ರಮ್ಯಾಗೆ ಹೊಸ ಬಿರುದು ಕೊಟ್ಟ ಶ್ರದ್ಧಾ ಶ್ರೀನಾಥ್
Recommended Video

ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಬರಬೇಕು, ಯಾಕೆಂದ್ರೆ, ರಮ್ಯಾ ನಂತರ ಆ ರೀತಿಯ ಒಬ್ಬ ನಟಿ ಇದುವರೆಗೆ ಕನ್ನಡ ಚಿತ್ರರಂಗಕ್ಕೆ ಸಿಕ್ಕಿಲ್ಲ ಎಂಬುದು ಅನೇಕರ ಮಾತಾಗಿದೆ. 10 ವರ್ಷ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆದಿದ್ದ ರಮ್ಯಾಬಳಿಕ ರಾಜಕೀಯಕ್ಕೆ ಹೊದರು. ಇನ್ನು ಇದೀಗ ಕನ್ನಡದ ಮತ್ತೊಬ್ಬ ನಟಿ ಶ್ರದ್ಧಾ ಶ್ರೀನಾಥ್ ರಮ್ಯಾಗೆ 'ಬಾಸ್' ಎಂಬ ಬಿರುದು ನೀಡಿದ್ದಾರೆ.
ನಟಿ ಶ್ರದ್ಧಾ ಶ್ರೀನಾಥ್ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಶಿವರಾಜ್ ಕುಮಾರ್ ಒಂದು ಪ್ರಶ್ನೆ ಕೇಳಿದರು. ಈ ಹಿರೋಯಿನ್ ಗಳಿಗೆ ಯಾವ ಬಿರುದು ನೀಡುತ್ತೀರಾ? ಎಂದು ನಾಲ್ಕು ನಟಿಯರ ಹೆಸರನ್ನು ಹೇಳಿದರು. ಆಗ ನಟಿಯರಿಗೆ ಶ್ರದ್ಧಾ ಹೊಸ ಟೈಟಲ್ ಕೊಟ್ಟರು.

ರಮ್ಯಾ - ಬಾಸ್
ರಕ್ಷಿತಾ - ಸೈರನ್
ರಾಧಿಕಾ ಕುಮಾರಸ್ವಾಮಿ - ವಂಡಲ್ ಫುಲ್ ಡ್ಯಾನ್ಸರ್
ಮಾಲಾಶ್ರೀ - ಪುಲರ್ ಆಫ್ ಆಡಿಯನ್ಸ್
''ರಮ್ಯಾ ಕನ್ನಡ ಇಂಡಸ್ಟ್ರಿಯ ಬಾಸ್, ರಕ್ಷಿತಾ ಅವರ ಸುಂಟರಗಾಳಿ ಹಾಡು ಕೇಳಿದ್ದೇನೆ ಅವರು ಸೈರನ್ ಇದ್ದ ಹಾಗೆ, ರಾಧಿಕಾ ಕುಮಾರಸ್ವಾಮಿ ಅವರು ವಂಡಲ್ ಫುಲ್ ಡ್ಯಾನ್ಸರ್ ಮತ್ತು ಮಾಲಾಶ್ರೀ ಒಂದು ಕಾಲದಲ್ಲಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವ ಶಕ್ತಿ ಹೊಂದಿದ್ದ ನಟಿ (ಪುಲರ್ ಆಫ್ ಆಡಿಯನ್ಸ್)'' ಎಂದು ಶ್ರದ್ಧಾ ಹೇಳಿದರು.


Click it and Unblock the Notifications











