ರಿಷಿ ಜೊತೆ 'ಯೂ ಟರ್ನ್' ಹುಡುಗಿ ಶ್ರದ್ಧಾ ಶ್ರೀನಾಥ್ ನೈಟ್ ಔಟ್
Recommended Video

ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಸಿನಿಮಾದ ನಂತರ ಕಾಲಿವುಡ್ ಸಿನಿಮಾ ಮಾಡಿದರು. ಆ ಸಿನಿಮಾದ ನಂತರ ಇದೀಗ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಟ್ಯಾಲೆಂಟ್ ಮೂಲಕ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಇಂತಹ ನಟಿ ಶ್ರದ್ಧಾ ಶ್ರೀನಾಥ್ ಇದೀಗ ನಟ ರಿಷಿ ಜೊತೆಗೆ ನೈಟ್ ಔಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಶ್ರದ್ಧಾ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಶಿವರಾಜ್ ಕುಮಾರ್ ಒಂದು ಪ್ರಶ್ನೆ ಕೇಳಿದರು. ಡೇಟ್, ಮ್ಯಾರಿಜ್ ಮತ್ತು ನೈಟ್ ಔಟ್ ಗೆ ಯಾವ ಕನ್ನಡ ನಟರನ್ನು ಆಯ್ಕೆ ಮಾಡುತ್ತೀರಾ ಎಂದರು. ಆಗ ಶ್ರದ್ಧಾ ನಾನು ರಕ್ಷಿತ್ ಶೆಟ್ಟಿ ಜೊತೆಗೆ ಟೇಟಿಂಗ್, ಸುದೀಪ್ ಸರ್ ಜೊತೆಗೆ ಮ್ಯಾರೆಜ್ ಹಾಗೂ ರಿಷಿ ಜೊತೆಗೆ ನೈಟ್ ಔಟ್ ಹೋಗುತ್ತೇನೆ ಎಂದರು. ಅಂದಹಾಗೆ, ಶ್ರದ್ಧಾ ಶ್ರೀನಾಥ್ ಅವರ 'ಆಪರೇಷ್ ಅಲಮೇಲಮ್ಮ' ಸಿನಿಮಾದಲ್ಲಿ ರಿಷಿ ನಾಯಕನಾಗಿ ನಟಿಸಿದ್ದರು. ಇದುವರೆಗೆ ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಸಿನಿಮಾದಲ್ಲಿ ಶ್ರದ್ಧಾಗೆ ನಟಿಸುವ ಅವಕಾಶ ಸಿಕ್ಕಿಲ್ಲ.

ಇನ್ನು ಇದೇ ಕಾರ್ಯಕ್ರಮದಲ್ಲಿ ಶ್ರದ್ದಾಗೆ ''ಶಿವಣ್ಣ ಶೃತಿ ಹರಿಹರನ್ ಅವರ ಯಾವ ಸಿನಿಮಾವನ್ನು ನೀವು ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು?'' ಎಂದು ಕೇಳಿದರು. ಆಗ ಶ್ರದ್ಧಾ 'ಗೋಧಿ ಬಣ್ಣ ಸಾದಾರಣ ಮೈ ಕಟ್ಟು' ಎಂದು ಹೇಳಿದರು. 'ಗೋಧಿ ಬಣ್ಣ ಸಾದಾರಣ ಮೈ ಕಟ್ಟು' ಸಿನಿಮಾದ ಮೂಲಕ ಶೃತಿ ಒಳ್ಳೆಯ ಹೆಸರು ಮಾಡಿದ್ದರು. ಸೋ, ಆ ಸಿನಿಮಾದ ಪಾತ್ರ ಶ್ರದ್ದಾಗೆ ಕೂಡ ತುಂಬ ಇಷ್ಟ ಆಗಿದೆಯಂತೆ.


Click it and Unblock the Notifications











