Don't Miss!
- News
ಸಿ.ಡಿ ವಿಚಾರದಲ್ಲಿ ನಿಮ್ಮ ಪಾತ್ರ ಏನು?: ಡಿ.ಕೆ. ಶಿವಕುಮಾರ್ಗೆ ಈಶ್ವರಪ್ಪ ಪ್ರಶ್ನೆ
- Sports
Ranji Trophy: ಶ್ರೇಯಸ್ ಗೋಪಾಲ್ ಶತಕ: ಉತ್ತರಾಖಂಡ ವಿರುದ್ಧ 358 ರನ್ಗಳ ಬೃಹತ್ ಮುನ್ನಡೆ
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮರಳಿ ಮನಸಾಗಿದೆ' ಎಂದು ಕಿರುತೆರೆಯಲ್ಲಿ ಮೋಡಿ ಮಾಡಿದ ಸಹಜ ಸುಂದರಿ ಶಿಲ್ಪಾ ಶೆಟ್ಟಿ
ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
'ಮರಳಿ
ಮನಸಾಗಿದೆ'
ಧಾರಾವಾಹಿಯು
ಮುಕ್ತಾಯವಾಗಲಿದೆ.
ವಿಭಿನ್ನ
ಕಥೆಯ
ಮೂಲಕ
ಸೀರಿಯಲ್
ವೀಕ್ಷಕರ
ಮನ
ಸೆಳೆದಿದ್ದ
ಈ
ಧಾರಾವಾಹಿಯು
ಇತ್ತೀಚೆಗಷ್ಟೇ
ಯಶಸ್ವಿ
300
ಸಂಚಿಕೆ
ಪೂರೈಸಿತ್ತು.
ಪ್ರತಿ
ಸಂಚಿಕೆಯಲ್ಲೂ
ರೋಚಕ
ಟ್ವಿಸ್ಟ್
ಗಳ
ಮೂಲಕ
ವೀಕ್ಷಕರನ್ನು
ರಂಜಿಸುತ್ತಿದ್ದ
'ಮರಳಿ
ಮನಸಾಗಿದೆ'
ಧಾರಾವಾಹಿಯು
ಇದೀಗ
ಅರ್ಧದಲ್ಲಿಯೇ
ತನ್ನ
ಪಯಣವನ್ನು
ನಿಲ್ಲಿಸುತ್ತಿರುವುದು
ಬೇಸರದ
ಸಂಗತಿಯೇ
ಸರಿ.
ಅಂದ
ಹಾಗೇ
'ಮರಳಿ
ಮನಸಾಗಿದೆ'
ಧಾರಾವಾಹಿಯಲ್ಲಿ
ವೈಷ್ಣವಿ
ಪಾತ್ರಕ್ಕೆ
ಜೀವ
ತುಂಬುತ್ತಿರುವ
ಶಿಲ್ಪಾ
ಶೆಟ್ಟಿ
ದಕ್ಷಿಣ
ಕನ್ನಡ
ಜಿಲ್ಲೆಯ
ಪುತ್ತೂರಿನ
ಬೆಡಗಿ.
ಕಿರುತೆರೆ
ಜೊತೆಗೆ
ಹಿರಿತೆರೆಯಲ್ಲಿಯೂ
ನಟನಾ
ಕಂಪನ್ನು
ಪಸರಿಸುತ್ತಿರುವ
ಶಿಲ್ಪಾ
ಶೆಟ್ಟಿ
ಶಾಲಾ
ದಿನಗಳಲ್ಲಿ
ನಾಟಕರಂಗದಲ್ಲಿ
ಗುರುತಿಸಿಕೊಂಡ
ಪ್ರತಿಭೆ.
ಮತ್ತೊಮ್ಮೆ
ರಿಯಾಲಿಟಿ
ಶೋವಿನಲ್ಲಿ
ಮೋಡಿ
ಮಾಡುತ್ತಿರೋ
'ಕಮಲಿ'
ನಟಿ
ಗೇಬ್ರಿಯೆಲಾ
ಸ್ಮಿತ್
ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಗಲೇ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶಿಲ್ಪಾ ಶೆಟ್ಟಿ ಮುಂದೆ ಐಕೆ ಬೊಳುವಾರು ಹಾಗೂ ಮೋಹನ್ ಸೋನಾ ಅವರಿಂದ ನಟನೆಯ ಬಗ್ಗೆ ಹೆಚ್ಚಿನ ತರಬೇತಿಯನ್ನು ಪಡೆದು ಮತ್ತಷ್ಟು ಪಕ್ವವಾದರು.

