ಕನ್ನಡದ ನಟರಿಗೆ ಶ್ರದ್ಧಾ ಶ್ರೀನಾಥ್ ಕೊಟ್ಟ ಸಲಹೆ ಇದು
Recommended Video

ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಕಳೆದ ವಾರ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ಶೃತಿ ಹರಿಹರನ್ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕುಮಾರ್ ಕೇಳಿದ ಪ್ರತಿ ಪ್ರಶ್ನೆಗೆ ಪಟ್ ಪಟ್ ಅಂತ ಇಬ್ಬರು ನಟಿಯರು ಉತ್ತರಿಸಿದರು. ಇನ್ನು ಇದೇ ವೇಳೆ ಕನ್ನಡದ ನಟರಿಗೆ ಶ್ರದ್ಧಾ ಒಂದೊಂದು ಸಲಹೆಯನ್ನು ನೀಡಿದರು.
ಅಂದಹಾಗೆ, ಶ್ರದ್ಧಾ ಈ ರೀತಿಯಾದ ಸಲಹೆಯನ್ನು ನಟರಿಗೆ ನೀಡಿದ್ದಾರೆ.
ಧ್ರುವ ಸರ್ಜಾ - ನಿಮ್ಮ ಫ್ಯಾನ್ಸ್ ಬೇರೆ ನಟ/ನಟಿಯರ ಬಗ್ಗೆ ಏನಾದರು ಮಾತನಾಡಿದರೆ, ರೇಗಿದರೆ ನೀವು ಮುಂದೆ ಬಂದು ಹಾಗೆ ಮಾಡಬಾರದು ಅಂತ ಹೇಳಿ

ಯಶ್ - ಗಡ್ಡ ಇಲ್ಲದೆ ಒಂದು ಸಿನಿಮಾ ಮಾಡಿ
ನೀನಾಸಂ ಸತೀಶ್ - ನಿಮಗೆ ಒಂದು ವರ್ಗದ ಪ್ರೇಕ್ಷಕರು ಇದ್ದಾರೆ ಅವರಿಗೆ ಗಮನಹರಿಸಿ ಸಿನಿಮಾ ಮಾಡಿ
ರಕ್ಷಿತ್ ಶೆಟ್ಟಿ - ಹೆಚ್ಚು ಸಿನಿಮಾವನ್ನು ನಿರ್ದೇಶನ ಮಾಡಿ
ಪುನೀತ್ ರಾಜ್ ಕುಮಾರ್ - ಪೃಥ್ವಿ ರೀತಿಯ ಮತ್ತೊಂದು ಸಿನಿಮಾ ಮಾಡಿ
ಶಿವರಾಜ್ ಕುಮಾರ್ - ನಮ್ಮ ಜೊತೆಗೆ ಒಂದು ಸಿನಿಮಾ ಮಾಡಿ
ಇದರ ಜೊತೆಗೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಒಂದು ಪ್ರಶ್ನೆ ಹೇಳಿದರು. ಕನ್ನಡದ ನಟರಾದ ''ಧ್ರುವ ಸರ್ಜಾ, ಯಶ್, ರಕ್ಷಿತ್ ಶೆಟ್ಟಿ, ಸತೀಶ್ ನೀನಾಸಂ ಮತ್ತು ಪುನೀತ್ ರಾಜ್ ಕುಮಾರ್ ಇವರ ಟ್ಯಾಲೆಂಟ್ ಪ್ರಕಾರ ರಾಂಕ್ ನೀಡಿ ಎಂದರು. ಆಗ ಶ್ರದ್ದಾ ಮೊದಲು ರಕ್ಷಿತ್ ಶೆಟ್ಟಿ ಹೆಸರನ್ನು ತೆಗೆದುಕೊಂಡರು. ಆ ಬಳಿಕ ಯಶ್, ಪುನೀತ್ ರಾಜ್ ಕುಮಾರ್, ಸತೀಶ್ ನೀನಾಸಂ ಮತ್ತು ಧ್ರುವ ಸರ್ಜಾ ಎಂದು ಉತ್ತರಿಸಿದರು. ಆಕ್ಷನ್ ಪ್ರಿನ್ಸ್ ಧ್ರುವಸರ್ಜಾಗೆ ಶ್ರದ್ಧಾ ಕೊನೆಯ ಸ್ಥಾನ ನೀಡಿದ್ದಾರೆ.


Click it and Unblock the Notifications











