Coastalwood: ಬಾಲಿವುಡ್‌ನಲ್ಲಿ ಮಾತ್ರವಲ್ಲ ನಮ್ಮಲ್ಲೂ ಇದ್ದಾರೆ ಕೋಲ್ಮಿಂಚಿನಂಥಹಾ ಶಿಲ್ಪಾ ಶೆಟ್ಟಿ
ಮೂಲತಃ ಮಂಗಳೂರು ಪುತ್ತೂರಿನವರಾದ ಶಿಲ್ಪಾ ಶೆಟ್ಟಿ ಕಿರುತೆರೆಯಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದಾರೆ. ಇದೀಗ ಮರಳಿ ನನಸಾಗಿದೆ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರು 'ನಾಗಕನ್ನಿಕೆ', 'ಎರಡು ಕನಸು', 'ರಾಜಾ ರಾಣಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದೀಗ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ವೈಷ್ಣವಿ ಪಾತ್ರ ಮಾಡುತ್ತಿದ್ದಾರೆ.
ಜೀವನದಲ್ಲಿ ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು, ಅದಕ್ಕೆ ಪ್ರಯತ್ನ ತುಂಬಾ ಮುಖ್ಯ. ಪ್ರಯತ್ನ ಇದ್ದರೆ ಯಾವುದೇ ಕ್ಷೇತ್ರದಲ್ಲಿಯಾದರೂ ಗುರಿ ಸಾಧಿಸಬಹುದು. ಹೀಗೆ ಪ್ರಯತ್ನದಿಂದಲೇ ಇಂದು ಯಶಸ್ಸು ಗಳಿಸಿ ಮಿಂಚುತ್ತಿರುವ ಈ ಚೆಂದುಳ್ಳಿ ಚೆಲುವೆಯ ಹೆಸರು ಶಿಲ್ಪಾ ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈ ಬೆಡಗಿ ಶಾಲಾ ದಿನಗಳಲ್ಲಿ ನಾಟಕದಲ್ಲಿ ಆಸಕ್ತಿ ಹೊಂದಿದ್ದರು.
ಹೈಸ್ಕೂಲ್ ಓದುತ್ತಿರುವಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಈಕೆ ಮುಂದೆ ಮೋಹನ್ ಸೋನಾ ಹಾಗೂ ಐಕೆ ಬೊಳುವಾರು ಅವರ ನಟನಾ ಗರಡಿಯಲ್ಲಿ ಪಳಗಿದರು. ಮಾತ್ರವಲ್ಲ ನಾಟಕದ ಕುರಿತಾದ ಎಲ್ಲಾ ತರಬೇತಿಯನ್ನು ಪಡೆದಿದ್ದರು. ಇವರಿಗೆ ನಾಟಕ ತರಬೇತಿ ನೀಡಿದ್ದರು. ಮೂರು ವರ್ಷದಲ್ಲಿ ಮೂರು ನಾಟಕಗಳಲ್ಲಿ ಅಭಿನಯಿಸಿದ ಶಿಲ್ಪಾ ಮಳೆಹಕ್ಕಿ , ಐನ್ ಸ್ಟೈನ್, ಚಂದ್ರಮ ವೃತ್ತಾಂತ ಮುಂತಾದ ನಾಟಕಗಳಲ್ಲಿ ಬಣ್ಣ ಹಚ್ಚಿದರು.

