆ ಬಹಳ ಹಿಡಿಸಿದೆ ಎಂದರೆ ತಪ್ಪಾಗಲ್ಲ. ಈ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ನಟಿ ಸಾರಾ ಅಣ್ಣಯ್ಯ ಈ ಮೊದಲು ಕೆಲ ಧಾರಾವಾಹಿಗಳಲ್ಲಿ ನಟಿಸಿದರೂ ಮಹಿಮಾ ಪಾತ್ರದಿಂದಲೇ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಇತ್ತೀಚಿಗಷ್ಟೇ ಸಾರಾ ಅಣ್ಣಯ್ಯ ರವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಕಡುಗಪ್ಪು ಸೀರೆಯನ್ನು ಪೋಸ್ಟ್ ಮಾಡಿರುವುದು ಬಹಳ ವೈರಲ್ ಆಗುತ್ತಿದೆ. ಹೌದು, ನಟಿ ಸಾರಾ ಅಣ್ಣಯ್ಯ ರವರು ವೆಸ್ಟೆರ್ನ್ ಉಡುಪುಗಳಲ್ಲಿ ಸಾಕಷ್ಟು ಸದ್ದು ಮಾಡಿರುವ ಬೆಡಗಿ. ಇನ್ನು 'ಅಮೃತಧಾರೆ' ಧಾರಾವಾಹಿಯಲ್ಲೂ ಕೂಡ ಮಹಿಮಾ ಎನ್ನುವ ಪಾತ್ರವದ ಮೂಲಕ ವೆಸ್ಟೆರ್ನ್ ಉಡುಪುಗಳಲ್ಲೇ ಕಂಡು ಬಂದಿದ್ದಾರೆ. ಒಟ್ಟಿನಲ್ಲಿ ಈಕೆ ನಿಜಜೀವನದಲ್ಲೂ ಮಾಡ್ರನ್, ಸ್ಟೈಲಿಶ್, ಫ್ಯಾಷನೇಬಲ್ ಆಗಿ ಕಾಣಿಸಿಕೊಂಡಿದ್ದಾರೆ .
ನಟಿ ಸಾರಾ ಅಣ್ಣಯ್ಯ ಅವರು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್‌ಗಳಲ್ಲಿ ಬಹಳ ಆ್ಯಕ್ಟಿವ್ ಆಗಿದ್ದು, ಈ ಮುಂಚೆಯೂ ತಮ್ಮ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಾ ಟ್ರೆಂಡಿಂಗ್‌ನಲ್ಲಿಯೇ ಇರುತಿದ್ದರು. ಕಪ್ಪು ಬಣ್ಣದ ಸೀರೆಯನ್ನು ಉಟ್ಟು ತಮ್ಮ ಟ್ರೇಡಿಶನಲ್ ಅಟ್ಟೈರ್‌ನೊಂದಿಗೆ ಬ್ಲಾಕ್ ಮೆಟಲ್ ಜುಮ್ಕಿಯನ್ನು ತೊಟ್ಟು , ಕೂದಲನ್ನು ಬಿಟ್ಟು ನಗುಮುಗದೊಂದಿಗೆ ಪೋಸ್ ನೀಡಿದ್ದಾರೆ. ಇವರನ್ನು ಸ್ಯಾಂಡಲ್ ವುಡ್ ನ ಕಿರುತೆರೆಯ ಬ್ಯೂಟಿ ಕ್ವೀನ್ ಎಂದರೆ ತಪ್ಪಾಗೋಲ್ಲ ನೋಡಿ. ನಟಿ ಸಾರಾ ಅಣ್ಣಯ್ಯರವರ ಸಾರಿ ಲುಕ್ ನೋಡಿ ಕನ್ನಡಿಗರು ಮರುಳಾಗಿದ್ದಾರೆ.

ಪೋಸ್ಟ್‌ಗೆ ಸಾಕಷ್ಟು ಲೈಕ್ ಮತ್ತು ಕಮೆಂಟ್‌ಗಳು ಬಂದಿದ್ದು, ಕಮೆಂಟ್‌ಗಳಲ್ಲಿ ಕೆಲವರು ಮೇಡಂ ನೀವು ಯಾಕೆ ಸಿನಿಮಾದಲ್ಲಿ ನಟಿಸಬಾರದು ಎಂದು ಪ್ರಶ್ನೆ ಹಾಕಿದರೆ, ಇನ್ನೂ ಕೆಲವರು ಯಾವ ಬಾಲಿವುಡ್ ಸ್ಯಾಂಡಲ್‌ವುಡ್ ಹೀರೋಯಿನ್‌ಗಳಿಗೂ ಕಮ್ಮಿ ಇಲ್ಲ ಎಂದು ಹೊಗಳಿದ್ದಾರೆ.
ಕಿರುತೆರೆಯ ಸಾಕಷ್ಟು ಹೀರೋಯಿನ್‌ಗಳ ಮೇಕ್ ಓವರ್ ಮಾಡಿದಂತಹ ರಂಜು ಗೌಡ ರವರ ಮೇಕಪ್, ಲಕ್ಷ್ಮಿ ಗ್ಲಾನ್‌ರವರ ಸೀರೆ ಮತ್ತು ಜ್ಯುವೆಲ್ಲರಿಯಲ್ಲಿ ನ್ಯೂ ಲುಕ್ ನೊಂದಿಗೆ ನಟಿ ಸಾರಾ ಅಣ್ಣಯ್ಯ ಮನೆ ಮಾತಾಗಿದ್ದಾರೆ. ಈ ಹಿಂದೆಯೂ ಇವರ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿದ್ದ ವಿಕಾಸ್ ಫೋಟೋ ಫ್ಯಾಕ್ಟರಿ ಯವರು ಬ್ಯೂಟಿಫುಲ್ ಲೇಡಿಯ ಬ್ಯೂಟಿಫುಲ್ ಚಿತ್ರಗಳನ್ನು ಕ್ಯಾಪ್ಚರ್ ಮಾಡಿದ್ದಾರೆ.


Click it and Unblock the Notifications











