Shruthi Ramesh: 'ಲಕ್ಷಣ' ಧಾರಾವಾಹಿಗೆ 500 ರ ಸಂಭ್ರಮ.. ಸಂತಸ ಹಂಚಿಕೊಂಡ ಮಿಲಿ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯು ಯಶಸ್ವಿ 500 ಸಂಚಿಕೆ ಪೂರೈಸಿದೆ. ಬಣ್ಣ ಹಾಗೂ ಗುಣದ ನಡುವಿನ ವ್ಯತ್ಯಾಸವನ್ನು ತೋರಿಸುವ 'ಲಕ್ಷಣ' ಧಾರಾವಾಹಿಯು ತನ್ನದೇ ಆದ ಅಭಿಮಾನಿ ವರ್ಗವನ್ನು ಕೂಡಾ ಹೊಂದಿದೆ.

ದಿನದಿಂದ ದಿನಕ್ಕೆ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ನೀಡುತ್ತಾ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿರುವ ಲಕ್ಷಣ ಧಾರಾವಾಹಿಯನ್ನು ಮೊದಲ ಸಂಚಿಕೆಯಿಂದಲೇ ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

Lakshana-Shruthi Ramesh

ಸಂತಸ ಹಂಚಿಕೊಂಡ ಶ್ರುತಿ ರಮೇಶ್

'ಲಕ್ಷಣ' ಧಾರಾವಾಹಿಯಲ್ಲಿ ನಾಯಕಿ ಖಳನಾಯಕಿ ಶ್ವೇತಾಳ ಪರ್ಸನಲ್ ಅಸಿಸ್ಟೆಂಟ್ ಮಿಲಿ ಆಗಿ ಅಭಿನಯಿಸುತ್ತಿರುವ ಶ್ರುತಿ ರಮೇಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. "ನಮ್ಮ ಧಾರಾವಾಹಿ ಲಕ್ಷಣ ಯಶಸ್ವಿ 500 ಸಂಚಿಕೆ ಪೂರೈಸಿದೆ. ತುಂಬಾ ಖುಷಿಯಾಗುತ್ತಿದೆ. ಮಾತ್ರವಲ್ಲ ನಮ್ಮ ಧಾರಾವಾಹಿ 500 ಸಂಚಿಕೆ ಪೂರೈಸಿದೆ ಎಂಬುದನ್ನು ನಂಬಲಾಗುತ್ತಿಲ್ಲ. ನಿನ್ನೆ ಮೊನ್ನೆಯಷ್ಟೇ ಧಾರಾವಾಹಿ ಆರಂಭವಾಗಿದೆ ಎಂದೆನಿಸುತ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ ಶ್ರುತಿ ರಮೇಶ್.

ವೀಕ್ಷಕರ ಪ್ರೋತ್ಸಾಹ ಕಾರಣ

"ನಾವಿಂದು ಯಶಸ್ವಿ 500 ಸಂಚಿಕೆ ಪೂರೈಸಿ ಮುನ್ನುಗುತ್ತಿದ್ದೇವೆ ಎಂದರೆ, ಅದಕ್ಕೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಅವರು ಬೆಂಬಲದಿಂದಲೇ ಇದೆಲ್ಲಾ ಸಾಧ್ಯವಾಯಿತು. ವಿಭಿನ್ನ ಕಥಾಹಂದರವುಳ್ಳ ಈ ಧಾರಾವಾಹಿಯನ್ನು ವೀಕ್ಷಕರು ಕೂಡಾ ಮೆಚ್ಚಿಕೊಂಡಿದ್ದಾರೆ. ಇನ್ನು ಇದರ ಜೊತೆಗೆ ಪ್ರತಿ ಸಂಚಿಕೆಯಲ್ಲಿಯೂ ವಿಭಿನ್ನವಾದ ಟ್ವಿಸ್ಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ 'ಲಕ್ಷಣ' ಧಾರಾವಾಹಿಯ ತಂಡ ಯಶಸ್ವಿಯಾಗಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ಶ್ರುತಿ ರಮೇಶ್.

Lakshana-Shruthi Ramesh

ತಮಿಳಿ‌ನಲ್ಲಿ ಮೋಡಿ ಮಾಡುತ್ತಿರುವ ಲಕ್ಷಣ

"ನಮ್ಮ ಲಕ್ಷಣ ಧಾರಾವಾಹಿಯು ಒಡಿಯಾ ಭಾಷೆಗೆ ಡಬ್ ಆಗಿ ಪ್ರಸಾರಗೊಳ್ಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರವೇ. ಇದೀಗ ಇದರ ಜೊತೆಗೆ ತಮಿಳು ಭಾಷೆಗೂ ಇದಿ ಡಬ್ ಆಗುತ್ತಿರುವುದು ನಿಜವಾಗಿಯೂ ಖುಷಿ ನೀಡಿದೆ. ಇದರಿಂದಾಗಿ ನಾವು ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಳ್ಳವಂತಾಗಿದೆ. ಜೊತೆಗೆ ಪರಿಭಾಷೆಯ ವೀಕ್ಷಕರನ್ನು ಲಕ್ಷಣ ಧಾರಾವಾಹಿಯ ಮೂಲಕ ರಂಜಿಸುತ್ತಿರುವುದಕ್ಕೆ ಖುಷಿಯಿದೆ" ಎನ್ನುತ್ತಾರೆ ಶ್ರುತಿ ರಮೇಶ್ .

ಪೋಷಕ ಪಾತ್ರಗಳ ಮೂಲಕ ಮೋಡಿ

ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಶ್ರುತಿ ರಮೇಶ್‌ಗೆ ಹೆಸರು ತಂದುಕೊಟ್ಟಿದ್ದು 'ಪಾಪಾ ಪಾಂಡು 2' ಧಾರಾವಾಹಿ. ಪಾಪಾ ಪಾಂಡುವಿನಲ್ಲಿ ನಿಮ್ಮಿಯಾಗಿ ನಟಿಸಿದ ಶ್ರುತಿ ರಮೇಶ್ ಸದ್ಯ ಮಿಲಿಯಾಗಿ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಫ್ಯಾಕ್ ಸಿನಿಮಾದ ಮೂಲಕ ಹಿರಿ ತೆರೆಗೆ ಕಾಲಿಟ್ಟ ಶ್ರುತಿ ರಮೇಶ್ ಮುಂದೆ 'ಶುಗರ್ ಲೆಸ್', 'ಸಿರಿ ಲಂಬೋದರ ವಿವಾಹ', 'ಜೆರ್ಸಿ ನಂ 1' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ 'ದೊಂಬ್ರಾಟ' ಮತ್ತು 'ಒರಿಜಿನಲ್ ಚಾಯ್ಸ್' ಎನ್ನುವ ವೆಬ್ ಸಿರೀಸ್‌ನಲ್ಲಿ ಶ್ರುತಿ ರಮೇಶ್ ಕಮಾಲ್ ಮಾಡಿದ್ದಾರೆ.

More from Filmibeat

English summary
Actress Shruthi Ramesh celebrating 500th anniversary of Lakshana serial, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X