ಖಜಾಕಿಸ್ತಾನ ಹುಟ್ಟು ಹಬ್ಬ ಆಚರಿಸಿಕೊಂಡ ಭಾನುಮತಿ ಅಲಿಯಾಸ್ ಶರ್ಮಿತಾ ಗೌಡ
ಮಾಲ್ಡೀವ್ಸ್ ಟ್ರಿಪ್‌ನಲ್ಲಿ ಬೋಲ್ಡ್ ಆಗಿ ಕಂಡು ಪಡ್ಡೆ ಹುಡುಗರ ಮನಸ್ಸಿಗೆ ಘಾಸಿ ಮಾಡಿದ್ದ ಕನ್ನಡದ ಕಿರುತೆರೆ ನಟಿ ಶರ್ಮಿತಾ ಖಜಾಕಿಸ್ತಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಟ್ರೆಂಡಿಂಗ್‌ನಲ್ಲಿವೆ. 'ಗೀತಾ' ಧಾರಾವಾಹಿ ಮೂಲಕ ಏಲ್ಲರ ಮನ ಗೆದ್ದಿದ್ದ ನಟಿ ಶರ್ಮಿತಾ ಗೌಡ ಅವರು ಸದ್ಯ ತೆಲುಗು ಅಂಗಳದಲ್ಲಿ ಮಿಂಚುತ್ತಿದ್ದಾರೆ. ಅವಕಾಶ ಸಿಕ್ಕಾಗ ಮಾತ್ರವೇ ಕನ್ನಡ ಕಿರುತೆರೆಯಲ್ಲಿ ಇಣುಕಿ ನೋಡುತ್ತಿದ್ದಾರೆ.
ಖಳನಾಯಕಿಯಾದರೂ ಅಭಿಮಾನಿಗಳನ್ನು ಗೆಲ್ಲಬಹುದು. ವಿಲನ್ ಪಾತ್ರದ ಮೂಲಕವೂ ಎಲ್ಲರ ಗಮನ ಸೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟ ನಟಿ ಶರ್ಮಿತಾ ಈಗ ಫಾರಿನ್ ಟ್ರಿಪ್‌ನಲ್ಲಿ ಇದ್ದಾರೆ.

ಭಾನುಮತಿ ಪಾತ್ರದಲ್ಲಿ ಮುಂದುವರಿದ ನಟಿ
ಕಿರುತೆರೆಯಲ್ಲಿ ಮುದ್ದಾಗಿ ಕಾಣುವ ಸ್ಟೈಲಿಷ್ ವಿಲನ್ ಶರ್ಮಿತಾ ಗೌಡ ಮಾಲ್ಡೀವ್ಸ್‌ನಲ್ಲಿ ಹಾಟ್ ಆಗಿ ಕಂಡಿದ್ದರು. ಚಿಕ್ಕಮಗಳೂರಿನ ಬೆಡಗಿ ನಟಿ ಶರ್ಮಿತಾ ಗೌಡ ಅವರು ತಮ್ಮ ನೆಗೆಟಿವ್ ರೋಲ್ ಮೂಲಕವೇ ಜನಪ್ರಿಯರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ 'ಗೀತಾ' ಧಾರಾವಾಹಿಯಲ್ಲಿ ಮಲತಾಯಿ ಭಾನುಮತಿ ಪಾತ್ರದಲ್ಲಿ ಮಿಂಚಿದ್ದರು. 'ಗೀತಾ' ಧಾರಾವಾಹಿಯು ಮುಕ್ತಾಯಗೊಂಡ ಬಳಿಕ ಫುಲ್ ಟೈಮ್ ತೆಲುಗು ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಶರ್ಮಿತಾ ಅವರು ಆಗಾಗ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲೂ ಭಾನುಮತಿ ಪಾತ್ರವನ್ನೇ ಮುಂದುವರೆಸಿದ್ದು, ವಿಲನ್ ಕಾವೇರಿ ಜೊತೆಗೆ ಕೈ ಜೋಡಿಸಿದ್ದಾರೆ. ಕಾವೇರಿಯ ಕ್ರೈಂ ಕೆಲಸಗಳಿಗೆ ಸಹಾಯ ಮಾಡುತ್ತಿದ್ದಾರೆ.
ಬ್ರಹ್ಮಮುಡಿಯಲ್ಲಿ ಮಿಂಚುತ್ತಿರುವ ನಟಿ
ಇನ್ನು ತೆಲುಗಿನ 'ಬ್ರಹ್ಮಮುಡಿ' ಧಾರಾವಾಹಿಯಲ್ಲಿ ಶರ್ಮಿತಾ ಗೌಡ ನಟಿಸುತ್ತಿದ್ದಾರೆ. 'ಬ್ರಹ್ಮಮುಡಿ' ಧಾರಾವಾಹಿಯಲ್ಲಿ ಶರ್ಮಿತಾ ಗೌಡ ಅವರು ರುದ್ರಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಮಯವನ್ನು ಹೈದರಾಬಾದ್‌ನಲ್ಲೇ ಕಳೆಯುತ್ತಾರೆ. ತಮ್ಮ ಪಾತ್ರದ ಮೂಲಕವೇ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ಶರ್ಮಿತಾ ಗೌಡ ತೆಲುಗು ಅಂಗಳದಲ್ಲಿ ಬ್ಯುಸಿಯಾಗಿದ್ದರೂ, ಶೂಟಿಂಗ್ ಸೆಟ್‌ನಲ್ಲಿ ಫ್ರೀ ಇದ್ದಾಗೆಲ್ಲಾ ರೀಲ್ಸ್ ಮಾಡುತ್ತಿರುತ್ತಾರೆ. ಅಲ್ಲಿನ ಸಹ ಕಲಾವಿದರೊಂದಿಗೆ ರೀಲ್ಸ್ ಮಾಡಿ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.
ಶರ್ಮಿತಾರನ್ನು ಮಿಸ್ ಮಾಡಿಕೊಳ್ಳುವ ಫ್ಯಾನ್ಸ್
ಶರ್ಮಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಅನೇಕರಿಗೆ ಇಷ್ಟವಾಗಿದೆ. ಸೀರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಂಡರೂ, ಸ್ಟೈಲಿಷ್ ಆಗಿ ಉಡುತ್ತಾರೆ. ಕನ್ನಡ ಅಭಿಮಾನಿಗಳು ಸದ್ಯ ಶರ್ಮಿತಾ ಅವರ ನಟನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿತ್ಯ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಆದಷ್ಟು ಬೇಗ ಶರ್ಮಿತಾ ಅವರಿಗೆ ಕನ್ನಡದ ಧಾರಾವಾಹಿಯಲ್ಲಿ ನಟಿಸಲು ಮತ್ತೆ ಅವಕಾಶ ಸಿಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಕಳೆದ ಬಾರಿ ಮಾಲ್ಡೀವ್ಸ್ ಗೆ ತೆರಳಿದ್ದ ನಟಿ ಶರ್ಮಿತಾ ಅವರು ಬೋಲ್ಡ್ ಆಗಿ ಫೋಟೋ ತೆಗೆಸಿಕೊಂಡಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಪಡ್ಡೆ ಹುಡುಗರ ಗಮನ ಸೆಳೆದಿದ್ದರು.
ಖಜಾಕಿಸ್ತಾನದಲ್ಲಿ ಹುಟ್ಟುಹಬ್ಬ ಆಚರಣೆ
ಇತ್ತೀಚೆಗಷ್ಟೇ ತೆಲುಗಿನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಶರ್ಮಿತಾ ಗೌಡ ಅವರು ವರ್ಸಟೈಲ್ ಆಕ್ಟರ್ ಎಂಬ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದು ಶರ್ಮಿತಾ ಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಶರ್ಮಿತಾ ಅವರ ಅಭಿಮಾನಿಗಳು, ಸಹಕಲಾವಿದರು ಸೇರಿದಂತೆ ಪ್ರತಿಯೊಬ್ಬರೂ ವಿಷ್ ಮಾಡಿದ್ದಾರೆ. ಹುಟ್ಟುಹಬ್ಬವನ್ನು ಈ ಬಾರಿ ಶರ್ಮಿತಾ ಅವರು ಭಾರತದ ಹೊರಗೆ ಆಚರಿಸಿಕೊಂಡಿದ್ದಾರೆ. ಖಜಾಕಿಸ್ತಾನಕ್ಕೆ ತೆರಳಿರುವ ನಟಿ ಶರ್ಮಿತಾ ಅವರು ಅಲ್ಲಿನ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