ಸಂಗೀತ, ನಾಟಕ, ನೃತ್ಯ ಅಭ್ಯಾಸ
ತದ ನಂತರ ಕ್ರಮೇಣ ಕಲೆಗಳ ಇತರ ಪ್ರಕಾರಗಳಾದ ಫಿಲ್ಮಿ ಡ್ಯಾನ್ಸ್ , ಸುಗಮ ಸಂಗೀತದತ್ತ ಇವರ ಆಸಕ್ತಿ ಹೊರಳಿತು.ಡ್ಯಾನ್ಸ್, ಸಂಗೀತ, ನಾಟಕದ ಜೊತೆಗೆ ಓದನ್ನು ಸರದೂಗಿಸಿಕೊಂಡು ಸಾಗುತ್ತಿದ್ದ ಚೆಂದುಳ್ಳಿ ಚೆಲುವೆಯ ಕಣ್ಣಿಗೆ ಮುಂದೆ ಬಿದ್ದುದೇ ಮಾಡೆಲಿಂಗ್! ಅದ್ಯಾವಾಗ ಮಾಡೆಲಿಂಗ್ ನಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರೋ ಆಗ ಮಿಸ್ ಇಂಡಿಯಾ ಸ್ಪರ್ಧೆಗೆ ಆಡಿಷನ್ ನಡೆಯುತ್ತಿತ್ತು. ಅದರಲ್ಲಿ ಭಾಗವಹಿಸಿದ ಶಿಲ್ಪಾ ಆಯ್ಕೆಯಾಗಲಿಲ್ಲ. ಆದರೆ ಧೃತಿಗೆಡದ ಶಿಲ್ಪಾ ಮುಂದೆ ಹಲವು ರ್ಯಾಂಪ್ ವಾಕ್, ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದರು. ಮುಂದೆ ಗುರಿ ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಿಸತೊಡಗಿದರು. ಮಾತ್ರವಲ್ಲ ಓದಿಗೆ ಬಾಯ್ ಹೇಳಿ ಮಹಾನಗರಿ ಬೆಂಗಳೂರಿಗೆ ಬಂದು ಸೆಟ್ಲ್ ಕೂಡಾ ಆದರು.

ಮಾಡೆಲಿಂಗ್ ಮಾಡಿದ್ದ ಬೆಡಗಿ
ಮಾಡೆಲಿಂಗ್ನತ್ತ ಚಿತ್ತ ಹರಿಸಿದ ಬೆಡಗಿ ನಂತರ ಬಣ್ಣದ ಲೋಕಕ್ಕೆ ಕಾಲಿಡುವ ದೃಢ ನಿರ್ಧಾರ ಮಾಡಿದ ಶಿಲ್ಪಾ ಒಂದಷ್ಟು ಆಡಿಶನ್ ಗಳಿಗೆ ಹೋಗಲಾರಂಭಿಸಿದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಗೆ ಆಯ್ಕೆ ಆದರು. ಎರಡು ಕನಸುವಿನಲ್ಲಿ ನಾಯಕಿ ಸಹಜ ಆಗಿ ಪಾತ್ರದಲ್ಲಿ ಕಾಣಿಸಿಕೊಂಡ ಶಿಲ್ಪಾ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಸಹಜ ಎನ್ನುವ ಸವಾಲಿನ ಪಾತ್ರದಲ್ಲಿ ನಟಿಸಿ ಜನಮನ ಗೆದ್ದಿರುವ ಶಿಲ್ಪಾ ಮುಂದೆ ತುಳು ಚಿತ್ರರಂಗ ಪ್ರವೇಶಿಸಿದರು.

ಕೋಸ್ಟಲ್‌ವುಡ್‌ನಲ್ಲೂ ನಟನೆ
ಗಿರ್ ಗಿಟ್ ಚಿತ್ರದ ಮೂಲಕ ಕೋಸ್ಟಲ್ ವುಡ್ ಗೆ ಕಾಲಿಟ್ಟ ಶಿಲ್ಪಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದು ಮಾತ್ರವಲ್ಲದೇ ತುಳುಜನರ ಮನಗೆದ್ದರು. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಶಿಲ್ಪಾ ಶೆಟ್ಟಿ ಈಗಾಗಲೇ ಹಿರಿತೆರೆಯಲ್ಲಿಯೂ ನಟಿಸಿದ್ದಾರೆ. ನ್ಯೂರಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಂದದ ಚೆಲುವೆ ರಮೇಶ್ ಅರವಿಂದ್ ನಿರ್ದೇಶನದ 100 ಚಿತ್ರದಲ್ಲಿಯೂ ನಟಿಸಿದ್ದಾರೆ. ಇದರ ಜೊತೆಗೆ ರಾಮಾಚಾರಿ 2.0 ಚಿತ್ರದಲ್ಲಿಯೂ ನಟಿಸಲಿರುವ ಶಿಲ್ಪಾ ಮಾರ್ಗಿಯಾಗಿ ಸಿನಿಪ್ರಿಯರನ್ನು ರಂಜಿಸಲಿದ್ದಾರೆ.

ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ನಟನೆ
ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸುವ ಮೂಲಕ ಮಗದೊಮ್ಮೆ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡುತ್ತಿರುವ ಶಿಲ್ಪಾ ಶೆಟ್ಟಿ ಬಣ್ಣದ ಬದುಕು ಕಲರ್ ಫುಲ್ ಆಗಲಿ ಎಂಬುದೇ ಹಾರೈಕೆ.


Click it and Unblock the Notifications