ರಂಗಭೂಮಿ ಕಲಾವಿದೆ ಶಿಲ್ಪಾ ಶೆಟ್ಟಿ
'ಮಳೆಹಕ್ಕಿ' , 'ಐನ್ ಸ್ಟೈನ್' ,'ಚಂದ್ರಮ ವೃತ್ತಾಂತ' ನಾಟಕಗಳಲ್ಲಿ ಬಣ್ಣ ಹಚ್ಚಿದ ಶಿಲ್ಪಾರನ್ನು ನಂತರ ಆಕರ್ಷಿಸಿದ್ದು ನೃತ್ಯ ಹಾಗೂ ಸಂಗೀತ. ನಾಟಕದ ಜೊತೆಗೆ ಫಿಲ್ಮಿ ಡ್ಯಾನ್ಸ್ ಹಾಗೂ ಸುಗಮ ಸಂಗೀತವನ್ನು ಕಲಿತ ಶಿಲ್ಪಾ ಶೆಟ್ಟಿ ನಂತರ ಮಾಡೆಲಿಂಗ್ ಜಗತ್ತಿನಲ್ಲಿ ಕಾಣಿಸಿಕೊಂಡಿದ್ದರು.

ಮಾಡೆಲಿಂಗ್ ಜಗತ್ತಿನಲ್ಲಿ ಮೋಡಿ ಮಾಡಿದ ಚೆಲುವೆ
ಮಾಡೆಲಿಂಗ್ ನತ್ತ ಮುಖ ಮಾಡಿದ ಶಿಲ್ಪಾ ಆಗಷ್ಟೇ ನಡೆಯುತ್ತಿದ್ದ ಮಿಸ್ ಇಂಡಿಯಾ ಸ್ಪರ್ಧೆಯ ಆಡಿಷನ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡರು. ಆದರೆ ಆಡಿಶನ್‌ನಲ್ಲಿ ಭಾಗವಹಿಸಿದ ಆಕೆ ಆಯ್ಕೆಯಾಗಲಿಲ್ಲ. ಆದರೆ ಮುಂದೆ ರಾಂಪ್ ವಾಕ್ ಹಾಗೂ ಫ್ಯಾಶನ್ ಶೋಗಳಲ್ಲಿ ಮಿಂಚಿದರು. ಮುಂದೆ ನಟನಾ ಜಗತ್ತಿಗೆ ಕಾಲಿಡುವ ನಿರ್ಧಾರ ಮಾಡಿದ ಶಿಲ್ಪಾ ಓದಿಗೆ ವಿದಾಯ ಹೇಳಿ ಬೆಂಗಳೂರಿಗೆ ಕಾಲಿಟ್ಟರು.

ಕೋಸ್ಟಲ್‌ವುಡ್‌ನಲ್ಲಿ ಬ್ಯುಸಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಗೆ ಆಯ್ಕೆ ಆದ ಶಿಲ್ಪಾ ಶೆಟ್ಟಿ ನಾಯಕಿ ಸಹಜ ಪಾತ್ರಕ್ಕೆ ಜೀವ ತುಂಬಿದರು. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿದ ಶಿಲ್ಪಾ ನಂತರ ಹಾರಿದ್ದು ಕೋಸ್ಟಲ್‌ವುಡ್‌ಗೆ. 'ಗಿರ್ ಗಿಟ್' ಎನ್ನುವ ತುಳು ಸಿನಿಮಾದಲ್ಲಿ ಅಭಿನಯಿಸಿದ್ದ ಶಿಲ್ಪಾ ಶೆಟ್ಟಿ ಮುಂದೆ ಕಾಣಿಸಿಕೊಂಡಿದ್ದು ಹಿರಿತೆರೆಯಲ್ಲಿ.

ಸಿನಿಮಾದಲ್ಲೂ ಚಿರಪರಿಚಿತ
'ನ್ಯೂರಾನ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಾಲಿಟ್ಟ ಈಕೆ ಮುಂದೆ ರಮೇಶ್ ಅರವಿಂದ್ ನಿರ್ದೇಶನದ 100 ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ' ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸಿರುವ ಈಕೆ ಕಿರುತೆರೆ ಹಿರಿತೆರೆ ಎರಡನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ.