»   » ರಕ್ಷಿತ್ ಶೆಟ್ಟಿ ತುಂಬ ಟ್ಯಾಲೆಂಟೆಡ್ ಎಂದ ಶ್ರದ್ಧಾ ಶ್ರೀನಾಥ್

ರಕ್ಷಿತ್ ಶೆಟ್ಟಿ ತುಂಬ ಟ್ಯಾಲೆಂಟೆಡ್ ಎಂದ ಶ್ರದ್ಧಾ ಶ್ರೀನಾಥ್

Posted By:
Subscribe to Filmibeat Kannada
ರಕ್ಷಿತ್ ಶೆಟ್ಟಿ ತುಂಬ ಟ್ಯಾಲೆಂಟೆಡ್ ಎಂದ ಶ್ರದ್ಧಾ ಶ್ರೀನಾಥ್ | Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಂದು ಕಡೆ ನಟನೆ ಮತ್ತು ಇನ್ನೊಂದು ಕಡೆ ನಿರ್ದೇಶನ ಎರಡು ವಿಭಾಗವನ್ನು ನಿಭಾಯಿಸಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾದ ಸೂಪರ್ ಸಕ್ಸಸ್ ನಂತರ 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ರಕ್ಷಿತ್ ಮಾಡುತ್ತಿದ್ದಾರೆ. ಇದರ ನಡುವೆ ಈಗ ರಕ್ಷಿತ್ ಶೆಟ್ಟಿ ಪ್ರತಿಭೆಯನ್ನು ನಟಿ ಶ್ರದ್ಧಾ ಶ್ರೀನಾಥ್ ಕೊಂಡಾಡಿದ್ದಾರೆ.

ಶ್ರದ್ದಾ ಶ್ರೀನಾಥ್ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿ ಬಗ್ಗೆ ಶ್ರದ್ಧಾ ಶ್ರೀನಾಥ್ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಒಂದು ಪ್ರಶ್ನೆ ಹೇಳಿದರು. ಕನ್ನಡದ ನಟರಾದ ''ಧ್ರುವ ಸರ್ಜಾ, ಯಶ್, ರಕ್ಷಿತ್ ಶೆಟ್ಟಿ, ಸತೀಶ್ ನೀನಾಸಂ ಮತ್ತು ಪುನೀತ್ ರಾಜ್ ಕುಮಾರ್ ಇವರ ಟ್ಯಾಲೆಂಟ್ ಪ್ರಕಾರ ರಾಂಕ್ ನೀಡಿ ಎಂದರು. ಆಗ ಶ್ರದ್ದಾ ಮೊದಲು ರಕ್ಷಿತ್ ಶೆಟ್ಟಿ ಹೆಸರನ್ನು ತೆಗೆದುಕೊಂಡರು.

Actress Shraddha Srinath spoke about Rakshit Shetty in No1 yari with Shivanna program

ಹೀರೋ ಮಾತ್ರವಲ್ಲ ಇವರು ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಗಳು!

ಆ ಬಳಿಕ ಯಶ್, ಪುನೀತ್ ರಾಜ್ ಕುಮಾರ್, ಸತೀಶ್ ನೀನಾಸಂ ಮತ್ತು ಧ್ರುವ ಸರ್ಜಾ ಎಂದು ಉತ್ತರಿಸಿದರು. ಆಕ್ಷನ್ ಪ್ರಿನ್ಸ್ ಧ್ರುವಸರ್ಜಾಗೆ ಶ್ರದ್ಧಾ ಕೊನೆಯ ಸ್ಥಾನ ನೀಡಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಶ್ರದ್ಧಾ ರಕ್ಷಿತ್ ಶೆಟ್ಟಿಗೆ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿ ಎಂಬ ಸಲಹೆ ನೀಡಿದರು.

ರಿಷಿ ಜೊತೆ 'ಯೂ ಟರ್ನ್' ಹುಡುಗಿ ಶ್ರದ್ಧಾ ಶ್ರೀನಾಥ್ ನೈಟ್ ಔಟ್

English summary
Actress Shraddha Srinath spoke about Rakshit Shetty in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X