ಮೂರು ವರ್ಷದ ಮಗನಿಗೆ ಕ್ಯಾನ್ಸರ್; ಮಗ ಫೋಟೊ ತೋರಿಸಿ ಭಾವುಕರಾದ ನಟಿ ಶಾಂಭವಿ

By ಅನಿತಾ ಬನಾರಿ

ನಟಿ ಶಾಂಭವಿ ವೆಂಕಟೇಶ್ ಅವರು ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಹೌದು, ಶಾಂಭವಿ ಅವರ ಮೂರು ವರ್ಷದ ಮಗ ದುಷ್ಯಂತನ ಫೋಟೋಗಳನ್ನು ಹಂಚಿಕೊಂಡ ನಟಿ ಶಾಂಭವಿ ವೆಂಕಟೇಶ್ ಮಗನಿಗೆ ಕ್ಯಾನ್ಸರ್ ಇರುವುದನ್ನು ಬಹಿರಂಗಗೊಳಿಸಿದ್ದಾರೆ.

ಶಾಂಭವಿಯವರ ಮೂರು ವರ್ಷದ ಮಗ ದುಷ್ಯಂತನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಇದೀಗ ಚಿಕಿತ್ಸೆ ನೀಡಲಾಗಿದೆ. ಅಂದ ಹಾಗೆ ನಟಿ ಶಾಂಭವಿ ವೆಂಕಟೇಶ್ ಅವರು ಇತ್ತೀಚೆಗಷ್ಟೇ 'ಅಮೃತಧಾರೆ' ಧಾರಾವಾಹಿಯಲ್ಲಿ ಮಾನ್ಯಾ ಪಾತ್ರದ ಮೂಲಕ ಕಾಣಿಸಿಕೊಂಡಿದ್ದರು.

Actress Shambhavi Venkatesh gets emotional after sharing her son s cancer treatment photos

'ಅಮೃತಧಾರೆ' ಧಾರಾವಾಹಿಯ ನಾಯಕ ನಟ ಗೌತಮ್ ದೀವಾನನ ಪ್ರೇಯಸಿಯ ಮಾನ್ಯ ಎಂಬ ಪಾತ್ರದಲ್ಲಿ ನಟಿಸಿ ಜನಮನ ಸೆಳೆದಿದ್ದರು. ನಟಿ ಶಾಂಭವಿ ವೆಂಕಟೇಶ್ ಅವರಿಗೆ ದುರ್ಗೆ ಹಾಗೂ ದುಶ್ಯಂತ್, ಎಂಬ ಎರಡು ಪುಟಾಣಿ ಮಕ್ಕಳಿದ್ದಾರೆ. ಅವರ ಮೂರು ವರ್ಷದ ಮಗ ದುಶ್ಯಂತನಿಗೆ ಥರ್ಡ್ ಸ್ಟೇಜ್ ಬ್ಲಡ್ ಕ್ಯಾನ್ಸರ್ ಇರುವುದು ಇತ್ತೀಚೆಗಷ್ಟೇ ಪತ್ತೆಯಾಗಿದೆ. ಸದ್ಯಕ್ಕೆ ಕೀಮೋ ಥೆರಪಿಗಳು ನಡೆಯುತ್ತಿದ್ದು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ನಟಿ ಶಾಂಭವಿ ವೆಂಕಟೇಶ್.

"ಇದೇ ಸೆಪ್ಟೆಂಬರ್ 23ರಂದು ಎಂದೂ ನೆನೆಯದ ಘಟನೆ ಎಂದು ನಡೆದು ಹೋಯಿತು. ನನ್ನ ಮಗ ದುಷ್ಯಂತನಿಗೆ ತರ್ಡ್ ಸ್ಟೇಜ್ ಬ್ಲಡ್ ಕ್ಯಾನ್ಸರ್ ಇರುವುದು ತಿಳಿಯಿತು. ಆದರೆ 95 % ಕ್ಯೂರ್ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಡಾಕ್ಟರ್ ಬರವಸೆ ನೀಡಿರುವುದರಿಂದ ಸ್ವಲ್ಪ ಸಮಾಧಾನದಲ್ಲಿ ಇದ್ದೇವೆ. ಆ ಮೂರು ವರ್ಷದ ಎಳೆ ಕೂಸುಗೆ ತನಗೆ ಏನು ಆಗುತ್ತಿದೆ ಎಂಬ ಅರಿವೇ ಇಲ್ಲ. ಪ್ರತಿದಿನ ಕಿಮೋಥೆರಪಿಯ ನೋವನ್ನು ಸಹಿಸಿಕೊಂಡಿರುವ ಮಗುವನ್ನು ನೋಡುವಾಗ ಮನಸ್ಸಿಗೆ ಬೇಸರವಾಗುತ್ತದೆ. ನಿನಗೆ ಹುಷಾರಿಲ್ಲ ಮಗನೇ ಹಾಗಾಗಿ ನಾವು ಈ ರೀತಿಯ ಚಿಕಿತ್ಸೆ ಕೊಡಿಸುತ್ತೇವೆ ಎಂದು ಆಗಾಗ ನಾನು ಹೇಳಲು, ಅರ್ಥ ಮಾಡಿಸಲು ಪ್ರಯತ್ನ ಪಡುತ್ತಿರುತ್ತೇನೆ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗೇ ತನ್ನ ಮಗನ ಫೋಟೊವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. "ನನ್ನ ಮಗಳಿಗೆ ಹೋಲಿಸಿದರೆ ನನ್ನ ಮಗ ಮೊದಲಿಂದಲೂ ಕೊಂಚ ಗುಂಡಗೆ ಇದ್ದ. ಹಾಗೆಲ್ಲ ನಾವು ಡುಮ್ಮ ಎಂದು ಅವನನ್ನು ಚೇಡಿಸುತ್ತಿದ್ದೆವು. ಈಗ ಕಿಮೋಥೆರಪಿಯ ಸೈಡ್ ಎಫೆಕ್ಟ್ಸ್ ಇಂದಲೋ ಏನು ಅವನು ಇನ್ನಷ್ಟು ದಪ್ಪಗಾಗಿದ್ದಾನೆ. ಮುಖ ತುಂಬಾ ತುಂಬಿಕೊಂಡು ಅವನ ಕಣ್ಣುಗಳೆರಡೂ ಚಿಕ್ಕದಾಗಿ ಕಾಣುತ್ತದೆ. ಈಗಂತೂ ನಾನು ನನ್ನ ಪುಟ್ಟಾಣಿ ಮಗ ದುಶ್ಯಂತ ಮೊದಲು ಹೇಗಿದ್ದನೋ ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಅವನ ಕೆಲವು ಮೊದಲಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ನನ್ನ ಮಗನ ಮೇಲಿರಲಿ." ಎಂದು ಬರೆದುಕೊಂಡಿದ್ದಾರೆ ನಟಿ ಶಾಂಭವಿ ವೆಂಕಟೇಶ್.

ಇತ್ತೀಚೆಗಂತೂ ಕ್ಯಾನ್ಸರ್ ಎಂಬ ಮಹಾಮಾರಿ ನಾನಾ ವಿಧದಲ್ಲಿ ಕಾಡುತ್ತಿರುವುದು ಸರ್ವೇಸಾಮಾನ್ಯ ಎನ್ನುವಷ್ಟು ಹಬ್ಬಿಕೊಳ್ಳುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಬಹಳಷ್ಟು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಶಾಂಭವಿ ವೆಂಕಟೇಶ್ ಅವರ ಈ ಪೋಸ್ಟ್ ನೋಡುತ್ತಿದ್ದಂತೆ ಬೇಸರಗೊಂಡ ನೆಟ್ಟಿಗರು ಹಾಗೂ ಅಭಿಮಾನಿಗಳು ಮಗು ಬೇಗ ಹುಷಾರಾಗಲಿ ಎಂದು ಹಾರೈಸಿದ್ದಾರೆ. ಹಲವಾರು ಜನ ನಟಿ ಶಾಂಭವಿ ವೆಂಕಟೇಶ್‌ ಅವರಿಗೆ ಧೈರ್ಯ ಹೇಳಿದ್ದಲ್ಲದೆ, ಮಗುವಿಗೂ ಧೈರ್ಯದಿಂದಿರಲು ಮೆಸೇಜ್ ಮೂಲಕ ಹಾಗೂ ಕಮೆಂಟ್ಗಳ ಮೂಲಕ ತಿಳಿಸಿದ್ದಾರೆ.

ನಟಿ ಶಾಂಭವಿ ವೆಂಕಟೇಶ್ ಅವರು 'ಕೆಜಿಎಫ್' ಸೇರಿದಂತೆ 'ಸಲಗ' ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದು. 'ಲಕ್ಷ್ಮಿ ಸ್ಟೋರ್ಸ್', 'ಪಾರು', 'ಅಮೃತಧಾರೆ' ನಿಗೂಢ ರಾತ್ರಿ ಇತ್ಯಾದಿ ಹಲವು ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾತಿಚರಾಮಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ನಟಿ ಶಾಂಭವಿ ವೆಂಕಟೇಶ್.

More from Filmibeat

English summary
Actress Shambhavi Venkatesh gets emotional after sharing her son's cancer treatment photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X